Sunday, April 14, 2024

ಪುತ್ತೂರು ಚರ್ಚಿನ ನವೀಕೃತ ಸ್ಮಶಾನ ಜಾಗ ಹಾಗೂ ಪ್ರಾರ್ಥನಾ ಮಂದಿರದ ಆಶೀರ್ವಚನ ಮತ್ತು ಲೋಕಾರ್ಪಣೆ

ಪುತ್ತೂರು: ಪುತ್ತೂರು ಚರ್ಚಿನ ಅದೀನದಲ್ಲಿರುವ ಏಳ್ಮುಡಿ ನವೀಕೃತ ಸ್ಮಶಾನ ಜಾಗ ಹಾಗೂ ಪ್ರಾರ್ಥನಾ ಮಂದಿರದ ಆಶೀರ್ವಚನವು ಮಾರ್ಚ್ 25ರಂದು ಸಾಯಂಕಾಲ 5:30 ರ ಬಲಿ ಪೂಜೆಯೊಂದಿಗೆ ನೆರವೇರಿತು.

ಬಲಿ ಪೂಜೆಯು ಪ್ರಾರಂಭಗೊಳ್ಳುವ ಮುನ್ನ ಕಾರ್ಯಕ್ರಮದ ಪ್ರಧಾನ ಧರ್ಮ ಗುರುಗಳಾಗಿ ಆಗಮಿಸಿದ ಮಂಗಳೂರಿನ ಅತೀ ವಂದನೀಯ ಮೊನ್ಸಿಜೋರ್ ಮ್ಯಾಕ್ಸಿಮ್ .ಎಲ್ ನೋರೊನ್ಹಾ ರವರಿಗೆ ಪುತ್ತೂರು ಚರ್ಚಿನ ಪ್ರಧಾನ ಧರ್ಮಗುರುಗಳಾದ ಅತೀ ವಂದನೀಯ ಲಾರೆನ್ಸ್ ಮಸ್ಕರೇನಸ್, ಸಹಾಯಕ ಧರ್ಮ ಗುರುಗಳಾದ ವಂದನೀಯ ಕೆವಿನ್ ಲಾರೆನ್ಸ್ ಡಿಸೋಜಾ, ಚರ್ಚ್ ಪಾಲನ ಮಂಡಳಿಯ ಉಪಾಧ್ಯಕ್ಷರಾದ ಶ್ರೀ ಜೆರಾಲ್ಡ್ ಡಿಕಾಸ್ಟ, ಕಾರ್ಯದರ್ಶಿ ಎವ್ಲಿನ್ ಡಿಸೋಜಾರವರು ಹೂಗುಚ್ಛವನ್ನು ನೀಡುವ ಮುಖಾಂತರ ಆದರಣಿಯ ಸ್ವಾಗತವನ್ನು ಕೋರಿದರು. ನಂತರ ತಮ್ಮ ಅಮೃತ ಹಸ್ತದಿಂದ ರಿಬ್ಬನನ್ನು ಕತ್ತರಿಸುವ ಮೂಲಕ ಪ್ರಾರ್ಥನಾ ಮಂದಿರದ ಉದ್ಘಾಟನೆ ಗೊಳಿಸಿದರು. ತದನಂತರ ಬಲಿ ಪೂಜೆಯನ್ನು ಅರ್ಪಿಸಿದರು.

ಅತೀ ವಂದನೀಯ ಲಾರೆನ್ಸ್ ಮಸ್ಕರೇನ್ಹಸ್ ಧರ್ಮ ಗುರುಗಳು ಪುತ್ತೂರು, ವಂದನೀಯ ಸ್ಟ್ಯಾನಿ ಪಿಂಟೊ ಕ್ಯಾಂಪಸ್ ನಿರ್ದೇಶಕರು ಸಂತ ಫಿಲೋಮಿನಾ ಕಾಲೇಜು, ವಂದನೀಯ ಪ್ರಕಾಶ್ ಮೊಂತೆರೋ ಪ್ರಾಂಶುಪಾಲರು ಸಂತ ಫಿಲೋಮಿನ ಪದವಿ ಕಾಲೇಜು ಪುತ್ತೂರು, ವಂದನೀಯ ಅಶೋಕ್ ರಾಯನ್ ಕ್ರಾಸ್ತಾ ಪ್ರಾಂಶುಪಾಲರು ಸಂತ ಫಿಲೋಮಿನಾ ಪದವಿಪೂರ್ವ ಕಾಲೇಜು ಪುತ್ತೂರು, ವಂದನೀಯ ಡೆನ್ಜಿಲ್ ಲೋಬೋ ಮೊದಲಾದವರು ಬಲಿ ಪೂಜೆಯಲ್ಲಿ ಭಾಗವಹಿಸಿದರು.

ನವೀಕರಿಸಿದ ಪ್ರಾರ್ಥನಾ ಮಂದಿರ ಹಾಗೂ ಸಭಾಂಗಣವನ್ನು ಆಶೀರ್ವದಿಸಿ ದೇವರ ವಾಕ್ಯವನ್ನು ವಾಚಿಸಿ ಪ್ರತಿಯೊಬ್ಬ ಕ್ರೈಸ್ತನು ತನ್ನ ಕಷ್ಟಗಳನ್ನು ಎದುರಿಸಿ ಮೆಟ್ಟಿ ನಿಲ್ಲಲು ಶಕ್ತಿಯನ್ನು ತುಂಬುವುದೇ ಶಿಲುಬೆ ಹಾಗೂ ಮನುಷ್ಯನು ಕೆಟ್ಟ ಚಟಗಳಿಂದ ತನ್ನ ಜೀವನವನ್ನು ನಾಶಗೊಳಿಸಬಾರದೆಂದು ತನ್ನ ಪ್ರವಚನದಲ್ಲಿ ಅತೀ ವಂದನೀಯ ಮೊನ್ಸಿಜೋರ್ ಮ್ಯಾಕ್ಸಿಮ್ ಎಲ್. ನೊರೊನ್ಹಾ ಹೇಳಿದರು.

ಬಲಿ ಪೂಜೆಯ ನಂತರ ಎಲ್ಲರನ್ನು ಅತೀ ವಂದನೀಯ ಲಾರೆನ್ಸ್ ಮಸ್ಕರೇನ್ಹಸ್ ಸ್ಮರಿಸಿದರು. ಚರ್ಚ್ ಪಾಲನ ಸಮಿತಿ ಮಂಡಳಿಯ ಕಾರ್ಯದರ್ಶಿ ಎವ್ಲಿನ್ ಡಿಸೋಜಾ ರವರು ನವೀಕರಿಸಿದ ಪ್ರಾರ್ಥನಾ ಮಂದಿರಕ್ಕೆ ಉದಾರ ದೇಣಿಗೆಯನ್ನು ನೀಡಿದವರ ಹೆಸರುಗಳನ್ನು ವಾಚಿಸಿದರು. ಅವರೆಲ್ಲರನ್ನು ಪ್ರಧಾನ ಧರ್ಮಗುರುಗಳು ಸನ್ಮಾನಿಸಿದರು.

ಎಲ್ಲರಿಗೂ ಸಹ ಭೋಜನವನ್ನು ಏರ್ಪಡಿಸಲಾಗಿತ್ತು. ಚರ್ಚ್ ಪಾಲನಾ ಮಂಡಳಿಯ ಉಪಾಧ್ಯಕ್ಷರಾದ ಜೆರಾಲ್ಡ್ ಡಿಕೋಸ್ತಾ, ಸಮಿತಿಯ ಸದಸ್ಯರು ಕಾರ್ಯಕ್ರಮ ಯಶಸ್ವಿಗೊಳಲು ಸಹಕರಿಸಿದರು.

More from the blog

ಲೋಕಸಭಾ ಚುನಾವಣೆ : ‘ಸಂಕಲ್ಪ ಪತ್ರ’ ಹೆಸರಿನಲ್ಲಿ ಬಿಜೆಪಿ ಪ್ರಣಾಳಿಕೆ ಬಿಡುಗಡೆ

ನವದೆಹಲಿ: ದೆಹಲಿಯಲ್ಲಿರುವ ಬಿಜೆಪಿಯ ಪ್ರಧಾನ ಕಚೇರಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಲೋಕಸಭೆ ಚುನಾವಣೆಗಾಗಿ ಬಿಜೆಪಿ ಪ್ರಣಾಳಿಕೆಯನ್ನು ಬಿಡುಗಡೆ ಮಾಡಿದೆ. ‘ಸಂಕಲ್ಪ ಪತ್ರ’ ಹೆಸರಲ್ಲಿ ದೇಶದ ಜನರಿಗೆ ಪ್ರಧಾನಿ ಮೋದಿ ಆಶ್ವಾಸನೆಗಳನ್ನು ನೀಡಿದ್ದು ಮೊದಲ ಸಂಕಲ್ಪ...

ಬಾಲಿವುಡ್ ನಟ ಸಲ್ಮಾನ್​ ಖಾನ್ ಮನೆ ಮುಂದೆ ಗುಂಡಿನ ದಾಳಿ

ಮುಂಬೈ: ಬಾಲಿವುಡ್ ಆ್ಯಕ್ಟರ್​ ಸಲ್ಮಾನ್ ಖಾನ್ ಅವರ ನಿವಾಸದ ಮೇಲೆ ಇಂದು ಬೆಳಗಿನ ಜಾವ 5 ಗಂಟೆಗೆ ದುಷ್ಕರ್ಮಿಗಳು ಬೈಕ್​ನಲ್ಲಿ ಬಂದು 5 ಸುತ್ತು ಫೈರಿಂಗ್ ಮಾಡಿ ಎಸ್ಕೇಪ್ ಆಗಿದ್ದಾರೆ. ಮುಂಬೈನ ಬಾಂದ್ರಾ ಪ್ರದೇಶದಲ್ಲಿರುವ...

ಪ್ರಧಾನಿ ಮೋದಿ ರೋಡ್ ಶೋಗೆ ಸಿದ್ಧತೆ : ರಸ್ತೆಗಳಲ್ಲಿ ಬಿಗಿ ಪೊಲೀಸ್‌ ಬಂದೋಬಸ್ತ್‌

ಮಂಗಳೂರು: ನಗರದಲ್ಲಿ ಪ್ರಧಾನಿ ನರೇಂದ್ರ ಮೋದಿಯವರ ರೋಡ್‌ ಶೋ ಇರುವ ಹಿನ್ನೆಲೆಯಲ್ಲಿ ಭಾರೀ ಪೊಲೀಸ್‌ ಬಿಗಿ ಭದ್ರತೆ ಕೈಗೊಳ್ಳಲಾಗಿದೆ. ಶನಿವಾರ ಸಂಜೆಯಿಂದಲೇ ಪೊಲೀಸರು ಕಾರ್ಯ ನಿರತರಾಗಿದ್ದು, ಹೊಸದಿಲ್ಲಿಯಿಂದ ಆಗಮಿಸಿರುವ ಎಸ್‌ಪಿಜಿ ಅಧಿಕಾರಿಗಳು ರೋಡ್‌ ಶೋ...

ಮೊಸಳೆಯ ಹೊಟ್ಟೆಯಲ್ಲಿ 1 ಕೆ.ಜಿ ಪ್ಲಾಸ್ಟಿಕ್ ಪತ್ತೆ….! ತ್ಯಾಜ್ಯ ಜೀರ್ಣವಾಗದೆ ಮೊಸಳೆ ಸಾವು

ಸುಬ್ರಹ್ಮಣ್ಯ: ಕಡಬ ಸಮೀಪದ ಪುಳಿಕುಕ್ಕು ಎಂಬಲ್ಲಿ ಕುಮಾರಧಾರಾ ನದಿಯಲ್ಲಿ ಮೊಸಳೆ ಸಾವಿಗೆ ತ್ಯಾಜ್ಯ ಸೇವನೆ ಹಾಗೂ ಪ್ಲಾಸ್ಟಿಕ್‌ ಕಾರಣ ಎಂಬ ಶಂಕೆ ವ್ಯಕ್ತವಾಗಿದೆ. ಕಡಬ-ಪಂಜ ಸಂಪರ್ಕ ರಸ್ತೆಯ ಪಂಜ ವಲಯ ಅರಣ್ಯ ವ್ಯಾಪ್ತಿಯ ಪುಳಿಕುಕ್ಕು...