Friday, April 19, 2024

ಕಂಕನಾಡಿ ಶ್ರೀ ಬ್ರಹ್ಮಬೈದರ್ಕಳ ಗರಡಿಗೆ 150ರ ಸಂಭ್ರಮ : ನಾಗಬ್ರಹ್ಮ ಮಂಡಲೋತ್ಸವ ಸಂಪನ್ನ

ಮಂಗಳೂರು: ಕಂಕನಾಡಿ ಶ್ರೀ ಬ್ರಹ್ಮಬೈದರ್ಕಳ ಗರಡಿ ಕ್ಷೇತ್ರ ಸ್ಥಾಪನೆಗೊಂಡು 150 ವರ್ಷ ಪೂರ್ಣಗೊಂಡ ಹಿನ್ನೆಲೆಯಲ್ಲಿ ಮಾ.3ರಿಂದ ಆರಂಭಗೊಂಡ “ಗರಡಿ ಸಂಭ್ರಮ-150′ ಬುಧವಾರ ಬೆಳಗ್ಗೆ ಸಂಪನ್ನಗೊಂಡಿತು. 5 ದಿನಗಳ ಕಾರ್ಯಕ್ರಮದಲ್ಲಿ ಲಕ್ಷಾಂತರ ಭಕ್ತರು ಭಾಗವಹಿಸಿ, ದೈವ-ದೇವರ ಪ್ರಸಾದವನ್ನು ಸ್ವೀಕರಿಸಿದರು.

ಕ್ಷೇತ್ರಕ್ಕೆ 150 ವರ್ಷ ತುಂಬಿದ ಸಲುವಾಗಿ ಮಾ.3ರಿಂದ ಸಹಸ್ರ ನಾರಿಕೇಳ ಗಣಯಾಗ, ಬ್ರಹ್ಮ ಬೈದರ್ಕಳರಿಗೆ ಸಹಸ್ರ ಕುಂಭಾಭಿಷೇಕ, ಆಶ್ಲೇಷ ಬಲಿ ಸೇರಿದಂತೆ ವಿವಿಧ ಧಾರ್ಮಿಕ ಕಾರ್ಯಕ್ರಮ ನಡೆದವು. ಈ ಕಾರ್ಯಕ್ರಮಗಳಲ್ಲಿ ಲಕ್ಷಕ್ಕೂ ಅಧಿಕ ಮಂದಿ ಭಾಗವಹಿಸಿದ್ದರು. ಕಂಕನಾಡಿ ಕ್ಷೇತ್ರದಲ್ಲಿ ಫಲಪುಷ್ಪಗಳಿಂದ ಅಲಂಕೃತವಾಗಿದ್ದ ಭವ್ಯವೇದಿಕೆಯಲ್ಲಿ ಮನೋಜ್‌ ಶಾಂತಿ ಮತ್ತು ಬಳಗದವರು ನಾಗಬ್ರಹ್ಮ ಮಂಡಲೋತ್ಸವವನ್ನು ಅಚ್ಚುಕಟ್ಟಾಗಿ ನಡೆಸಿಕೊಟ್ಟರು. ಕರಾವಳಿಯಾದ್ಯಂತ ನಡೆಯುವ ನಾಗಮಂಡಲೋತ್ಸವವನ್ನು ಬ್ರಾಹ್ಮಣ ಸಮುದಾಯವರೇ ಹೆಚ್ಚಾಗಿ ನೆರವೇರಿಸುತ್ತಾರೆ. ಆದ್ರೆ ಕಂಕನಾಡಿ ಕ್ಷೇತ್ರದ ನಾಗಬ್ರಹ್ಮ ಮಂಡಲೋತ್ಸವವನ್ನು ಬಿಲ್ಲವ ಸಮುದಾಯದ ನಾಗಪಾತ್ರಿ ಮನೋಜ್‌ ಶಾಂತಿ ಮತ್ತು ಬಳಗದವರು ನಿರ್ವಹಿಸಿದರು.

ಕಂಕನಾಡಿ ಗರಡಿ ಕ್ಷೇತ್ರದ ಅಧ್ಯಕ್ಷ ಚಿತ್ತರಂಜನ್‌ ಕೆ. ಅವರು, “ಗರಡಿ ಸಂಭ್ರಮ ನಿರೀಕ್ಷೆಗೂ ಮೀರಿ ಬಹು ಯಶಸ್ಸು ಕಂಡಿದೆ. ಕ್ಷೇತ್ರದ ಬ್ರಹ್ಮಬೈದರ್ಕಳ ಹಾಗೂ ಪರಿವಾರ ದೈವ-ದೇವರ ಅನುಗ್ರಹದಿಂದ ಇದು ಸಾಧ್ಯವಾಗಿದೆ. ಕ್ಷೇತ್ರದ ಆಡಳಿತ ಮಂಡಳಿ, ಸಂಭ್ರಮ ಉತ್ಸವ ಸಮಿತಿ, ಜಿಲ್ಲಾಡಳಿತ, ಜನಪ್ರತಿನಿಧಿಗಳು, ನಾಡಿನ ವಿವಿಧ ಭಾಗದ ಸ್ವಯಂ ಸೇವಕರು ಹಾಗೂ ಸಂಘ ಸಂಸ್ಥೆಯ ಸಹಕಾರದಿಂದ ಈ ಯಶಸ್ಸು ಲಭಿಸಿದೆ’ ಎಂದರು.

More from the blog

ಬಿಸಿರೋಡಿನ ವಾಣಿಜ್ಯ ಕಟ್ಟಡದ ಜಗುಲಿಯಲ್ಲಿ ಚೆಲ್ಲಿರುವ ರಕ್ತ : ಹಲವು ಅನುಮಾನ

ಬಂಟ್ವಾಳ: ಬಿಸಿರೋಡಿನ ವಾಣಿಜ್ಯ ಮಳಿಗೆಯ ಮುಂಭಾಗವೊಂದರಲ್ಲಿ ರಕ್ತ ಚೆಲ್ಲಿರುವುದು ಕಂಡು ಬಂದಿದ್ದು, ಅಂಗಡಿ ಮಾಲಕರಲ್ಲಿ ಒಂದಷ್ಟು ಗೊಂದಲ ಉಂಟಾದ ಘಟನೆ ನಡೆದಿದೆ. ಎ.18 ರಂದು ಬೆಳಿಗ್ಗೆ ತಾ.ಪಂ. ನ ವಾಣಿಜ್ಯ ಕಟ್ಟಡವೊಂದರ ಜಗುಲಿಯಲ್ಲಿ ರಕ್ತ...

ಲೋಕಸಭಾ ಚುನಾವಣೆ : ಎ.20 ರಂದು‌ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಅವರ ಬೃಹತ್ ಚುನಾವಣಾ ಪ್ರಚಾರ

ಬಂಟ್ವಾಳ: ಲೋಕಸಭಾ ಚುನಾವಣೆಯ ಪ್ರಚಾರ ಬಿರುಸಿನಿಂದ ನಡೆಯುತ್ತಿದ್ದು, ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಅವರು ಎ.20 ರಂದು‌ ಶನಿವಾರ ಮಧ್ಯಾಹ್ನ 2.30 ಕ್ಕೆ ಗಂಟೆಗೆ ಬಿಸಿರೋಡಿನ ಬ್ರಹ್ಮ ಶ್ರೀನಾರಾಯಣ ಗುರು ಮಂದಿರದಲ್ಲಿ ಬೃಹತ್ ಚುನಾವಣಾ...

ಹಿಮ್ಮುಖವಾಗಿ ಚಲಿಸಿದ ಪಿಕಪ್‌… ವ್ಯಕ್ತಿ ಸಾವು

ಬೆಳ್ತಂಗಡಿ: ಶಿಬಾಜೆ ಗ್ರಾಮದ ತಂಬ್ಲಾಜೆಯಲ್ಲಿ ಪಿಕಪ್‌ ವಾಹನವೊಂದು ಹಿಮ್ಮುಖವಾಗಿ ಚಲಿಸಿದ ಪರಿಣಾಮ ಗಂಭೀರವಾಗಿ ಗಾಯಗೊಂಡಿದ್ದ ವ್ಯಕ್ತಿ ಚಿಕಿತ್ಸೆ ಫಲಿಸದೆ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ ಘಟನೆ ನಡೆದಿದೆ. ರುಕ್ಮ ಮುಗೇರ ಹಾಗೂ ನಾಗೇಶ್‌ ಅವರು ಪಿಕಪ್‌ ವಾಹನದಲ್ಲಿ...

ಜೀಪ್ ಬೈಕ್ ಗೆ ಡಿಕ್ಕಿ… ಬೈಕ್ ಸವಾರ ಸಾವು : ಇಬ್ಬರು ಮಕ್ಕಳು ಗಂಭೀರ

ಪುತ್ತೂರು: ಜೀಪೊಂದು ಬೈಕ್ ಗೆ ಡಿಕ್ಕಿ ಯಾಗಿ ಬೈಕ್ ಸವಾರ ಸ್ಥಳದಲ್ಲಿಯೇ ಮೃತಪಟ್ಟ ಘಟನೆ ಕಣಿಯೂರು- ಮಂಜೇಶ್ವರ ಅಂತರಾಜ್ಯ ರಸ್ತೆಯ ನರಿಮೊಗರು ಗ್ರಾಮದ ಪಾಪೆತ್ತಡ್ಕ ಎಂಬಲ್ಲಿ ನಡೆದಿದೆ. ಪುತ್ತೂರು ತಾಲೂಕಿನ ಬಡಕ್ಕೋಡಿ ಕಡ್ಯ ನಿವಾಸಿ...