Saturday, April 13, 2024

ಗೈರು ಹಾಜರಾಗಿ ಸರಕಾರಿ ನೌಕರರ ಮುಷ್ಕರಕ್ಕೆ ವ್ಯಾಪಕ ಆಕ್ರೋಶ…. ಸರಕಾರಿ ಶಾಲೆಗಳಿಗೆ ಹೊಡೆತ ಬೀಳುವ ಆತಂಕ…..

ಸರಕಾರಿ ನೌಕರರ ಪ್ರತಿಭಟನೆ ಸಾರ್ವಜನಿಕ ವಲಯದಲ್ಲಿ ತೀವ್ರ ಆಕ್ರೋಶ ವ್ಯಕ್ತವಾಗಿದ್ದು, ಮುಷ್ಕರದ ಪರಿಣಾಮ ಸರಕಾರಿ ಶಾಲೆಗಳಿಗೆ ದೊಡ್ಡ ಹೊಡೆತ ಬೀಳುವ ಆತಂಕ ಎದುರಾಗಿದೆ.

ಪರೀಕ್ಷಾ ಸಮಯದಲ್ಲೇ ಶಿಕ್ಷಕರು ಪ್ರತಿಭಟನೆ ಗೆ ಇಳಿದಿರುವುದು ಎಷ್ಟು ಸರಿ ಎಂಬ ಆಕ್ರೋಶ ವನ್ನು ಪೋಷಕರು ವ್ಯಕ್ತಪಡಿಸುತ್ತಿದ್ದು,ಕೊಂಚ ದುಬಾರಿಯಾದರೂ ಚಿಂತೆಯಿಲ್ಲ, ತಮ್ಮ ಮಕ್ಕಳನ್ನು ಖಾಸಗಿ ಶಾಲೆಗೆ ಸೇರಿಸುವ ಕುರಿತು ಚಿಂತನೆ ನಡೆಸುತ್ತಿದ್ದಾರೆ.
ಖಾಸಗಿ ಶಾಲೆ ಗಳಲ್ಲಿ ಪರೀಕ್ಷೆ ಗಾಗಿ ಎಲ್ಲಾ ಸಿದ್ದತೆಗಳು ನಡೆಯು ತ್ತಿರುವಾಗ ಸರಕಾರಿ ಶಾಲೆ ಗಳ ಶಿಕ್ಷಕರು ಬೀದಿಗಿಳಿದು ಹೋರಾಟ ಮಾಡುತ್ತಿದ್ದಾರೆ.

ನಿಜವಾಗಿಯೂ ಅವರ ಬೇಡಿಕೆ ಗಾಗಿ ಪ್ರತಿಭಟನೆ ಮಾಡಲೇಬೇಕು ಎಂದಿದ್ದರೆ, ಪರೀಕ್ಷೆ ಸಮಯ ಹೊರತು ಪಡಿಸಿ, ಉಳಿದ ಸಮಯದಲ್ಲಿ ಪ್ರತಿಭಟನೆ ಮಾಡಬಹುದಿತ್ತಲ್ಲವೇ…? ಎಂಬ ಅಭಿಪ್ರಾಯ ಗಳು ವ್ಯಕ್ತವಾಗುತ್ತಿವೆ. ಕೊರೊನಾ ಹೊಡೆತದಿಂದ ನಿಧಾನವಾಗಿ ಮತ್ತೆ ಕಲಿಕಾ ಹಂತಕ್ಕೆ ಮರಳುತ್ತಿರುವ ಸರಕಾರಿ ಶಾಲೆಗಳು ಹಾಗೂ ವಿಧ್ಯಾರ್ಥಿಗಳು ಮತ್ತೆ ಸರಕಾರಿ ನೌಕರರ ಮುಷ್ಕರದಿಂದ ದೊಡ್ಡ ಹೊಡೆತಕ್ಕೆ ಸಿಲುಕುವ ಆತಂಕದ ಲ್ಲಿದ್ದಾರೆ.

ಮತ್ತೊಂದೆಡೆ ಸರಕಾರಿ ಕಚೇರಿಗಳನ್ನು ಸರಕಾರಿ ನೌಕರರು ಸಂಘದವರು, ಒತ್ತಾಯ ಪೂರ್ವಕ ವಾಗಿ ಬಂದ್ ಮಾಡಿಸುತ್ತಿದ್ದು, ಕಚೇರಿ ಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಗುತ್ತಿಗೆ ಆಧಾರದ ಸಿಬ್ಬಂದಿ ಗಳನ್ನು ಹೊರಗೆ ಕಳುಹಿಸುತ್ತಿರುವುದು ಎಷ್ಟು ಸರಿ. ಸರಕಾರಿ ಕಚೇರಿ ಎಂದರೆ ಅದು ಸರಕಾರದ ಸೊತ್ತೇ ವಿನಹ ,ಅದು ಸರಕಾರಿ ನೌಕರರ ಸೊತ್ತಲ್ಲ.

ಮತ್ತೊಂದು ದೃಷ್ಟಿಯಲ್ಲಿ ಹೇಳಬೇಕೆಂದರೆ, ಗುತ್ತಿಗೆ ಆಧಾರದ ನೌಕರರಿಗೆ ನೂರಾರು ಸಮಸ್ಯೆ ಗಳಿರುವಾಗ ಒಂದು ದಿನವೂ ಮಾತನಾಡದ ಸರಕಾರಿ ನೌಕರರು ತಮ್ಮ ಬೇಡಿಕೆ ಈಡೇರಿಕೆಗಾಗಿ , ಅವರನ್ನು ಹೊರೆಗೆ ಕಳುಹಿಸುವುದು, ಸಮಂಜಸವೇ… ಎಂಬ ಪ್ರಶ್ನೆಗಳು ಸಹಜವಾಗಿಯೇ ಉದ್ಬವಹಿಸುತ್ತಿದೆ.

ಸರಕಾರಿ ಕಚೇರಿಗಲ್ಲಿ ಭೃಷ್ಡಾಚಾರ ವ್ಯಾಪಕವಾಗಿ ರುವುದು ಎಲ್ಲರಿಗೂ ಗೊತ್ತಿರುವ ಕಟು ಸತ್ಯವಾಗಿ ದ್ದು, ಅದರಲ್ಲೇ ಸಾಕಷ್ಟು ಮಾಮೂಲಿ ಪಡೆಯುವ ಸರಕಾರಿ ನೌಕರರು , ಈಗ ವೇತನ ಪರಿಷ್ಕರಣೆ ಗಾಗಿ ಕಚೇರಿ ಬಹಿಷ್ಕಾರಿಸಿರುವುದು ಸರಿಯೇ ಎಂಬ ಆಕ್ರೋಶ ವನ್ನು ಸಾರ್ವಜನಿಕರು ಹೊರಹಾಕಿದ್ದಾರೆ.

More from the blog

ಎಳನೀರು ಸೇವಿಸಿ 136 ಮಂದಿ ಅಸ್ವಸ್ಥ ಪ್ರಕರಣ : ಬೊಂಡ ಫ್ಯಾಕ್ಟರಿ ಬಂದ್‌ ಗೆ ಆದೇಶ

ಮಂಗಳೂರು: ನಗರದ ಹೊರವಲಯದ ಅಡ್ಯಾರ್‌ನಲ್ಲಿರುವ ಬೊಂಡ ಫ್ಯಾಕ್ಟರಿಯ ಬೊಂಡ ನೀರು ಸೇವಿಸಿ ನೂರಾರು ಮಂದಿ ಅಸ್ವಸ್ಥಗೊಂಡ ಘಟನೆ ವರದಿಯಾಗಿದ್ದು, ಈ ಪ್ರಕರಣದ ಹಿನ್ನೆಲೆಯಲ್ಲಿ ಅಧಿಕಾರಿಗಳು ಗುರುವಾರ ಬೊಂಡ ಫ್ಯಾಕ್ಟರಿಗೆ ಬೀಗ ಜಡಿದಿದ್ದಾರೆ. ದ.ಕ.ಜಿಲ್ಲಾ ಆರೋಗ್ಯ...

ಸ್ವಿಮ್ಮಿಂಗ್​ ಪೂಲ್​ ನೀರಿಗೆ ಬಿದ್ದು 4ನೇ ತರಗತಿ ವಿದ್ಯಾರ್ಥಿ ಸಾವು

ಉಡುಪಿ‌: ಸ್ವಿಮ್ಮಿಂಗ್​ ಫೂಲ್​ನಲ್ಲಿ ಮುಳುಗಿ 4ನೇ ತರಗತಿಯ ವಿದ್ಯಾರ್ಥಿ ಸಾವನ್ನಪ್ಪಿರುವ ಘಟನೆ ಕುಂದಾಪುರ ತಾಲೂಕಿನ ಹೆಂಗವಳ್ಳಿ ಸಮೀಪದ ಟಿನ್ ಟಾನ್ ಎನ್ವೆಂಚರ್ಸ್ ರೆಸಾರ್ಟ್​​ನಲ್ಲಿ ನಡೆದಿದೆ. ಉಡುಪಿ‌ಯ ಹೊಡೆ ಮೂಲದ ಮುಹಮ್ಮದ್ ಅರೀಝ್ ಮೃತ ವಿದ್ಯಾರ್ಥಿ. ದಾರುಸ್ಸಲಾಮ್...

ರಾಮೇಶ್ವರಂ ಕೆಫೆ ಬ್ಲಾಸ್ಟ್‌ ಪ್ರಕರಣ : ನಿದ್ದೆಯಲ್ಲಿದ್ದ ಉಗ್ರರನ್ನು ಬಡಿದೆಬ್ಬಿಸಿದ ಎನ್ಐಎ

ಬೆಂಗಳೂರು: ರಾಮೇಶ್ವರಂ ಕೆಫೆ ಬ್ಲಾಸ್ಟ್‌ ಪ್ರಕರಣಕ್ಕೆ ಸಂಬಂಧಪಟ್ಟಂತೆ ರಾಷ್ಟ್ರೀಯ ತನಿಖಾ ಸಂಸ್ಥೆ ಭರ್ಜರಿ ಕಾರ್ಯಾಚರಣೆ ನಡೆಸಿ, ಉಗ್ರರ ಗ್ಯಾಂಗ್ ಅನ್ನು ಬಂಧಿಸುವಲ್ಲಿ ಯಶಸ್ವಿಯಾಗಿದೆ. ರಾಮೇಶ್ವರಂ ಕೆಫೆ ಬಾಂಬರ್‌ ಗ್ಯಾಂಗ್ ಬಂಧಿಸಲು NIA ಭರ್ಜರಿ ಬಲೆ...

ಚಿನ್ನದ ದರ ಮತ್ತೆ ಏರಿಕೆ : ಇಂದು ಗೋಲ್ಡ್​ ರೇಟ್​ ಎಷ್ಟಿದೆ ಗೊತ್ತಾ..?

ಚಿನ್ನ ದಿನದಿಂದ ದಿನಕ್ಕೆ ಶಾಕ್​ ನೀಡುತ್ತಾ ಬರುತ್ತಿದೆ. ಕಳೆದ ತಿಂಗಳು ಮಾರ್ಚ್ ನಲ್ಲಿ ಅರವತ್ತು ಸಾವಿರದ ಗಡಿಯಲ್ಲಿದ್ದ ಬಂಗಾರ ಏಪ್ರಿಲ್ ನಲ್ಲಿ ಇದೀಗ ಎಪ್ಪತ್ತು ಸಾವಿರದ ಗಡಿ ದಾಟಿದೆ. ಕೇವಲ ಒಂದು ತಿಂಗಳ...