Friday, April 12, 2024

ಅಪ್ರಾಪ್ತ ಬಾಲಕನಿಗೆ ಮದುವೆಗೆ ಸಿದ್ದತೆಯಲ್ಲಿದ್ದ ವೇಳೆ ಅಧಿಕಾರಿಗಳಿಂದ ಮನೆಗೆ ದಾಳಿ.. ಎರಡನೇ ಬಾರಿ ಮದುವೆಗೆ ತಯಾರಿ.. ಪೋರ್ಜರಿ ದಾಖಲೆಗಳನ್ನು ಸೃಷ್ಟಿಸಿ ಮದುವೆಗೆ ಮುಂದಾದ ವೇಳೆ ದಾಳಿ…

ಅಪ್ರಾಪ್ತ ಬಾಲಕನೋರ್ವನಿಗೆ ಮದುವೆಗೆ ಸಿದ್ದತೆಯಲ್ಲಿರುವ ವೇಳೆ ಅಧಿಕಾರಿಗಳು ದಾಳಿ ನಡೆಸಿದ ಮದುವೆ ನಡೆಸದಂತೆ ಮುಚ್ಚಳಿಕೆ ಬರೆಸಿದ ಘಟನೆ ಪುಂಜಾಲಕಟ್ಟೆ ಪೊಲೀಸ್ ಠಾಣಾ ವ್ಯಾಪ್ತಿಯ ತೆಂಕಕಜೆಕಾರ್ ಗ್ರಾಮದಲ್ಲಿ ನಡೆದಿದೆ.

ತೆಂಕಕಜೆಕಾರ್ ಗ್ರಾಮದ ಮಿತ್ತಳಿಕೆ ಎಂಬ ಮನೆಯಲ್ಲಿ ಅಪ್ರಾಪ್ತ ಬಾಲಕನೋರ್ವನಿಗೆ ನಾಳೆ ಮಾ.5 ರಂದು ಮದುವೆಯ ಸಕಲಸಿದ್ಧತೆಗಳನ್ನು ನಡೆದಿದ್ದು, ಅಧಿಕಾರಿಗಳಿಗೆ ದೊರೆತ ಮಾಹಿತಿಯಂತೆ ಮನೆಗೆ ಧಾವಿಸಿ, ಮದುವೆ ನಡೆಸದಂತೆ ಮನೆಯವರಿಂದ ಮುಚ್ಚಳಿಕೆ ಬರೆಸಿಕೊಂಡಿದ್ದಾರೆ.

ಎರಡನೇ ಬಾರಿ ಮದುವೆಗೆ ಯತ್ನ

ಈ ಅಪ್ರಾಪ್ತ ಬಾಲಕನಿಗೆ ತಪ್ಪಿದ ಎರಡನೇಯ ಮದುವೆ. ಕಳೆದ ವರ್ಷ ಈತನಿಗೆ ಇದೇ ರೀತಿ ಮದುವೆಗಾಗಿ ಸಕಲ ಸಿದ್ದತೆಗಳು ನಡೆದಿದ್ದು, ಈ ಬಗ್ಗೆ ಮಾಹಿತಿ ತಿಳಿದ ಅಧಿಕಾರಿಗಳು ಮನೆಗೆ ಹೋಗಿ ವಿಚಾರ ತಿಳಿಸಿ ಮದುವೆಯನ್ನು ನಿಲ್ಲಿಸಿದ್ದರು.

ಇದೀಗ ಎರಡನೇ ಬಾರಿ ಅದೇ ರೀತಿ ಅಪ್ರಾಪ್ತ ಬಾಲಕನಿಗೆ ಮತ್ತೆ ಮದುವೆಗಾಗಿ ತಯಾರಿಯಲ್ಲಿದ್ದರು.  ಈ ಬಗ್ಗೆ ಮಾಹಿತಿ ತಿಳಿದ ಬಂಟ್ವಾಳ ಸಿ.ಡಿ.ಪಿ.ಒ‌‌.ಗಾಯತ್ರಿ ಕಂಬಳಿ ಅವರು ಪುಂಜಾಲಕಟ್ಟೆ ಎಸ್.ಐ.ಆಂಜನೇಯ ರೆಡ್ಡಿ ಹಾಗೂ ಸಿ.ಡಿ.ಪಿ.ಒ. ಇಲಾಖೆಯ ಇತರ ಅಧಿಕಾರಿಗಳೊಂದಿಗೆ ಮನೆಗೆ ತೆರಳಿ ಮದುವೆ ನಿಲ್ಲಿಸಿದ್ದಾರೆ.

ಸುಳ್ಳು ಸರ್ಟಿಫಿಕೇಟ್

ಕಳೆದ ಬಾರಿ ಅಪ್ರಾಪ್ತ ಬಾಲಕನಿಗೆ ಮದುವೆ ಮಾಡಲು ಅಧಿಕಾರಿಗಳು ಅವಕಾಶ ನೀಡಿಲ್ಲ ಎಂಬ ಕಾರಣಕ್ಕಾಗಿ ಪೋರ್ಜರಿ ಬರ್ತ್ ಸರ್ಟೀಪಿಕೇಟ್ ಸೃಷ್ಟಿಸಿ ಸ್ಥಳಕ್ಕೆ ಬಂದ ಅಧಿಕಾರಿಗಳ ಕಣ್ಣಿಗೆ ಮಣ್ಣೆರಚಲು ನೋಡಿದ್ದಾರೆ.

ಆದರೆ ಅಧಿಕಾರಿಗಳು ಇವರು ನೀಡಿದ ದಾಖಲೆಗಳನ್ನು ಪರಿಶೀಲಿಸಿದಾಗ ಅದು ಸುಳ್ಳು ದಾಖಲೆ ಪತ್ರಗಳು ಎಂಬುದು ಸಾಬೀತಾಗಿದೆ.

ಅ ಬಳಿಕ ಪೋಷಕರಿಗೆ ಕಾನೂನಿನ ಅಡಿಯಲ್ಲಿ ಬರುವ ವಿಚಾರಗಳನ್ನು ಮನವರಿಕೆ ಮಾಡಿದ ಅಧಿಕಾರಿಗಳು ಮದುವೆ ನಿಲ್ಲಿಸುವಂತೆ ಮುಚ್ಚಳಿಕೆ ಬರೆಸಿಕೊಂಡು ಮದುವೆ ನಿಲ್ಲಿಸಲು ಸೂಚನೆ ನೀಡಿದ್ದಾರೆ.

More from the blog

ಎಳನೀರು ಸೇವಿಸಿ 136 ಮಂದಿ ಅಸ್ವಸ್ಥ ಪ್ರಕರಣ : ಬೊಂಡ ಫ್ಯಾಕ್ಟರಿ ಬಂದ್‌ ಗೆ ಆದೇಶ

ಮಂಗಳೂರು: ನಗರದ ಹೊರವಲಯದ ಅಡ್ಯಾರ್‌ನಲ್ಲಿರುವ ಬೊಂಡ ಫ್ಯಾಕ್ಟರಿಯ ಬೊಂಡ ನೀರು ಸೇವಿಸಿ ನೂರಾರು ಮಂದಿ ಅಸ್ವಸ್ಥಗೊಂಡ ಘಟನೆ ವರದಿಯಾಗಿದ್ದು, ಈ ಪ್ರಕರಣದ ಹಿನ್ನೆಲೆಯಲ್ಲಿ ಅಧಿಕಾರಿಗಳು ಗುರುವಾರ ಬೊಂಡ ಫ್ಯಾಕ್ಟರಿಗೆ ಬೀಗ ಜಡಿದಿದ್ದಾರೆ. ದ.ಕ.ಜಿಲ್ಲಾ ಆರೋಗ್ಯ...

ಸ್ವಿಮ್ಮಿಂಗ್​ ಪೂಲ್​ ನೀರಿಗೆ ಬಿದ್ದು 4ನೇ ತರಗತಿ ವಿದ್ಯಾರ್ಥಿ ಸಾವು

ಉಡುಪಿ‌: ಸ್ವಿಮ್ಮಿಂಗ್​ ಫೂಲ್​ನಲ್ಲಿ ಮುಳುಗಿ 4ನೇ ತರಗತಿಯ ವಿದ್ಯಾರ್ಥಿ ಸಾವನ್ನಪ್ಪಿರುವ ಘಟನೆ ಕುಂದಾಪುರ ತಾಲೂಕಿನ ಹೆಂಗವಳ್ಳಿ ಸಮೀಪದ ಟಿನ್ ಟಾನ್ ಎನ್ವೆಂಚರ್ಸ್ ರೆಸಾರ್ಟ್​​ನಲ್ಲಿ ನಡೆದಿದೆ. ಉಡುಪಿ‌ಯ ಹೊಡೆ ಮೂಲದ ಮುಹಮ್ಮದ್ ಅರೀಝ್ ಮೃತ ವಿದ್ಯಾರ್ಥಿ. ದಾರುಸ್ಸಲಾಮ್...

ರಾಮೇಶ್ವರಂ ಕೆಫೆ ಬ್ಲಾಸ್ಟ್‌ ಪ್ರಕರಣ : ನಿದ್ದೆಯಲ್ಲಿದ್ದ ಉಗ್ರರನ್ನು ಬಡಿದೆಬ್ಬಿಸಿದ ಎನ್ಐಎ

ಬೆಂಗಳೂರು: ರಾಮೇಶ್ವರಂ ಕೆಫೆ ಬ್ಲಾಸ್ಟ್‌ ಪ್ರಕರಣಕ್ಕೆ ಸಂಬಂಧಪಟ್ಟಂತೆ ರಾಷ್ಟ್ರೀಯ ತನಿಖಾ ಸಂಸ್ಥೆ ಭರ್ಜರಿ ಕಾರ್ಯಾಚರಣೆ ನಡೆಸಿ, ಉಗ್ರರ ಗ್ಯಾಂಗ್ ಅನ್ನು ಬಂಧಿಸುವಲ್ಲಿ ಯಶಸ್ವಿಯಾಗಿದೆ. ರಾಮೇಶ್ವರಂ ಕೆಫೆ ಬಾಂಬರ್‌ ಗ್ಯಾಂಗ್ ಬಂಧಿಸಲು NIA ಭರ್ಜರಿ ಬಲೆ...

ಚಿನ್ನದ ದರ ಮತ್ತೆ ಏರಿಕೆ : ಇಂದು ಗೋಲ್ಡ್​ ರೇಟ್​ ಎಷ್ಟಿದೆ ಗೊತ್ತಾ..?

ಚಿನ್ನ ದಿನದಿಂದ ದಿನಕ್ಕೆ ಶಾಕ್​ ನೀಡುತ್ತಾ ಬರುತ್ತಿದೆ. ಕಳೆದ ತಿಂಗಳು ಮಾರ್ಚ್ ನಲ್ಲಿ ಅರವತ್ತು ಸಾವಿರದ ಗಡಿಯಲ್ಲಿದ್ದ ಬಂಗಾರ ಏಪ್ರಿಲ್ ನಲ್ಲಿ ಇದೀಗ ಎಪ್ಪತ್ತು ಸಾವಿರದ ಗಡಿ ದಾಟಿದೆ. ಕೇವಲ ಒಂದು ತಿಂಗಳ...