Saturday, April 13, 2024

ನೆಟ್ಲ ಮುಡ್ನೂರು ಗ್ರಾ.ಪಂ ವ್ಯಾಪ್ತಿಯಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಶಿಲಾನ್ಯಾಸ ನೆರವೇರಿಸಿದ ಶಾಸಕ ರಾಜೇಶ್ ನಾಯ್ಕ್

ಬಂಟ್ವಾಳ: ನೆಟ್ಲಮುಡ್ನೂರು ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿಗುತ್ತು ಅವರು ಗುರುವಾರ ಶಿಲಾನ್ಯಾಸ ನೆರವೇರಿಸಿದರು.

10 ಲಕ್ಷ ರೂ ಅನುದಾನದ ರಾಮರೆಪಾಲು ಹೊಸಹೊಕ್ಲು ರಸ್ತೆ ಉದ್ಘಾಟನೆ, 30 ಲಕ್ಷ ಅನುದಾನದ ನಡುರ್ದಿಲ ತಡೆಗೋಡೆ, 2 ನೇ ವಾರ್ಡಿನ ಜನತಾ ಕಾಲನಿರಸ್ತೆ ಉದ್ಘಾಟನೆ, ಉರ್ದಿಲ ಕ್ರೀಡಾಂಗಣದ ಹೈ ಮಾಸ್ಕ್ ದೀಪ ಉದ್ಘಾಟನೆ, 13 ಲಕ್ಷ ವೆಚ್ಚದ ಕರಿಂಕ ಅಂಗನವಾಡಿ ಕೇಂದ್ರ ಉದ್ಘಾಟನೆ, 15 ಲಕ್ಷ ವೆಚ್ಚದ ಪಂತಡ್ಕ ಗುಂಡ್ಯ ಎಲ್ಕಾಜೆ ಪರಿಶಿಷ್ಠ ಪಂಗಡ ಕಾಲನಿ ರಸ್ತೆ ಕಾಂಕ್ರೀಟಿಕರಣ,10 ಲಕ್ಷ ಮಾದೇಲು ಮೀನಾವು ರಸ್ತೆಗೆ ಶಿಲಾನ್ಯಾಸ, 10ಲಕ್ಷ ಅನುದಾನದಲ್ಲಿ ಮೈಕೆ ಯಿಂದ ಏಮಾಜೆ ರಸ್ತೆ ಉದ್ಘಾಟನೆ, 50 ಲಕ್ಷ ವೆಚ್ಚದ ಏಮಾಜೆ ರಸ್ತೆಗೆ ಶಿಲಾನ್ಯಾಸ ,14ಲಕ್ಷ ವೆಚ್ಚದಲ್ಲಿ ನಿರ್ಮಾಣಗೊಂಡ ಕರಿಂಕ ಹೊಸ ಹೊಕ್ಲು ಕಾಲುಸಂಕ ಉದ್ಘಾಟನೆ, 10 ಲಕ್ಷದ ದಲ್ಲಿ ಕಾಂಕ್ರಿಟೀಕರಣಗೊಂಡ ನೇರಳಕಟ್ಟೆ ಕರ್ಲೆತ್ತಿಮಾರ್ ರಸ್ತೆಯನ್ನು ಹಾಗೂ ನೆಟ್ಲಮುಡ್ನೂರು ಗ್ರಾ.ಪಂ.ಕಚೇರಿ ಬಳಿ ನಿರ್ಮಾಣಗೊಂಡ ಜಲಜೀವನ್ ಮಿಷನ್ ಯೋಜನೆಯ ಮೇಲ್ ಸ್ತರದ ನೀರಿನ‌ಟ್ಯಾಂಕ್ ಅನ್ನು ಶಾಸಕರು‌ ಉದ್ಘಾಟಿಸಿದರು.

ನೆಟ್ಲ‌ಮುಡ್ನೂರು‌ ಗ್ರಾ.ಪಂ.ಅಧ್ಯಕ್ಷ ಸಚ್ಚಿದಾನಂದ, ಉಪಾಧ್ಯಕ್ಷೆ ಶಕೀಲಾ, ಅನಂತಾಡಿ ಗ್ರಾ.ಪಂ.ಸದಸ್ಯರಾದ ಸುಜಾತ, ಧನಂಜಯ, ಗ್ರಾ.ಪಂ.ಅಧ್ಯಕ್ಷ ಗಣೇಶ್ ಪೂಜಾರಿ, ವಿಟ್ಲ ಪಡ್ನೂರು ಬಿಜೆಪಿ ಶಕ್ತಿ ಕೇಂದ್ರದ ಅಧ್ಯಕ್ಷ ಸನತ್ ಕುಮಾರ್ ರೈ, ತನಿಯಪ್ಪ ಗೌಡ, ರವೀಂದ್ರ ರೈ, ಧನಲಕ್ಷ್ಮಿ ಪೂಜಾರಿ, ಪಿಡಿಓ ಅನುಷಾ, ವಿಟ್ಲ ಶಿಶು ಅಭಿವೃದ್ಧಿ ಯೋಜನಾಧಿಕಾರಿ ಉಷಾ, ಮೇಲ್ವಿಚಾರಕಿ ಸೋಮಕ್ಕ, ಅಂ.ಕಾರ್ಯಕರ್ತೆ ಯೋಗಿನಿ ಮೊದಲಾದವರು ಉಪಸ್ಥಿತರಿದ್ದರು.

More from the blog

ಮಯ್ಯರಬೈಲು: ಏ.14 ರಂದು ಸಾರ್ವಜನಿಕ ಶ್ರೀ ಸತ್ಯನಾರಾಯಣ ಪೂಜೆ ಹಾಗೂ ಯುಗಾದಿ ಉತ್ಸವ ಕಾರ್ಯಕ್ರಮ

ಮಾತೃಭೂಮಿ ಯುವ ಬಳಗ ಹಾಗೂ ಮಾತೃಭೂಮಿ ಮಹಿಳಾ ಮಂಡಳಿ ಮಯ್ಯರಬೈಲು ಇವರ ಜಂಟಿ ಅಶ್ರಯದಲ್ಲಿ ಚತುರ್ಥ ವರ್ಷದ ಸಾರ್ವಜನಿಕ ಶ್ರೀ ಸತ್ಯನಾರಾಯಣ ಪೂಜೆ ಹಾಗೂ ಯುಗಾದಿ ಉತ್ಸವ ಕಾರ್ಯಕ್ರಮ ಏ.14 ರಂದು ಮಯ್ಯರಬೈಲಿನಲ್ಲಿ...

ಇಂದಿನಿಂದ ಅಂಚೆ ಮತದಾನ ಪ್ರಾರಂಭ

ಇಂದಿನಿಂದ 85 ವರ್ಷ ಮೇಲ್ಪಟ್ಟ ಹಾಗೂ ವಿಶೇಷ ಚೇತನರಿಂದ ಅಂಚೆ ಮತದಾನ ನಡೆಯಲಿದೆ. ಏಪ್ರಿಲ್ 18ರವರೆಗೆ ಮನೆಯಿಂದಲೇ ಗೌಪ್ಯ ಮತದಾನಕ್ಕೆ ಅವಕಾಶ ಮಾಡಲಾಗಿದೆ. ಇಂದಿನಿಂದ ಏಪ್ರಿಲ್ 18ರವರೆಗೆ ಮನೆಯಿಂದಲೇ ಗೌಪ್ಯ ಮತದಾನಕ್ಕೆ ಅವಕಾಶವಿದೆ. ಬೆಂಗಳೂರು...

ಕುಮಾರಧಾರಾ ನದಿಯಲ್ಲಿ ಮೊಸಳೆ ಮೃತದೇಹ ಪತ್ತೆ

ಸುಬ್ರಹ್ಮಣ್ಯ: ಕುಮಾರಧಾರಾ ನದಿಯ ಪಂಜ – ಕಡಬ ಸಂಪರ್ಕ ರಸ್ತೆಯಲ್ಲಿ ಸಿಗುವ ಪುಳಿಕುಕ್ಕು ಸೇತುವೆಯ ಕೆಳಭಾಗದಲ್ಲಿ ಮೊಸಳೆಯ ಮೃತದೇಹ ಪತ್ತೆಯಾಗಿದೆ. ಶುಕ್ರವಾರ ನದಿಯ ಒಂದು ಬದಿಯ ನೀರಿನಲ್ಲಿ ಅಂದಾಜು 1.5 – 2 ವರ್ಷದ ಮೊಸಳೆಯ...

ವಿದ್ಯಾರ್ಥಿಗಳಿಗೆ ಜೀವನ ಕೌಶಲ್ಯ ಮತ್ತು ಯುವ ಸ್ಪಂದನ ಸಮಾಲೋಚನೆ ಸೇವೆಗಳ ಕುರಿತು ಕಾರ್ಯಕ್ರಮ

ಸರಕಾರಿ ಪ್ರಥಮ ದರ್ಜೆ ಕಾಲೇಜು ಬಂಟ್ವಾಳ ಕಾಮಾಜೆ ಇಲ್ಲಿ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಜನ ಆರೋಗ್ಯ ಕೇಂದ್ರ ಎಪಿಡಿಮಿಯೋಲಜಿ ವಿಭಾಗ ರಾಷ್ಟ್ರೀಯ ಮಾನಸಿಕ ಆರೋಗ್ಯ ಮತ್ತು ನರ ವಿಜ್ಞಾನ ಬೆಂಗಳೂರು,...