Sunday, April 7, 2024

ಇನ್ನೊಬ್ಬರ ಚಿಕಿತ್ಸೆಗೆ ತಾನೇ ಬಾಕ್ಸ್ ಹಿಡಿದು ಹಣ ಸಂಗ್ರಹಹಿಸುತ್ತಿದ್ದ ನಾಗೇಶ್ ಬೆಳ್ಳಾರೆ ಚಿಕಿತ್ಸೆಗೆ ಬೇಕಾಗಿದೆ ಆರ್ಥಿಕ ಧನ ಸಹಾಯ

ಸುಳ್ಯ ತಾಲೂಕಿನ ಪೆರುವಾಜೆ ಗ್ರಾಮದ ನಾಗೇಶ್ ಬೆಳ್ಳಾರೆ ಬೈಕ್ ಅಪಘಾತವೊಂದರಲ್ಲಿ ಬಿದ್ದು ಕೈಯ 5 ನರಗಳು ಕಡಿತಗೊಂಡಿದ್ದು, ಈಗಾಗಲೇ 2 ಶಸ್ತ್ರಚಿಕಿತ್ಸೆ ಮಂಗಳೂರಿನ ಫಾದರ್ ಮುಲ್ಲರ್ ಆಸ್ಪತ್ರೆಯಲ್ಲಿ ದಾನಿಗಳ ನೆರವಿನಿಂದ ನಡೆದಿರುತ್ತದೆ.

ಮುಂದಕ್ಕೆ ಕೈಯ ಎಲುಬಿನ ಶಸ್ತ್ರಚಿಕಿತ್ಸೆ ಮಾರ್ಚ್ 26 ರಂದು ಮಂಗಳೂರಿನಲ್ಲಿ ನಡೆಯಲಿದ್ದು ಇದಕ್ಕೆ ಸುಮಾರು 2ಲಕ್ಷ ರೂಪಾಯಿಗಳ ಅವಶ್ಯಕತೆ ಇರುವುದರಿಂದ ನಾಗೇಶ್ ಕುಟುಂಬ ಕಂಗಲಾಗಿದ್ದಾರೆ.

ಮನೆಯ ಎಲ್ಲಾ ಜವಾಬ್ದಾರಿಯನ್ನು ತಾನೇ ನಿಭಾಯಿಸುತ್ತಿದ್ದ ತೀರ ಬಡವರಾದ ಇವರಿಗೆ ಆರ್ಥಿಕ ಸಮಸ್ಯೆ ಎದುರಾಗಿದೆ.
ಕಲಾ ಪ್ರೋತ್ಸಾಹಕರಾದ ಇವರು ಇನ್ನೊಬ್ಬರ ಚಿಕಿತ್ಸೆಗೆ ಬಾಕ್ಸ್ ಹಿಡಿದು ಧನ ಸಂಗ್ರಹಣೆ ಮಾಡುತ್ತಿದ್ದರು.. ಇದೀಗ ನಾಗೇಶ್ ತನ್ನ ಚಿಕಿತ್ಸೆಗಾಗಿ ಹಣವಿಲ್ಲದೇ ದುಃಖಿಸುತ್ತಿದ್ದಾರೆ.

ಸಹೃದಯಿ ದಾನಿಗಳು ತಮ್ಮ ಕೈಯಲ್ಲಾದ ಆರ್ಥಿಕ ಸಹಾಯವನ್ನು ನೇರವಾಗಿ ನಾಗೇಶ್ ಖಾತೆ ಸಂಖ್ಯೆಗೆ ಜಮಾ ಮಾಡಿ ಅವರ ಚಿಕಿತ್ಸೆಗೆ ಸಹಕರಿಸುವಿರೇ….

ಫೋನ್ ಪೇ / ಗೂಗಲ್ ಪೇ : 7899495364

Ifsc code: UBIN0918920
ACC NO: 520101265811215

More from the blog

ಬಂಟ್ವಾಳ: ನಿಯಮ ಮೀರಿ ಚಾಲನೆ ಮಾಡಿ ಪೋಲೀಸರ ಕೈಗೆ ಸಿಕ್ಕಿಬಿದ್ದರೆ ದಂಡ ಗ್ಯಾರಂಟಿ….

ಬಂಟ್ವಾಳ: ರಸ್ತೆಯಲ್ಲಿ ಟ್ರಾಫಿಕ್ ಪೋಲೀಸರು ದಂಡ ವಸೂಲಿ ಮಾಡುವ ವೇಳೆ ಸುಳ್ಳು ಹೇಳಿಬಚಾವಾಗಲು ಸಾಧ್ಯವಿಲ್ಲ, ಜೊತೆಗೆ ಅಸಭ್ಯ ವರ್ತನೆ ಮಾಡಿದರೆ ಜೋಕೆ, ಅವರ ಶರೀರದಲ್ಲಿ ಕಣ್ಗಾವಲು ಕ್ಯಾಮರಾ ಅಳವಡಿಸಿಲಾಗಿದ್ದು, ಸೂಕ್ಷ್ಮವಾಗಿ ಎಲ್ಲವನ್ನು ಸೆರೆ...

ಪೊಳಲಿ ಶ್ರೀ ರಾಜರಾಜೇಶ್ವರಿ ದೇವಸ್ಥಾನದ ವಾರ್ಷಿಕ ಜಾತ್ರಾ ಮಹೋತ್ಸವ : ಚೆಂಡಿನ ಗದ್ದೆಯಲ್ಲಿ ಪ್ರಥಮ ಚೆಂಡು

ಇತಿಹಾಸ ಪ್ರಸಿದ್ಧ ಪೊಳಲಿ ಶ್ರೀ ರಾಜರಾಜೇಶ್ವರಿ ದೇವಸ್ಥಾನದ ವಾರ್ಷಿಕ ಜಾತ್ರಾ ಮಹೋತ್ಸವದ ಅಂಗವಾಗಿ ದೇವಳದ ಚೆಂಡಿನ ಗದ್ದೆಯಲ್ಲಿ ಇಂದು ಪ್ರಥಮ ಚೆಂಡು ನಡೆಯಿತು. ‌ ಇವತ್ತಿನಿಂದ ಮುಂದಿನ ಐದು ದಿನಗಳ ಕಾಲ ಇಲ್ಲಿ ಚೆಂಡು...

ಏಪ್ರಿಲ್ 7ರಂದು ಕರ್ನಾಟಕ ಜಾನಪದ ಪರಿಷತ್ತು ದ.ಕ.ಜಿಲ್ಲಾ ಬಂಟ್ವಾಳ ತಾಲೂಕು ಘಟಕದ ಉದ್ಘಾಟನೆ ಹಾಗೂ ಪದಗ್ರಹಣ ಸಮಾರಂಭ

ಬಂಟ್ವಾಳ: ಏಪ್ರಿಲ್ 7ರಂದು ಅಪರಾಹ್ನ 3 ಗಂಟೆಗೆ ಬಿ.ಸಿ.ರೋಡು ರಂಗೋಲಿ ಸಭಾಂಗಣದಲ್ಲಿ ಕರ್ನಾಟಕ ಜಾನಪದ ಪರಿಷತ್ತು ದ.ಕ.ಜಿಲ್ಲಾ ಬಂಟ್ವಾಳ ತಾಲೂಕು ಘಟಕದ ಉದ್ಘಾಟನೆ ಹಾಗೂ ಪದಗ್ರಹಣ ಸಮಾರಂಭ ನಡೆಯಲಿದೆ ಎಂದು ತಾಲೂಕು ಘಟಕದ...

ದ್ವಿಚಕ್ರ ವಾಹನಕ್ಕೆ ರಿಕ್ಷಾ ಡಿಕ್ಕಿ : ಸಹಸವಾರ ಸ್ಥಳದಲ್ಲೇ ಮೃತ್ಯು

ಬಂಟ್ವಾಳ: ರಿಕ್ಷಾ ಡಿಕ್ಕಿಯಾಗಿ ದ್ವಿಚಕ್ರ ವಾಹನದಲ್ಲಿ ಸಂಚಾರ ಮಾಡುತ್ತಿದ್ದ ಸಹಸವಾರ ಸ್ಥಳದಲ್ಲಿಯೇ ಮೃತಪಟ್ಟ ಘಟನೆ ನರಿಕೊಂಬು ಎಂಬಲ್ಲಿ ನಡೆದಿದೆ. ನರಿಕೊಂಬು ನಿವಾಸಿ ನೀಲಪ್ಪ ಪೂಜಾರಿ ಅವರ ಮಗ ಪವನ್ ( 17) ಮೃತಪಟ್ಟ ಬಾಲಕ. ಮನೆಯಿಂದ...