Tuesday, April 9, 2024

ಮಾಯಿಲೋಡಿಬೀಡು ಮನೆಯ ನಾಗಂತಿಮಾರು ನಾಗರಕ್ತೇಶ್ವರಿ ಬನದಲ್ಲಿ ನಾಗಶಿಲಾ ಪ್ರತಿಷ್ಠೆಯ ತ್ರಯೋದಶ ವರ್ಧಂತ್ಯುತ್ಸವ

ಮಾಯಿಲೋಡಿಬೀಡು ಮನೆಯ ನಾಗಂತಿಮಾರು ನಾಗರಕ್ತೇಶ್ವರಿ ಬನದಲ್ಲಿ ಬ್ರಹ್ಮಶ್ರೀ ದೇರೆಬೈಲು ಡಾ. ಶಿವಪ್ರಸಾದ ತಂತ್ರಿವರೇಣ್ಯರ ಕೃಪಾಶೀರ್ವಾದಗಳೊಂದಿಗೆ ವೇದಮೂರ್ತಿ ಬಳ್ಳಮಂಜ ಶ್ರೀ ನಾರಾಯಣ ಪುತ್ತೂರಾಯರ ನೇತೃತ್ವದಲ್ಲಿ ನಾಗಶಿಲಾ ಪ್ರತಿಷ್ಠೆಯ ತ್ರಯೋದಶ ವರ್ಧಂತ್ಯುತ್ಸವ ಇಂದು ನಡೆಯಿತು.

ಬೆಳಿಗ್ಗೆ ದೇವತಾ ಪ್ರಾರ್ಥನೆ, ಪಂಚಗವ್ಯ ಪುಣ್ಯಾಹ, ನವಕಲಶ ಪ್ರಧಾನ ಹೋಮ, ಪವಮಾನ ಕಲಶ, ಪಂಚಾಮೃತ ಅಭಿಷೇಕ, ತಂಬಿಲಸೇವೆ, ಪ್ರಸನ್ನ ಪೂಜೆ, ಪ್ರಸಾದ ವಿತರಣೆ ನಡೆದ ಬಳಿಕ ಮಧ್ಯಾಹ್ನ ಅನ್ನಸಂತರ್ಪಣೆ ನಡೆಯಿತು.

ಈ ಸಂದರ್ಭದಲ್ಲಿ ಮಾಜಿ ಜಿಲ್ಲಾ ಪಂಚಾಯತ್ ಸದಸ್ಯ ತುಂಗಪ್ಪ ಬಂಗೇರ, ಗ್ರಾಮ ಪಂಚಾಯತ್ ಅಧ್ಯಕ್ಷ ಚಂದ್ರಕಾಂತ ನಿಡ್ಡಾಜೆ, ಯುವರಾಜ ಜೈನ್ ಹಾಗೂ ಕುಟುಂಬಸ್ಥರು, ಮಾಯಿಲೋಡಿಬೀಡು. ಸುರೇಶ್ ಕುಮಾರ್ ಜೈನ್ ಹಾಗೂ ಕುಟುಂಬಸ್ಥರು, ಮಾಯಿಲೋಡಿಬೀಡು.  ಸದಾನಂದ ಪೂಜಾರಿ ಹಾಗೂ ಕುಟುಂಬಸ್ಥರು ಕುರುಡಂಗೆ. ಮೇಘರಾಜ ಆಳ್ವ ಮತ್ತು ಸಹೋದರ-ಸಹೋದರಿಯರು ದೋಲ ಹಾಗೂ ಕುಟುಂಬಸ್ಥರು, ಮಾಯಿಲೋಡಿಬೀಡು ಹಾಗೂ ಊರ ಹತ್ತು ಸಮಸ್ತರು ಭಾಗಿಯಾದರು. qzs

More from the blog

ಭಕ್ತರೇ ಗಮನಿಸಿ…. ಈ ದಿನ ಪಣೋಲಿಬೈಲು ಶ್ರೀ ಕಲ್ಲುರ್ಟಿ ದೈವಸ್ಥಾನದಲ್ಲಿ ಆಗೇಲು ಸೇವೆ ಇರುವುದಿಲ್ಲ

ಬಂಟ್ವಾಳ ತಾಲೂಕು ಸಜೀಪಮೂಡ ಪಣೋಲಿಬೈಲು ಶ್ರೀ ಕಲ್ಲುರ್ಟಿ ದೈವಸ್ಥಾನದಲ್ಲಿ ಏ.12, 14, 16 ರಂದು ಆಗೇಲು ಸೇವೆ ಇರುವುದಿಲ್ಲ. ಏ. 19ರಿಂದ ಆಗೇಲು ಸೇವೆ ನಡೆಯುತ್ತದೆ ಹಾಗೂ ಏ.21 ರಂದು ಆಗೇಲು ಸೇವೆ...

ಲೋಕಸಭಾ ಚುನಾವಣೆ : ಅಕ್ರಮ ವ್ಯವಹಾರಿಗಳಿಗೆ ರಹದಾರಿಯಾದ ಸಾಲೆತ್ತೂರು ಬಳಿಯ ಕೂಡುರಸ್ತೆ ಚೆಕ್ ಪೋಸ್ಟ್

ವಿಟ್ಲ: ಲೋಕಸಭಾ ಚುನಾವಣೆಗೆ ಈಗಾಗಲೇ ದಿನ ನಿಗದಿಯಾಗಿದ್ದು, ಜಿಲ್ಲಾಡಳಿತ ಸರ್ವ ಸನ್ನದ್ದವಾಗಿದೆ. ಅಕ್ರಮಗಳನ್ನು ತಡೆಗಟ್ಟುವ ಉದ್ದೇಶದಿಂದ ದಕ್ಷಿಣ ಕನ್ನಡ ಜಿಲ್ಲಾಡಳಿತವು ಗಡಿಪ್ರದೇಶ ಸೇರಿದಂತೆ ಜಿಲ್ಲೆಯಲ್ಲಿ 23 ಕಡೆಗಳಲ್ಲಿ ಚೆಕ್ ಪೋಸ್ಟ್ ಗಳನ್ನು ಸ್ಥಾಪಿಸಿದೆ. ಆದರೆ...

5,8,9,11ನೇ ತರಗತಿ ಪರೀಕ್ಷೆ ಫಲಿತಾಂಶಕ್ಕೆ ಸುಪ್ರೀಂ ತಡೆ

ಹೊಸದಿಲ್ಲಿ: 5, 8, 9 ಮತ್ತು 11 ನೇ ತರಗತಿಗಳ ಬೋರ್ಡ್ ಪರೀಕ್ಷೆಗಳ ಫಲಿತಾಂಶಗಳನ್ನು ಪ್ರಕಟಿಸಲು ಸುಪ್ರೀಂ ಕೋರ್ಟ್ ಸೋಮವಾರ ತಡೆಯಾಜ್ಞೆ ನೀಡಿದೆ. ರಾಜ್ಯದಲ್ಲಿ 5, 8, 9ನೇ ತರಗತಿಗೆ ಬೋರ್ಡ್​ ಪರೀಕ್ಷೆ ಮುಗಿದಿದ್ದು,...

ಮನೆಯೊಳಗೆ ‌ನುಗ್ಗಿ ವ್ಯಕ್ತಿಗೆ ಚೂರಿ ಇರಿತ : ಆರೋಪಿ ಪರಾರಿ

ಬಂಟ್ವಾಳ: ಮನೆಯೊಳಗೆ ‌ನುಗ್ಗಿ ವ್ಯಕ್ತಿಯೋರ್ವನಿಗೆ ಚೂರಿ ಹಾಕಿ ಪರಾರಿಯಾಗಿರುವ ಘಟನೆ ಬಂಟ್ವಾಳ ಗ್ರಾಮಾಂತರ ಪೋಲೀಸ್ ಠಾಣಾ ವ್ಯಾಪ್ತಿಯ ಪುದು ಎಂಬಲ್ಲಿ ನಡೆದಿದೆ. ಪುದು ಗ್ರಾಮದ 10 ನೇ ಮೈಲಿಕಲ್ಲು ನಿವಾಸಿ...