ಕಡಬ: ತಮಿಳುನಾಡಿನ ಕೊಯಂಬತ್ತೂರು ಮದ್ರಾಸ್ ರೆಜಿಮೆಂಟ್‌ನಲ್ಲಿ ಕರ್ತವ್ಯದಲ್ಲಿದ್ದ ಕಡಬ ತಾಲೂಕಿನ ಯೋಧರೊಬ್ಬರು ಹೃದಯಾಘಾತದಿಂದ ಮೃತಪಟ್ಟ ಘಟನೆ ನಡೆದಿದೆ.
ಕುಟ್ರುಪ್ಪಾಡಿ ತರಪೇಳ್ ನಿವಾಸಿ ಜೋನಿ ಅವರ ಪುತ್ರ ಲಿಜೇಶ್ ಕುರಿಯನ್ ಮೃತ ಯೋಧ. ಲಿಜೇಶ್ ಅವರು ಪತ್ನಿ ಜೋಮಿತಾ, ಒಂದು ವರ್ಷದ ಮಗುವನ್ನು ಅಗಲಿದ್ದಾರೆ.
ಲಿಜೇಶ್ ಅವರ ಪಾರ್ಥಿವ ಶರೀರ ಇಂದು ಕಡಬಕ್ಕೆ ತಲುಪಲಿದ್ದು, ಅಂತ್ಯ ಸಂಸ್ಕಾರ ವಿಧಿ ವಿಧಾನವು ಕುಟ್ರುಪ್ಪಾಡಿ ಸಂತ ಮೇರೀಸ್ ಕ್ಯಾಥೋಲಿಕ್ ಫೋರೋನಾ ದೇವಾಲಯದಲ್ಲಿ ನಡೆಯಲಿದೆ ಎಂದು ತಿಳಿದು ಬಂದಿದೆ.