Wednesday, April 10, 2024

ಏ.1ರಿಂದ ತಲಪಾಡಿ, ಹೆಜಮಾಡಿ, ಗುಂಡ್ಮಿ ಟೋಲ್ ಗೇಟ್‌ಗಳಲ್ಲಿ ಶುಲ್ಕ ಹೆಚ್ಚಳ

ಮಂಗಳೂರು: ತಲಪಾಡಿ, ಹೆಜಮಾಡಿ ಮತ್ತು ಗುಂಡ್ಮಿಯ ಮೂರು ಟೋಲ್ ಗೇಟ್‌ಗಳಲ್ಲಿ ಏಪ್ರಿಲ್ 1 ರಿಂದ ಪರಿಷ್ಕೃತ ಶುಲ್ಕವನ್ನು ಹೆಚ್ಚಿಸಲಾಗುವುದು ಎಂದು ನವಯುಗ ಉಡುಪಿ ಟೋಲ್‌ವೇ ಪ್ರೈವೇಟ್ ಲಿಮಿಟೆಡ್ ಪ್ರಕಟಣೆಯಲ್ಲಿ ತಿಳಿಸಿದೆ.

ಗುಂಡ್ಮಿ ಟೋಲ್ ಪ್ಲಾಜಾ:

ಕಾರು, ಜೀಪ್ ವ್ಯಾನ್ ಅಥವಾ ಲಘು ವಾಹನಗಳ ಗುಂಡ್ಮಿ ಟೋಲ್ ಪ್ಲಾಜಾದ ಏಕಮುಖ ಸಂಚಾರಕ್ಕೆ 60 ರೂ. ಮತ್ತು 85 ರೂ. (ಅದೇ ದಿನ ಹಿಂತಿರುಗಿದರೆ). ಮಾಸಿಕ ಪಾಸ್ ತಿಂಗಳಿಗೆ ಗರಿಷ್ಠ 50 ಬಾರಿ 1930 ರೂ. ಎಲ್‌ಸಿವಿ ಮತ್ತು ಮಿನಿ ಬಸ್‌ಗಳಿಗೆ ಏಕಮುಖ ಸಂಚಾರ ದರಗಳು 95 ರೂ. ಮತ್ತು ಒಂದೇ ದಿನದ ರಿಟರ್ನ್‌ಗೆ 140 ರೂ. ಮಾಸಿಕ ಪಾಸ್ ರೂ. 3120.ಆಗುತ್ತದೆ.

ಬಸ್‌ಗಳು ಮತ್ತು ಟ್ರಕ್‌ಗಳಿಗೆ ಏಕಮುಖ ಸಂಚಾರ 195 ರೂ. ಮತ್ತು ಅದೇ ದಿನ ಮರಳಿ ಬಂದರೆ ರೂ. 295 ಮಾಸಿಕ ಪಾಸ್‌ನ ಬೆಲೆ 6540 ರೂ. ಬಹು ಆಕ್ಸಲ್ ವಾಹನಗಳು ಮತ್ತು ಬೃಹತ್ ನಿರ್ಮಾಣ ಯಂತ್ರೋಪಕರಣಗಳನ್ನು ಹೊಂದಿರುವ ಭಾರೀ ವಾಹನಗಳಿಗೆ ಏಕಮುಖ ಸಂಚಾರ 310 ರೂ. ಮತ್ತು ದ್ವಿಮುಖಕ್ಕೆ 460 ರೂ. ವೆಚ್ಚವಾಗುತ್ತದೆ. ಮಾಸಿಕ ಪಾಸ್‌ನ ಬೆಲೆ 10255 ರೂ. ಆಗುತ್ತದೆ. ಮಿತಿ ಮೀರಿದ ಅಳತೆಯ(ಏಳು ಅಥವಾ ಅದಕ್ಕೂ ಹೆಚ್ಚು ಆಕ್ಸಲ್ ಗಳದ್ದು) ವಾಹನಗಳಿಗೆ ಏಕಮುಖ ಸಂಚಾರ 375 ರೂ. ಮತ್ತು ಅದೇ ದಿನ ಮರಳಿ ಬಂದರೆ 560 ಮತ್ತು ಮಾಸಿಕ ಪಾಸ್ 12,485 ರೂ. ಆಗಿರುತ್ತದೆ.

ಹೆಜಮಾಡಿ ಟೋಲ್ ಪ್ಲಾಜಾ:

ಕಾರು, ಜೀಪ್ ವ್ಯಾನ್ ಅಥವಾ ಲಘು ವಾಹನಗಳ ಹೆಜಮಾಡಿ ಟೋಲ್ ಪ್ಲಾಜಾದ ಪರಿಷ್ಕೃತ ದರಗಳು 50 ರೂ. (ಒನ್-ವೇ) ಮತ್ತು 75 ರೂ. (ಅದೇ ದಿನ ಹಿಂತಿರುಗಿದರೆ). ಮಾಸಿಕ ಪಾಸ್ ಒಂದು ತಿಂಗಳಲ್ಲಿ ಗರಿಷ್ಠ 50 ಬಾರಿ 1640 ರೂ. ಎಲ್‌ಸಿವಿ ಮತ್ತು ಮಿನಿ ಬಸ್‌ಗಳಿಗೆ ಒಂದು ಮಾರ್ಗದ ದರಗಳು 80 ರೂ. ಮತ್ತುಅದೇ ದಿನ ಮರಳಿ ಬಂದರೆ 120 ರೂ. ಮಾಸಿಕ ಪಾಸ್ 2655 ರೂ. ಬಸ್‌ಗಳು ಮತ್ತು ಟ್ರಕ್‌ಗಳಿಗೆ 165 ರೂ. ಮತ್ತು ಅದೇ ದಿನ ಮರಳಿ ಬಂದರೆ 250 ರೂ. ಮಾಸಿಕ ಪಾಸ್ ಬೆಲೆ 5560 ರೂ. ಬಹು ಆಕ್ಸಲ್ ಮತ್ತು ಬೃಹತ್ ನಿರ್ಮಾಣ ಯಂತ್ರೋಪಕರಣಗಳನ್ನು ಹೊಂದಿರುವ ಭಾರೀ ವಾಹನಗಳಿಗೆ ಏಕಮುಖ ಸಂಚಾರ 260 ರೂ. ಮತ್ತು ಅದೇ ದಿನ ಮರಳಿ ಬಂದರೆ 390 ರೂ. ವೆಚ್ಚವಾಗುತ್ತದೆ. ಮಾಸಿಕ ಪಾಸ್ ದರ 8720 ರೂ. ಮಿತಿ ಮೀರಿದ ಅಳತೆಯ(ಏಳು ಅಥವಾ ಅದಕ್ಕೂ ಹೆಚ್ಚು ಆಕ್ಸಲ್ ಗಳದ್ದು) ವಾಹನಗಳಿಗೆ 320 ರೂ. ಮತ್ತು ದ್ವಿಮುಖ ರೂ 480 ಮತ್ತು ಮಾಸಿಕ ಪಾಸ್ 10,615 ರೂ. ಆಗಿರುತ್ತದೆ.

ತಲಪಾಡಿ ಟೋಲ್ ಪ್ಲಾಜಾ:

ಕಾರು, ಜೀಪ್ ವ್ಯಾನ್ ಅಥವಾ ಲಘು ವಾಹನಗಳ ತಲಪಾಡಿ ಟೋಲ್ ಪ್ಲಾಜಾದ ಪರಿಷ್ಕೃತ ದರಗಳು 50 ರೂ. (ಒನ್-ವೇ) ಮತ್ತು 75 ರೂ.(ಅದೇ ದಿನ ಹಿಂದಿರುಗಿದರೆ). ಮಾಸಿಕ ಪಾಸ್ ಒಂದು ತಿಂಗಳಲ್ಲಿ ಗರಿಷ್ಠ 50 ಬಾರಿ 1720 ರೂ. ಎಲ್‌ಸಿವಿ ಮತ್ತು ಮಿನಿ ಬಸ್‌ಗಳಿಗೆ ಒಂದು ಮಾರ್ಗದ ದರಗಳು 80 ರೂ. ಮತ್ತು ಅದೇ ದಿನ ಮರಳಿ ಬಂದರೆ 120 ರೂ. ಮಾಸಿಕ ಪಾಸ್ 2655 ರೂ. ಬಸ್‌ಗಳು ಮತ್ತು ಟ್ರಕ್‌ಗಳಿಗೆ 165 ರೂ. ಮತ್ತು ಅದೇ ದಿನ ಮರಳಿ ಬಂದರೆ 245 ರೂ. ಮಾಸಿಕ ಪಾಸ್ ಬೆಲೆ 5420 ರೂ. ಬಹು ಆಕ್ಸಲ್ ಮತ್ತು ಬೃಹತ್ ನಿರ್ಮಾಣ ಯಂತ್ರೋಪಕರಣಗಳನ್ನು ಹೊಂದಿರುವ ಭಾರೀ ವಾಹನಗಳಿಗೆ ಏಕಮುಖ ಸಂಚಾರ ರೂ. 250 ಮತ್ತು ದ್ವಿಮುಖಕ್ಕೆ 370 ರೂ. ವೆಚ್ಚವಾಗುತ್ತದೆ. ಮಾಸಿಕ ಪಾಸ್‌ನ ಬೆಲೆ 8250 ರೂ. ಗಾತ್ರದ ವಾಹನಗಳಿಗೆ ಏಕಮುಖ ಸಂಚಾರ ಶುಲ್ಕಗಳು 320 ರೂ. ಮತ್ತು ಅದೇ ದಿನ ಮರಳಿ ಬಂದರೆ 480 ರೂ. ಮತ್ತು ಮಾಸಿಕ ಪಾಸ್ 10625 ರೂ. ಆಗಿರುತ್ತದೆ.

ಇನ್ನು 2023-24ನೇ ಸಾಲಿನ ಅವಧಿಗೆ ಎಲ್ಲಾ ಮೂರು ಟೋಲ್ ಪ್ಲಾಜಾದಿಂದ 20 ಕಿ.ಮೀ ಅಂತರದಲ್ಲಿ ವಾಸಿಸುವ ಸ್ಥಳೀಯ ವಾಣಿಜ್ಯೇತರ ವಾಹನಗಳಿಗೆ ಅನ್ವಯವಾಗುವ ಮಾಸಿಕ ಪಾಸಿನ ದರಗಳು ಪ್ರತಿ ಟೋಲ್ ಪ್ಲಾಜಾಕ್ಕೆ ತಿಂಗಳಿಗೆ 330 ರೂ. ಆಗಿರುತ್ತದೆ.

More from the blog

ಹಿತೈಷಿ ತರಬೇತಿ ಕೇಂದ್ರದ ಎಲ್ಲಾ ವಿದ್ಯಾರ್ಥಿಗಳು ಉತ್ತಮ ಫಲಿತಾಂಶದೊಂದಿಗೆ ತೇರ್ಗಡೆ

2023-24ನೇ ಸಾಲಿನ ದ್ವಿತೀಯ ಪಿ.ಯು.ಸಿ ಪರೀಕ್ಷೆಯಲ್ಲಿ ಪಾಣೆಮಂಗಳೂರು, ನರಿಕೊಂಬುವಿನಲ್ಲಿರುವ ಹಿತೈಷಿ ತರಬೇತಿ ಕೇಂದ್ರದ ಎಲ್ಲಾ ವಿದ್ಯಾರ್ಥಿಗಳು ಉತ್ತಮ ಅಂಕಗಳೊಂದಿಗೆ ತೇರ್ಗಡೆಯಾಗಿದ್ದಾರೆ. ಕು.ಕೀರ್ತನ ಶೇ.95.6% ಅಂಕಗಳೊಂದಿಗೆ ಅತ್ಯುತ್ತಮ ಶ್ರೇಣಿಯಲ್ಲಿ ತೇರ್ಗಡೆಯಾಗಿರುತ್ತಾರೆ ಎಂದು ಸಂಸ್ಥೆಯ ಪ್ರಕಟನೆಯಲ್ಲಿ ತಿಳಿಸಲಾಗಿದೆ. 2024-25ನೇ...

ಬಂಟ್ವಾಳದ ಉಳಿ ಗ್ರಾಮದಲ್ಲಿ ಮತದಾರರ ಮನೆಗೆ ಭೇಟಿ ನೀಡಿ ಮತಯಾಚನೆ ನಡೆಸಿದ ಶಾಸಕ ರಾಜೇಶ್ ನಾಯ್ಕ್

ಲೋಕ ಸಭಾ ಚುನಾವಣೆಯ ಹಿನ್ನಲೆಯಲ್ಲಿ ಕ್ಯಾ.ಬ್ರಿಜೇಶ್ ಚೌಟ ಅವರ ಗೆಲುವಿಗಾಗಿ ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿಗುತ್ತು ಅವರ ಗ್ರಾಮ,ಮನೆ,ಮನ ಅಭಿಯಾನದ ಅಂಗವಾಗಿ ಬಂಟ್ವಾಳದ ಉಳಿ ಗ್ರಾಮದಲ್ಲಿ ಮತದಾರರ ಮನೆಗೆ ಬೇಟಿ ನೀಡಿ...

ವಿಟ್ಲ ಕೇಂದ್ರ ಜುಮಾ ಮಸೀದಿ, ಈದುಲ್ ಫಿತರ್

ವಿಟ್ಲ; ವಿಟ್ಲ ಕೇಂದ್ರ ಜುಮಾ ಮಸೀದಿಯಲ್ಲಿ ಈದುಲ್ ಫಿತರ್ ನ್ನು ವಿಜೃಂಭಣೆಯಿಂದ ಆಚರಿಸಲಾಯಿತು. ಖತೀಬ್ ಮಹಮ್ಮದ್ ನಸೀಹ್ ದಾರಿಮಿ ಉಸ್ತಾದ್ ರವರು ಖುತುಬಾ ಹಾಗೂ ಈದ್ ನಮಾಝ್ ನಿರ್ವಹಿಸಿದರು. ಈದ್ ಸಂಸೇಶ ನೀಡಿದ ಖತೀಬರು "...

ನೋಟ ಮತದಾನ ಅಭಿಯಾನ ಮಾಡುವವರ ವಿರುದ್ಧ ಕಾನೂನು ಕ್ರಮಕ್ಕೆ ತಾ.ಪಂ.ಸದಸ್ಯ ಪ್ರಭಾಕರ್ ಪ್ರಭು ಒತ್ತಾಯ…

ನೋಟ (NOTA) ಮತದಾನ ಅಭಿಯಾನ ಮಾಡುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ಮಾಜಿ ತಾ.ಪಂ‌.ಸದಸ್ಯ ಪ್ರಭಾಕರ್ ಪ್ರಭು ಜಿಲ್ಲಾಧಿಕಾರಿಗೆ ಮನವಿ ಮಾಡಿದ್ದಾರೆ ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಕೆಲವೊಂದು ವ್ಯಕ್ತಿಗಳು ಮತ್ತು ಸಂಘಟನೆಗಳು...