Sunday, April 14, 2024

ಕೆಎಂಎಫ್ ನಲ್ಲಿ ಹಲವು ಹುದ್ದೆಗಳಿಗೆ ಅರ್ಜಿ ಆಹ್ವಾನ : SSLC ಪಾಸಾದವರಿಗೆ ಸುವರ್ಣಾವಕಾಶ

ಕರ್ನಾಟಕ ಹಾಲು ಒಕ್ಕೂಟದ ವಿಜಯಪುರ ಮತ್ತು ಬಾಗಲಕೋಟ ಜಿಲ್ಲಾ ಸಹಕಾರ ಹಾಲು ಉತ್ಪಾದಕರ ಸಂಘಗಳ ಒಕ್ಕೂಟ ಲಿಮಿಟೆಡ್​ನ ಹಲವು ಹುದ್ದೆಗಳಿಗೆ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ವಿಜಯಪುರ ಮತ್ತು ಬಾಗಲಕೋಟ ಜಿಲ್ಲಾ ಸಹಕಾರ ಹಾಲು ಉತ್ಪಾದಕರ ಸಂಘದ ಅಧಿಕೃತ ವೆಬ್​ಸೈಟ್ bimul.deltainfo.in ಮೂಲಕ ಅರ್ಜಿ ಸಲ್ಲಿಸಬಹುದು.

ಹುದ್ದೆಗಳ ವಿವರಗಳು:

ಸಂಸ್ಥೆಯ ಹೆಸರು : KMF ವಿಜಯಪುರ ಮತ್ತು ಬಾಗಲಕೋಟ ಜಿಲ್ಲಾ ಸಹಕಾರ ಹಾಲು ಉತ್ಪಾದಕರ ಸಂಘಗಳ ಒಕ್ಕೂಟ ಲಿಮಿಟೆಡ್ (KMF VIMUL)

ಹುದ್ದೆಗಳ ಸಂಖ್ಯೆ: 40

ಉದ್ಯೋಗ ಸ್ಥಳ: ವಿಜಯಪುರ – ಬಾಗಲಕೋಟ

ಹುದ್ದೆಗಳ ಹೆಸರು: ಜೂನಿಯರ್ ಟೆಕ್ನಿಷಿಯನ್, ವಿಸ್ತರಣಾ ಅಧಿಕಾರಿ

ಹುದ್ದೆಗಳ ವಿಭಾಗವಾರು ಮಾಹಿತಿ:

 1. ಸಹಾಯಕ ವ್ಯವಸ್ಥಾಪಕ- 6 ಹುದ್ದೆಗಳು
 2. ತಾಂತ್ರಿಕ ಅಧಿಕಾರಿ- 2 ಹುದ್ದೆಗಳು
 3. ವಿಸ್ತರಣಾಧಿಕಾರಿ ಗ್ರೇಡ್3- 8 ಹುದ್ದೆಗಳು
 4. ರಸಾಯನಶಾಸ್ತ್ರಜ್ಞ ಗ್ರೇಡ್2- 3 ಹುದ್ದೆಗಳು
 5. ಜೂನಿಯರ್ ಸಿಸ್ಟಮ್ ಆಪರೇಟರ್- 3 ಹುದ್ದೆಗಳು
 6. ಆಡಳಿತ ಸಹಾಯಕ ಗ್ರೇಡ್2- 2 ಹುದ್ದೆಗಳು
 7. ಮಾರ್ಕೆಟಿಂಗ್ ಸಹಾಯಕ ಗ್ರೇಡ್2- 2 ಹುದ್ದೆಗಳು
 8. ಜೂನಿಯರ್ ತಂತ್ರಜ್ಞ- 8 ಹುದ್ದೆಗಳು
 9. ಮಿಲ್ಕ್ ಕೊರಿಯರ್ಸ್- 6 ಹುದ್ದೆಗಳು

ಶೈಕ್ಷಣಿಕ ಅರ್ಹತೆಗಳು:

 1. ಸಹಾಯಕ ವ್ಯವಸ್ಥಾಪಕ – B.V.Sc
 2. ತಾಂತ್ರಿಕ ಅಧಿಕಾರಿ- B.Sc , B.Tech (DT)
 3. ವಿಸ್ತರಣಾಧಿಕಾರಿ ಗ್ರೇಡ್3- ಯಾವುದೇ ಪದವಿ
 4. ರಸಾಯನಶಾಸ್ತ್ರಜ್ಞ ಗ್ರೇಡ್2- B.Sc
 5. ಜೂನಿಯರ್ ಸಿಸ್ಟಮ್ ಆಪರೇಟರ್- B.Sc, BCA
 6. ಆಡಳಿತ ಸಹಾಯಕ ಗ್ರೇಡ್2- ಯಾವುದೇ ಪದವಿ
 7. ಮಾರ್ಕೆಟಿಂಗ್ ಸಹಾಯಕ ಗ್ರೇಡ್2- ಬಿ.ಕಾಂ, ಬಿ.ಬಿ.ಎ
 8. ಜೂನಿಯರ್ ತಂತ್ರಜ್ಞ- ಎಸ್.ಎಸ್.ಎಲ್.ಸಿ., ಐ.ಟಿ.ಐ
 9. ಮಿಲ್ಕ್ ಕೊರಿಯರ್ಸ್​- ಎಸ್.ಎಸ್.ಎಲ್.ಸಿ

ವಯೋಮಿತಿ:

KMF ವಿಜಯಪುರ ಮತ್ತು ಬಾಗಲಕೋಟ ಜಿಲ್ಲಾ ಸಹಕಾರ ಹಾಲು ಉತ್ಪಾದಕರ ಸಂಘಗಳ ಒಕ್ಕೂಟ ಲಿಮಿಟೆಡ್ ನೇಮಕಾತಿ ಅಧಿಸೂಚನೆಯ ಪ್ರಕಾರ, ಈ ಹುದ್ದೆಗಳಿಗೆ ಕನಿಷ್ಠ 18 ವರ್ಷಗಳಿಂದ ಗರಿಷ್ಠ 35 ವರ್ಷದೊಳಗಿನ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು.

ವಯೋಮಿತಿ ಸಡಿಲಿಕೆ:

 • SC/ST/Cat-I ಅಭ್ಯರ್ಥಿಗಳಿಗೆ: 05 ವರ್ಷಗಳು
 • Cat-2A/2B/3A & 3B ಅಭ್ಯರ್ಥಿಗಳಿಗೆ: 03 ವರ್ಷಗಳು

ಅರ್ಜಿ ಶುಲ್ಕ:

 • SC/ST/Cat-I/PH ಅಭ್ಯರ್ಥಿಗಳಿಗೆ: ರೂ.500/-
 • ಎಲ್ಲಾ ಇತರ ಅಭ್ಯರ್ಥಿಗಳಿಗೆ: ರೂ.1000/-

ಆಯ್ಕೆ ಪ್ರಕ್ರಿಯೆ:

ಈ ಹುದ್ದೆಗಳಿಗೆ ಲಿಖಿತ ಪರೀಕ್ಷೆ ಮತ್ತು ಸಂದರ್ಶನದ ಮೂಲಕ ಅರ್ಹ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗುತ್ತದೆ.

ವೇತನ:

 1. ಸಹಾಯಕ ವ್ಯವಸ್ಥಾಪಕ – ರೂ.52650 ರಿಂದ 97100/-
 2. ತಾಂತ್ರಿಕ ಅಧಿಕಾರಿ- ರೂ.43100 ರಿಂದ 83900/-
 3. ವಿಸ್ತರಣಾಧಿಕಾರಿ ಗ್ರೇಡ್-3- ರೂ.33450 ರಿಂದ 62600/-
 4. ರಸಾಯನಶಾಸ್ತ್ರಜ್ಞ ಗ್ರೇಡ್-2- ರೂ.27650 ರಿಂದ 52650/-
 5. ಜೂನಿಯರ್ ಸಿಸ್ಟಮ್ ಆಪರೇಟರ್- ರೂ.27650 ರಿಂದ 52650/-
 6. ಆಡಳಿತ ಸಹಾಯಕ ಗ್ರೇಡ್2- ರೂ.27650 ರಿಂದ 52650/-
 7. ಮಾರ್ಕೆಟಿಂಗ್ ಸಹಾಯಕ ಗ್ರೇಡ್2- ರೂ.27650 ರಿಂದ 52650/-
 8. ಜೂನಿಯರ್ ತಂತ್ರಜ್ಞ- ರೂ.21400 ರಿಂದ 42000/-

ಪ್ರಮುಖ ದಿನಾಂಕ:

ಈ ಹುದ್ದೆಗಳಿಗೆ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ- ಏಪ್ರಿಲ್ 25, 2023

ಈ ನೇಮಕಾತಿಗೆ ಸಂಬಂಧಿಸಿದ ಪ್ರಮುಖ ಲಿಂಕ್‌ಗಳು:

More from the blog

ಬಾಲಿವುಡ್ ನಟ ಸಲ್ಮಾನ್​ ಖಾನ್ ಮನೆ ಮುಂದೆ ಗುಂಡಿನ ದಾಳಿ

ಮುಂಬೈ: ಬಾಲಿವುಡ್ ಆ್ಯಕ್ಟರ್​ ಸಲ್ಮಾನ್ ಖಾನ್ ಅವರ ನಿವಾಸದ ಮೇಲೆ ಇಂದು ಬೆಳಗಿನ ಜಾವ 5 ಗಂಟೆಗೆ ದುಷ್ಕರ್ಮಿಗಳು ಬೈಕ್​ನಲ್ಲಿ ಬಂದು 5 ಸುತ್ತು ಫೈರಿಂಗ್ ಮಾಡಿ ಎಸ್ಕೇಪ್ ಆಗಿದ್ದಾರೆ. ಮುಂಬೈನ ಬಾಂದ್ರಾ ಪ್ರದೇಶದಲ್ಲಿರುವ...

ಆಟವಾಡುತ್ತಾ ಜಮೀನಿನಲ್ಲಿದ್ದ ಬೋರ್‌ವೆಲ್​ಗೆ ಬಿದ್ದ 6 ವರ್ಷದ ಬಾಲಕ

ಆರು ವರ್ಷದ ಬಾಲಕನೋರ್ವ ತೆರೆದ ಬೋರ್​ವೆಲ್ ಒಳಕ್ಕೆ ಬಿದ್ದ ಘಟನೆ ಮಧ್ಯಪ್ರದೇಶದ ರೇವಾದಲ್ಲಿ ಬೆಳಕಿಗೆ ಬಂದಿದೆ. ಬೋರ್​ವೆಲ್​ಗೆ ಬಿದ್ದ ಬಾಲಕನನ್ನು ರೇವಾ ಜಿಲ್ಲೆಯ ಜಾನೆ ಪೊಲೀಸ್ ಠಾಣೆ ವ್ಯಾಪ್ತಿಯ ಮಾಣಿಕಾ ಗ್ರಾಮದ ಮಯಾಂಕ್ ಎಂದು...

ಇಂದಿನಿಂದ ಅಂಚೆ ಮತದಾನ ಪ್ರಾರಂಭ

ಇಂದಿನಿಂದ 85 ವರ್ಷ ಮೇಲ್ಪಟ್ಟ ಹಾಗೂ ವಿಶೇಷ ಚೇತನರಿಂದ ಅಂಚೆ ಮತದಾನ ನಡೆಯಲಿದೆ. ಏಪ್ರಿಲ್ 18ರವರೆಗೆ ಮನೆಯಿಂದಲೇ ಗೌಪ್ಯ ಮತದಾನಕ್ಕೆ ಅವಕಾಶ ಮಾಡಲಾಗಿದೆ. ಇಂದಿನಿಂದ ಏಪ್ರಿಲ್ 18ರವರೆಗೆ ಮನೆಯಿಂದಲೇ ಗೌಪ್ಯ ಮತದಾನಕ್ಕೆ ಅವಕಾಶವಿದೆ. ಬೆಂಗಳೂರು...

ರಾಮೇಶ್ವರಂ ಕೆಫೆ ಬ್ಲಾಸ್ಟ್‌ ಪ್ರಕರಣ : ನಿದ್ದೆಯಲ್ಲಿದ್ದ ಉಗ್ರರನ್ನು ಬಡಿದೆಬ್ಬಿಸಿದ ಎನ್ಐಎ

ಬೆಂಗಳೂರು: ರಾಮೇಶ್ವರಂ ಕೆಫೆ ಬ್ಲಾಸ್ಟ್‌ ಪ್ರಕರಣಕ್ಕೆ ಸಂಬಂಧಪಟ್ಟಂತೆ ರಾಷ್ಟ್ರೀಯ ತನಿಖಾ ಸಂಸ್ಥೆ ಭರ್ಜರಿ ಕಾರ್ಯಾಚರಣೆ ನಡೆಸಿ, ಉಗ್ರರ ಗ್ಯಾಂಗ್ ಅನ್ನು ಬಂಧಿಸುವಲ್ಲಿ ಯಶಸ್ವಿಯಾಗಿದೆ. ರಾಮೇಶ್ವರಂ ಕೆಫೆ ಬಾಂಬರ್‌ ಗ್ಯಾಂಗ್ ಬಂಧಿಸಲು NIA ಭರ್ಜರಿ ಬಲೆ...