Tuesday, April 23, 2024

23 ಪ್ರಕರಣಗಳಲ್ಲಿ ಬೇಕಾಗಿದ್ದ ಮೋಸ್ಟ್ ವಾಟೆಂಡ್ ಆರೋಪಿ ಆರೆಸ್ಟ್‌

ಮಂಗಳೂರು: 23 ಪ್ರಕರಣಗಳಲ್ಲಿ ಬೇಕಾಗಿದ್ದ ಮೋಸ್ಟ್ ವಾಟೆಂಡ್ ವಾರಂಟ್ ಆರೋಪಿಯನ್ನ ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.

ಬಂಧಿತ ಆರೋಪಿ ಅಜರುದ್ದೀನ್ ಅಲಿಯಾಸ್ ಅಜರ್ (ನಾಥು) ಕೃಷ್ಣಾಪುರ, ಕಾಟಿಪಳ್ಳ ಗ್ರಾಮದವನಾಗಿದ್ದು, ಈತನ ಮೇಲೆ ಮಂಗಳೂರು ನಗರ, ದಕ್ಷಿಣ ಕನ್ನಡ ಜಿಲ್ಲೆ ಹಾಗೂ ಉಡುಪಿ ಜಿಲ್ಲೆಯ ವಿವಿಧ ಪೊಲೀಸ್ ಠಾಣೆಗಳಲ್ಲಿ ಒಟ್ಟು 23 ಪ್ರಕರಣಗಳಲ್ಲಿ ಜಾಮೀನು ರಹಿತ ವಾರಂಟ್ ಇದೆ.

ಮಂಗಳೂರು ಪೊಲೀಸು ಆಯುಕ್ತರ ಆದೇಶದ ಮೇರೆಗೆ ಮಂಗಳೂರು ಉತ್ತರ ಉಪವಿಭಾಗದ ಸಹಾಯಕ ಆಯುಕ್ತರಾದ ಮನೋಜ್‌ ಕುಮಾರ್‌ರವರ ನಿರ್ದೇಶನದಂತೆ ಮಾರ್ಚ್ 22 ರಂದು ಸುರತ್ಕಲ್ ಪೊಲೀಸ್ ಠಾಣೆಯ ನಿರೀಕ್ಷಕರಾದ ಮಹೇಶ್‌ ಪ್ರಸಾದ್‌ ನೇತೃತ್ವದಲ್ಲಿ, ಉಪನಿರೀಕ್ಷಕರಾದ ಮಲ್ಲಿಕಾರ್ಜುನ್‌, ಸಿಬಂದಿಗಳಾದ ಅಜಿತ್ ಮ್ಯಾಥ್, ಮಣಿಕಂಠ, ಕಾರ್ತಿಕ್ ಅವರ ತಂಡ ಬಂಧಿಸಿದೆ.

ಮಂಗಳೂರು ನ್ಯಾಯಾಲಯದ ಮುಂದೆ ಹಾಜರುಪಡಿಸಲಾಗಿದ್ದು, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.

More from the blog

ಬಿಜೆಪಿ ಪಕ್ಷದಿಂದ ಮಾಜಿ ಸಚಿವ ಕೆ.ಎಸ್ ಈಶ್ವರಪ್ಪ ಉಚ್ಛಾಟನೆ

ಶಿವಮೊಗ್ಗ: ಮಾಜಿ ಉಪಮುಖ್ಯಮಂತ್ರಿ ಕೆ.ಎಸ್. ಈಶ್ವರಪ್ಪ ಅವರನ್ನು ಬಿಜೆಪಿ ಶಿಸ್ತು ಸಮಿತಿ ಸೋಮವಾರ ಪಕ್ಷದಿಂದ ಉಚ್ಚಾಟನೆ ಮಾಡಿದೆ. ಶಿಸ್ತು ಸಮಿತಿ ಅಧ್ಯಕ್ಷ ಲಿಂಗರಾಜು ಅವರು ಸೋಮವಾರ ಈಶ್ವರಪ್ಪ ಅವರನ್ನು ಆರು ವರ್ಷಗಳ ಕಾಲ...

ವಿಟ್ಲ ವಿಘ್ನೇಶ್ವರ ರೂಫಿಂಗ್ಸ್ & ಎಂಜಿನಿಯರಿಂಗ್ ವರ್ಕ್ಸ್, ಕ್ರೈನ್ ಸರ್ವೀಸ್ ಹಾಗೂ ಶ್ರೀ ವಿಘ್ನೇಶ್ವರ ಸ್ಟೀಲ್ಸ್ ಸ್ವಂತ ಕಟ್ಟಡಕ್ಕೆ ಸ್ಥಳಾಂತರ 

ವಿಟ್ಲ: ಕಳೆದ ಹಲವಾರು ವರುಷಗಳಿಂದ ವಿಟ್ಲ - ಪುತ್ತೂರು ರಸ್ತೆಯ ಮೇಗಿನ ಪೇಟೆಯಲ್ಲಿ ವ್ಯವಹಾರ ನಡೆಸುತ್ತಿದ್ದ ಶ್ರೀ ವಿಘ್ನೇಶ್ವರ ರೂಫಿಂಗ್ಸ್ & ಎಂಜಿನಿಯರಿಂಗ್ ವರ್ಕ್ಸ್, ಕ್ರೈನ್ ಸರ್ವೀಸ್ ಹಾಗೂ ಶ್ರೀ ವಿಘ್ನೇಶ್ವರ ಸ್ಟೀಲ್ಸ್...

ಚುನಾವಣೆಯಲ್ಲಿ ಆಧಾರರಹಿತವಾಗಿ ಕಡಿಮೆ ಪ್ರಮಾಣದಲ್ಲಿ ಕುಲಾಲರ ಮತದಾರರ ಸಂಖ್ಯೆ ತೋರಿಸಿರುವುದು ಬೇಸರದ ವಿಚಾರ-ಸದಾಶಿವ ಬಂಗೇರ

ಬಂಟ್ವಾಳ: ದ.ಕ.ಜಿಲ್ಲೆಯಲ್ಲಿ ಕುಲಾಲ ಯಾನೆ ಮೂಲ್ಯ ಸಮುದಾಯ ಗರಿಷ್ಠ ಪ್ರಮಾಣದಲ್ಲಿದ್ದು, ಮೂರನೇ ಅತಿ ಹೆಚ್ಚು ಮತದಾರರಿರುವ ಸಮುದಾಯವಾಗಿದೆ. ಜಿಲ್ಲೆಯ ನಿರ್ಣಾಯಯ ಸ್ಥಾನದಲ್ಲಿರುವ ಕುಲಾಲರ ಮತದಾರರ ಸಂಖ್ಯೆ ಅಂದಾಜು ೧.೮೪ ಲಕ್ಷವಾಗಿದೆ. ಆದರೆ ಚುನಾವಣೆಯ...

ಸರಪಾಡಿಯಲ್ಲಿ ನಡೆದ ಕಾಂಗ್ರೆಸ್ ಪ್ರಚಾರ ಸಭೆಯಲ್ಲಿ ಅಭ್ಯರ್ಥಿ ಪದ್ಮರಾಜ್ ಆರ್. ಪೂಜಾರಿ

ಬಂಟ್ವಾಳ: ಅಪಪ್ರಚಾರ ನಡೆಸುವವರಿಗೆ ಉತ್ತರ ನೀಡುವ ಅಗತ್ಯವಿಲ್ಲ. ನಮ್ಮ ಕೆಲಸವೇ ಅವರಿಗೆ ಉತ್ತರ ನೀಡಲಿದೆ ಎಂದು ಕಾಂಗ್ರೆಸ್ ಅಭ್ಯರ್ಥಿ ಪದ್ಮರಾಜ್ ಆರ್. ಪೂಜಾರಿ ಹೇಳಿದರು. ಮಣಿನಾಲ್ಕೂರು ವಲಯ ಕಾಂಗ್ರೆಸ್ ನೇತೃತ್ವದಲ್ಲಿ ಸರಪಾಡಿಯಲ್ಲಿ ನಡೆದ ಕಾಂಗ್ರೆಸ್...