ರಾಷ್ಟ್ರೀಯ ಚಿಂತನೆ, ಹಿಂದುತ್ವದ ಆಧಾರದಲ್ಲಿ ಬೆಳೆದು ಅಧಿಕಾರಕ್ಕೆ ಬಂದಿರುವ ಬಿಜೆಪಿ ಪಕ್ಷಕ್ಕೆ ಕಾರ್ಯಕರ್ತರೇ ಜೀವಾಳ ಎಂದು ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿಗುತ್ತು ಅವರು ತಿಳಿಸಿದರು.
ಅವರು ಸಂಗಬೆಟ್ಟು ಗ್ರಾಮಪಂಚಾಯತ್ ವ್ಯಾಪ್ತಿಯಲ್ಲಿ ರೂ.1 ಕೋಟಿ ಅನುದಾನದಲ್ಲಿ ನಡೆದ ಕಾಮಗಾರಿಗಳನ್ನು ಉದ್ಘಾಟನೆ ನಡೆಸಿದ ಬಳಿಕ ಕಾರ್ಯಕರ್ತರ ಸಭೆಯನ್ನು ಉದ್ದೇಶಿಸಿ ಮಾತನಾಡಿದರು.
ಸಂಗಬೆಟ್ಟು ಗ್ರಾ.ಪಂ.ಗೆ ಒಟ್ಟು 200 ಕೋಟಿಗಿಂತಲೂ ಹೆಚ್ಚಿನ ಅನುದಾನ ನೀಡಲಾಗಿದ್ದು, ಸಂಗಬೆಟ್ಟು ಗ್ರಾಮದಲ್ಲಿ 24 ಕೋಟಿ ರೂ ಗಿಂತಲೂ ಅಧಿಕ ವೆಚ್ಚದ ಅನೇಕ ಕಾಮಗಾರಿಗಳನ್ನು ನಡೆಸಲಾಗಿದೆ ಎಂದು ಅವರು ತಿಳಿಸಿದರು.
ಗ್ರಾಮಪಂಚಾಯತ್ ನ ವ್ಯಾಪ್ತಿಯಲ್ಲಿ ನಡೆದ ಅಭಿವೃದ್ಧಿ ಕಾರ್ಯಗಳನ್ನು ಜನರಿಗೆ ತಿಳಿಸುವ ಕೆಲಸವನ್ನು ಕಾರ್ಯಕರ್ತರು ಮಾಡಬೇಕು, ಜನರಿಗೆ ಸರಕಾರದ ಯೋಜನೆಗಳನ್ನು ತಿಳಿಸುವ ಜೊತೆಗೆ ಫಲಾನುಭವಿಗಳಿಗೆ ಸದುಪಯೋಗ ಪಡಿಸಿಕೊಳ್ಳಲು ಬೇಕಾದ ಸಹಕಾರ ನೀಡಿ ಎಂದು ಅವರು ತಿಳಿಸಿದರು.
ಪಕ್ಷ ನೀಡಿದ ಜವಬ್ದಾರಿಯನ್ನು ನಿಷ್ಠೆಯಿಂದ ಮಾಡಿ ಪಕ್ಷವನ್ನು ಬಲಿಷ್ಠಗೊಳಿಸುವ ಕೆಲಸ ಕಾರ್ಯಕರ್ತರ ಮೂಲಕ ಆಗಬೇಕಾಗಿದೆ ಎಂದು ಅವರು ತಿಳಿಸಿದರು.
ಕೊರೊನಾ ಸಂಕಷ್ಟದ ಅವಧಿಯಲ್ಲಿ ಜೀವ ಮತ್ತು ಜೀವನ ಎರಡನ್ನು ಸಮಾನವಾಗಿ ನೋಡಿಕೊಂಡು ದೇಶವನ್ನು ಭದ್ರವಾಗಿ ಇರಲು ದೇಶದ ಪ್ರಧಾನಿ ನರೇಂದ್ರ ಮೋದಿಯವರ ಬಲಿಷ್ಠ ನಾಯಕತ್ವದಿಂದ ಸಾಧ್ಯವಾಯಿತು ಎಂಬುದು ನಮಗೆ ಹೆಮ್ಮೆಯ ವಿಷಯ ಎಂದರು.
ಗ್ರಾ.ಪಂ.ಅಧ್ಯಕ್ಷ ಸತೀಶ್ ಪೂಜಾರಿ ಅಳಕೆ ಅದ್ಯಕ್ಷತೆ ವಹಿಸಿದ್ದರು.
ವೇದಿಕೆಯಲ್ಲಿ ಗ್ರಾ.ಪಂ.ಉಪಾಧ್ಯಕ್ಷೆ ವಿಮಲಾಮೋಹನ್, ತಾ.ಪಂ.ಮಾಜಿ ಸದಸ್ಯರುಗಳಾದ ರತ್ನ ಕುಮಾರ್ ಚೌಟ, ಪ್ರಭಾಕರ್ ಪ್ರಭು, ಜಿಲ್ಲಾ ಯುವಮೊರ್ಚಾ ಪ್ರಧಾನ ಕಾರ್ಯದರ್ಶಿ ಸುದರ್ಶನ ಬಜ, ಸದಸ್ಯರುಗಳಾದ ಸುರೇಶ್ ಕುಲಾಲ್, ಉದಯ ಪೂಜಾರಿ, ದಾಮೋದರ ಪೂಜಾರಿ, ಶಾಂತ, ಶಕುಂತಲಾ, ಪ್ರೇಮ,ಸುನಿಲ್ ಶೆಟ್ಟಿಗಾರ್, ಸುಲೋಚನ, ವಿದ್ಯಾ, ರಾಜೀವಿ, ಹೇಮಲತಾ, ಬೂತ್ ಅಧ್ಯಕ್ಷ ಅಡಪ, ಉಮೇಶ್ ಗೌಡ ಉಪಸ್ಥಿತರಿದ್ದರು.