ಕೇಂದ್ರ ಮತ್ತು ರಾಜ್ಯ ಸರಕಾರಗಳ ಡಬಲ್ ಇಂಜಿನ್ ಸರಕಾರದ ಫಲವಾಗಿ ಬಂಟ್ವಾಳ ಕ್ಷೇತ್ರದಲ್ಲಿ ಸುಮಾರು 2 ಸಾವಿರ ಕೋಟಿ ರೂ ಗಳ ಮೂಲಕ ವಿವಿಧ ಅಭಿವೃದ್ಧಿ ಕಾರ್ಯಗಳನ್ನು ಮಾಡಲು ಸಾಧ್ಯವಾಯಿತು ಎಂದು ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿಗುತ್ತು ಅವರು ಹೇಳಿದರು.
ಅವರು ನಾವೂರ ಗ್ರಾಮದಲ್ಲಿ 3.33 ಕೋಟಿ ಅನುದಾನದ ಮೂಲಕ ವಿವಿಧ ಕಾಮಗಾರಿಗಳ ಉದ್ಘಾಟನೆ, ಶಿಲಾನ್ಯಾಸ ಮತ್ತು ಮಾರ್ಚ್ 12 ರಂದು ಬಂಟ್ವಾಳದಲ್ಲಿ ನಡೆಯುವ ವಿಜಯಸಂಕಲ್ಪ ಯಾತ್ರೆಯ ಬಗ್ಗೆ ಕಾರ್ಯಕರ್ತರ ಪೂರ್ವಭಾವಿ ಸಭೆಯನ್ನುದ್ದೇಶಿಸಿ ಮಾತನಾಡಿದರು. ಗ್ರಾಮದ ಕಟ್ಟಕಡೆಯ ಪ್ರತಿಯೊಬ್ಬರೂ ಅಭಿವೃದ್ಧಿಯಾದಾಗ ಮಾತ್ರ ದೇಶ ಬಲಿಷ್ಠವಾಗಿ ಬೆಳೆಯಲು ಸಾಧ್ಯವಾಗುತ್ತದೆ.ಈ ನಿಟ್ಟಿನಲ್ಲಿ ಜಾತ್ಯಾತೀತವಾಗಿ ಸರ್ವರ ಸರ್ವತೋಮುಖ ಅಭಿವೃದ್ಧಿಗೆ ನಮ್ಮ ಆಡಳಿತದ ಅವಧಿಯಲ್ಲಿ ಬಂಟ್ವಾಳ ಕ್ಷೇತ್ರದಲ್ಲಿ ಮಾಡಿದ್ದೇವೆ ಎಂದು ಅವರು ಹೇಳಿದರು.
ಆರೋಗ್ಯ, ಶೈಕ್ಷಣಿಕ, ಧಾರ್ಮಿಕ ಸಹಿತ ಎಲ್ಲಾ ಕ್ಷೇತ್ರದಲ್ಲಿ ನನಗೆ ಅವಕಾಶ ನೀಡಿದ ಮತದಾರರಿಗೆ ಅನ್ಯಾಯವಾಗದಂತೆ ಶಕ್ತಿ ಮೀರಿ ಪ್ರಯತ್ನ ಮಾಡಿದ್ದೇನೆ. ಬಂಟ್ವಾಳ ಕ್ಷೇತ್ರದಲ್ಲಿ ಬಿಜೆಪಿಗೆ ಗೆಲುವು ಸಾಧಿಸಿದ ಬಳಿಕ ಐದು ವರ್ಷಗಳಲ್ಲಿ ಅಭಿವೃದ್ಧಿ ಜೊತೆಗೆ ಯಾವುದೇ ಗಲಾಟೆ ಗೊಂದಲಗಳಿಲ್ಲದೆ, ಕ್ಷೇತ್ರದಲ್ಲಿ ಶಾಂತಿ ನೆಲೆಸುವ ಕೆಲಸಕ್ಕೆ ಹೆಚ್ಚಿನ ಒತ್ತುನೀಡಿದ್ದೇನೆ, ಇದಕ್ಕೆ ದೇವರ ಆಶ್ರೀರ್ವಾದ ಕ್ಷೇತ್ರದ ಜನತೆಯ ಸಹಕಾರ ಬಹಳಷ್ಡು ಸಿಕ್ಕಿದೆ ಎಂದು ಅವರು ಹೇಳಿದರು.
ಕ್ರೀಡಾ ಕ್ಷೇತ್ರದಲ್ಲಿ ವಿಶಿಷ್ಟ ಸಾಧನೆ ಮಾಡಿದ ಕನಪಾದೆ ಯುವಕರ ಬೇಡಿಕೆಯಂತೆ ಮುಂದಿನದಿನಗಳಲ್ಲಿ ಕನಪಾದೆಯಲ್ಲಿ ಹೈಟೆಕ್ ಕಬ್ಬಡ್ಡಿ ಕೋರ್ಟುನ್ನು ನಿರ್ಮಿಸಿಕೊಡುವ ಭರವಸೆ ನೀಡಿದರು. ಅಪಪ್ರಚಾರಕ್ಕೆ ಕಿವಿಗೊಡಬೇಡಿ, ಬಲಿಷ್ಠ ನಾಯಕತ್ವದ ಅಡಿಯಲ್ಲಿ ದೇಶ ಅಭಿವೃದ್ಧಿ ಹೊಂದುತ್ತಿದೆ. ಪಕ್ಷ ಬಲಿಷ್ಟವಾದಾಗ ಪ್ರತಿಯೊಬ್ಬ ಕಾರ್ಯಕರ್ತನೂ ಬಲಿಷ್ಟವಾಗುತ್ತಾನೆ .ಹಾಗಾಗಿ ಯಾವುದೇ ಗೊಂದಲಗಳಿದ್ದರೂ ಎಲ್ಲವನ್ನು ಬದಿಗಿಟ್ಟು ಪಕ್ಷದ ಬಲವರ್ಧನೆಗಾಗಿ ಜತೆಯಾಗಿ ಕೆಲಸ ಮಾಡಬೇಕು ಎಂದು ಅವರು ತಿಳಿಸಿದರು.
ಕೊರೊನಾ ಸಂದರ್ಭದಲ್ಲಿ ಸಂಕಷ್ಟದ ಅವಧಿಯಲ್ಲಿ ಜನರ ಸೇವೆ ಮಾಡಲು ಅವಕಾಶ ಸಿಕ್ಕಿದೆ. ಕೊರೊನಾ ಸಂಕಷ್ಟದ ಬಳಿಕ ಅರ್ಥಿಕ ವ್ಯವಸ್ಥೆಯಲ್ಲಿ ಜಗತ್ತಿನಲ್ಲಿ ಅತೀ ಎತ್ತರಕ್ಕೆ ಬೆಳೆದು ನಿಂತಿರುವುದಕ್ಕೆ ಕಾರಣ ಪ್ರಧಾನಿ ನರೇಂದ್ರ ಮೋದಿಯವರು ಎಂಬ ಸಂತಸ ನಮಗಿದೆ.
ಬೂಡ ಅಧ್ಯಕ್ಷ ದೇವದಾಸ್ ಬಂಟ್ವಾಳ ಮಾತನಾಡಿ, ಕಳೆದು ಐದು ವರ್ಷಗಳಲ್ಲಿ ಅಭಿವೃದ್ಧಿ ಜೊತೆಗೆ ಶಾಂತಿಯುತ ಬಂಟ್ವಾಳ ನಿರ್ಮಾಣವನ್ನು ಶಾಸಕ ರಾಜೇಶ್ ನಾಯ್ಕ್ ಮಾಡಿದ್ದಾರೆ ಎಂದು ಎದೆ ತಟ್ಟಿ ಹೇಳುಬಹುದು. ಕಾನೂನು ಬಾಹಿರ ಚಟುವಟಿಕೆಗಳನ್ನು ನಿಲ್ಲಿಸಲು ಅಧಿಕಾರಿಗಳಿಗೆ ಮುಕ್ತವಾದ ಅವಕಾಶವನ್ನು ಶಾಸಕರು ನೀಡಿದ ಪರಿಣಾಮವಾಗಿ ಇಂದು ಶಾಂತಿಯ ಬಂಟ್ವಾಳ ನಿರ್ಮಾಣವಾಗಿದೆ.
ನಾವೂರ 6 ಕೋಟಿ ಗಿಂತಲೂ ಹೆಚ್ಚಿನ ಅನುದಾನದ ಮೂಲಕ ಅಭಿವೃದ್ಧಿ ಕಾಮಗಾರಿಗಳನ್ನು ಮಾಡಲಾಗಿದೆ ಎಂದು ಅವರು ತಿಳಿಸಿದರು.
ದಿನಕ್ಕೊಂದರಂತೆ ರಸ್ತೆ ಅಭಿವೃದ್ಧಿ ಕಾರ್ಯಗಳು ಶಾಸಕ ರಾಜೇಶ್ ನಾಯ್ಕ್ ಅವರ ಶಾಸಕತ್ವದ ಅವಧಿಯಲ್ಲಿ ಮಾಡಲಾಗಿದೆ.
ಅಭಿವೃದ್ಧಿ ಮಾಡಿದ್ದೇನೆ ಎಂದು ಸುಳ್ಳು ಹೇಳಿ ಪ್ರಚಾರ ಮಾಡಿಕೊಂಡರೆ ಜನ ನಂಬುವುದಿಲ್ಲ ಎಂದು ಅವರು ಒತ್ತಿ ಹೇಳಿದರು.
ಜಿಲ್ಲಾ ಬಿಜೆಪಿ ಯುವಮೋರ್ಚಾ ಪ್ರಧಾನ ಕಾರ್ಯದರ್ಶಿ ಸುದರ್ಶನ ಬಜ, ನಾವೂರ ಗ್ರಾ.ಪಂ. ಸದಸ್ಯ ರಾದ ವಿಜಯಕುಮಾರ್, ಜನಾರ್ದನ ಕೊಂಬೆಟ್ಟು, ಇಂದಿರಾ, ನಾರಾಯಣ ಪ್ರಮುಖರಾದ ಶೀಲಾ, ಸದಾನಂದ ನಾವೂರ ಸ್ವಾಗತಿಸಿ ವಂದಿಸಿದರು.
ನಾವೂರು ಗ್ರಾಮದ ಅಭಿವೃದ್ಧಿಗಾಗಿ ರಾಜೇಶ್ ನಾಯ್ಕ್ ಅವರು 3.33 ಕೋಟಿ ಆನುದಾನ ನೀಡಿದ್ದಾರೆ.
1) ಫಲಾ೯ ಅಜ್ಜಮ್ಮಕೊಡಿ ರಸ್ತೆ ಅಭಿವೃದ್ಧಿ 20 ಲಕ್ಷ
2)ಮಲೆಬಾವು ಪೖೊಲೋಡಿ ರಸ್ತೆ ಅಭಿವೃದ್ಧಿ 25 ಲಕ್ಷ
3)ಕಲ್ತೊಡಿ ಬಡಗುಂಡಿ ರಸ್ತೆ ಅಭಿವೃದ್ಧಿ 15 ಲಕ್ಷ
4)ಕೊಂಬೇಟ್ಟು ಹಳೇಗೆಟು ರಸ್ತೆ ಅಭಿವೃದ್ಧಿ 10 ಲಕ್ಷ
5)ಕಡವಿನ ಬಳಿ ರಸ್ತೆ ಅಭಿವೃದ್ಧಿ 10 ಲಕ್ಷ
6)ಮೖಂದಾಳ ಕೋಟಿಪಾಲು ರಸ್ತೆ ಅಭಿವೃದ್ಧಿ 7 ಲಕ್ಷ
7)ಸೂರ ಪಕಳಬೇಟ್ಟು ರಸ್ತೆ ಅಭಿವೃದ್ಧಿ 1 ಲಕ್ಷ
8)ಕನಪಾದೆ ದೈವಸ್ದಾನ ಬಳಿ ತಡೆಗೋಡೆ 10 ಲಕ್ಷ
9)ಕನಪಾದೆ ದಾರಂದಕೋಡಿ ರಸ್ತೆ ಮರು ಡಾಮರಿಕರಣ 5 ಲಕ್ಷ
10)ಪಕಳಬೇಟ್ಟು ರಸ್ತೆ ಕಾಂಕ್ರೀಟ್ 15 ಲಕ್ಷ
11ಮೖಂದಾಳ ಪಕಳಬೇಟ್ಟು ರಸ್ತೆಗೆ ಮೋರಿ ಅಳವಡಿಕೆ 5 ಲಕ್ಷ
12)ಮೖಂದಾಳ ಪಕಳಬೇಟ್ಟು ರಸ್ತೆ ಅಭಿವೃದ್ಧಿ 40 ಲಕ್ಷ
13)ಕೆಮ್ಮಟ್ಟೆ ಬಳಿ ತಡೆಗೋಡೆ ರಚನೆ 40 ಲಕ್ಷ 14)ಬೋವಿನಪಾಡಿ ಹಿತ್ತಿಲು ರಸ್ತೆ ಅಭಿವೃದ್ಧಿ 10 ಲಕ್ಷ
15 )ಕೂಡಿಬೈಲು ಅಲಂಪುರಿ ರಸ್ತೆ ಅಭಿವೃದ್ಧಿ 10 ಲಕ್ಷ
16)ಪುರುಷರ ಕಟ್ಟೆ ರಸ್ತೆ ಅಭಿವೃದ್ಧಿ 15 ಲಕ್ಷ
17)ಕೂಡಿಬೈಲು ಪಡಿಲ್ ಬೆಟ್ಟು ರಸ್ತೆ ಅಭಿವೃದ್ಧಿ 17 ಲಕ್ಷ
18)ಸಿಂಥಾನಿಕಟ್ಟೆ ನೆಕ್ಕಿಲಾರು ರಸ್ತೆ ಅಭಿವೃದ್ಧಿ 10 ಲಕ್ಷ
20 )ಬೋವಿನಪಾಡಿ ಕ್ವಾಟ್ರಸ್ ರಸ್ತೆ ಅಭಿವೃದ್ಧಿ
21) ಅಲಂಪುರಿ ಹಾಲ್ದೆ ರಸ್ತೆ ಅಭಿವೃದ್ಧಿ 10 ಲಕ್ಷ
22)ಕೊಡಂಗೆ ಬಳಿ ತಡೆಗೋಡೆ ರಚನೆ 15 ಲಕ್ಷ
23)ಶ್ರೀ ವಿಷ್ಣು ಮೂತಿ೯ ನಾವೂರೇಶ್ವರ ದೇವಸ್ಥಾನ 8 ಲಕ್ಷ ಅನುದಾನ
24)ಶ್ರೀ ನಿತ್ಯಾನಂದ ಭಜನಾ ಮಂದಿರ ಹಳೇಗೆಟು 5 ಲಕ್ಷ
ಹಾಗು ಮಣಿಹಳ್ಳ ಸರಪಾಡಿ ರಸ್ತೆ ಅಗಳಿಕರಣಕ್ಕೆ 7 ಕೋಟಿ ಅನುದಾನ ಮತ್ತು ನಾವೂರು ಗ್ರಾಮದ ರೖತರ ಖಾತೆಗಳಿಗೆ ಕಿಸನ್ ಸಮ್ಮಾನ್ ನ ಒಟ್ಟು 22 ಲಕ್ಷ ದೊರಕಿದೆ.
ಪುಪಾಡಿ ಕಟ್ಟೆ ನೆಕ್ಕಿಪಾಡಿ ರಸ್ತೆ ಅಭಿವೃದ್ಧಿ 15 ಲಕ್ಷ ನೀಡಲಾಗಿದೆ.