Tuesday, April 16, 2024

ಬಹುಮುಖ ಸಂಸ್ಕೃತಿಗಳ ಪ್ರತೀಕವೇ ಕಾಂಗ್ರೆಸ್ ಪಕ್ಷ- ಎಂ.ಜಿ.ಹೆಗ್ಡೆ

ಬಹುಮುಖ ಸಂಸ್ಕೃತಿಗಳ ಪ್ರತೀಕವೇ ಕಾಂಗ್ರೆಸ್ ಪಕ್ಷ ಎಂದು ಎಂ.ಜಿ.ಹೆಗ್ಡೆ ಹೇಳಿದರು.

ಅವರು ಮಾ.17 ರಂದು ಏಳನೇ ದಿನದ ಪ್ರಜಾಧ್ವನಿ ಯಾತ್ರೆಯ ಸಭಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು. ಒರಿಜಿನಲ್ ಹಿಂದುತ್ವ ಅಲ್ಲ ಕೇವಲ ಡೋಂಗಿ ಹಿಂದುತ್ವದ ಅಧಾರದ ಮೇಲೆ ಬಿಜೆಪಿ ರಾಜಕೀಯ ಮಾಡುತ್ತಿದೆ ಎಂದು ಅವರು ಆರೋಪ ಮಾಡಿದರು‌.

ಚುನಾವಣೆ ಬಂದಾಗ ಹಿಂದುತ್ವ, ಭಾವನಾತ್ಮಕ ವಿಚಾರವನ್ನು ರಾಜಕೀಯ ವಾಗಿ ಬಳಸಿಕೊಂಡು ಮತಬ್ಯಾಂಕ್ ಮಾಡುತ್ತದೆ ಎಂದು ಅರೋಪ ಮಾಡಿದ ಅವರು ,ಕಾಂಗ್ರೆಸ್ ಅಭಿವೃದ್ಧಿ ವಿಚಾರದಲ್ಲಿ ಚುನಾವಣೆ ಎದುರಿಸಿದರೆ, ಬಿಜೆಪಿ ಭಾವನಾತ್ಮಕ ವಿಚಾರ, ಹಿಂದುತ್ವದ ವಿಚಾರದಲ್ಲಿ ಚುನಾವಣೆಯನ್ನು ಎದುರಿಸುವುದು ಬಿಟ್ಟರೆ ಅಭಿವೃದ್ಧಿಯ ರಾಜಕಾರಣ ಇಲ್ಲ ಎಂದು ಅವರು ತಿಳಿಸಿದರು.

ಕಾಂಗ್ರೆಸ್ ಹಿಂದೂ ವಿರೋಧಿ ಎಂಬ ಅಪಪ್ರಚಾರವನ್ನು ಬಿಜೆಪಿಯವರಿಂದ ಮಾಡಲಾಗಿದೆ. ಕಾಂಗ್ರೆಸ್ ಬೆಂಬಲಿಸುವ ಎಲ್ಲರನ್ನೂ ಹಿಂದೂ ವಿರೋಧಿಗಳೆಂದು ಬಿಂಬಿಸುವ ಕೆಲಸ ಬಿಜೆಪಿಯಿಂದ ಮಾಡಲಾಗಿದೆ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು .

ಮತೀವಾದದ ಅಜೆಂಡಾ ಮೂಲಕ ಅಧಿಕಾರ ನಡೆಸಲು ಸಾಧ್ಯವಿಲ್ಲ ಎಂದು ಬಿಜೆಪಿಗೆ ಟಾಂಗ್ ನೀಡಿದರು. ದಿನಬಳಕೆಯ ವಸ್ತುಗಳ ಬೆಲೆ ಗಗನಕ್ಕೆ ಏರಿದೆ, ಬೆಲೆ ಏರಿಕೆ ಬಗ್ಗೆ ನಿಯಂತ್ರಣ ಮಾಡಲು ಬಿಜೆಪಿಗೆ ಯಾಕೆ ಸಾಧ್ಯವಾಗಿಲ್ಲ ಎಂದು ಪ್ರಶ್ನಿಸಿದರು.

ಪ್ರಜಾಧ್ವನಿ ಯಾತ್ರೆಯ ರೂವಾರಿ, ಮಾಜಿ ಸಚಿವ ಬಿ.ರಮಾನಾಥ ರೈ ಮಾತನಾಡಿ, ನಕಾರಾತ್ಮಕ ಸೈಕೊಲಾಜಿಗೆ ಜನ ಹೆಚ್ಚು ಮರುಳಾಗುತ್ತಾರೆ. ಸುಳ್ಳು ಜ್ವಾಲಾಮುಖಿಯ ರೀತಿಯಲ್ಲಿ ಹರಡುತ್ತದೆ, ಆದರೆ ಸತ್ಯ ಹರಡುವುದಿಲ್ಲ.ನನ್ನ ಇಲ್ಲ ಸಲ್ಲದ ಅಪಪ್ರಚಾರಗಳನ್ನು ಮಾಡಿದ್ದಾರೆ, ಇದು ನನಗೆ ಅತೀವ ಬೇಸರ ತಂದಿದೆ ಎಂದರು.

ನನ್ನನ್ನು ಶಾಸಕ‌,ಮಂತ್ರಿಯಾಗಿ ಮಾಡಿದ, ಕ್ಷೇತ್ರದ ಮತದಾರ ಬಂದುಗಳಿಗೆ ಮೋಸಮಾಡುವುದಿಲ್ಲ,ಮತ ನೀಡಿದ ಕ್ಷೇತ್ರದ ಜನರ ಋಣ ತೀರಿಸಲು ಜನ್ಮ ಜನ್ಮಾಂತರಗಳಿಂದ ಸಾಧ್ಯವಿಲ್ಲ ಎಂದು ಅವರು ತಿಳಿಸಿದರು.

ಮತ್ತೆ ಅಪಪ್ರಚಾರ ಮಾಡಲು ವಿರೋದಿಗಳು ಶುರು ಮಾಡಿದ್ದಾರೆ, ಆದರೆ ನಾನು ಅಂತಹ ಯಾವುದೇ ತಪ್ಪು ಮಾಡಿಲ್ಲ ಎಂಬುದನ್ನು ಅವರು ತಿಳಿಸಿದರು.

ನೀಚ ಪ್ರವೃತ್ತಿ ಹಾಗೂ ಸರ್ವಾಧಿಕಾರಿ ಮನೋಪ್ರವೃತ್ತಿಯ ರಾಜಕಾರಣ ಬಂಟ್ವಾಳದಲ್ಲಿ ನಡೆಯುತ್ತಿದೆ ಎಂದು ಆರೋಪ ಮಾಡಿದರು.    ಬಡವರಿಗಾಗಿ ಜಾರಿಯಾದ ಯೋಜನೆಗಳಿಗೆ ಅನುದಾನ ಒದಗಿಸಲು ಸಾಧ್ಯವಾಗದ ದರಿದ್ರ ಸರಕಾರ ರಾಜ್ಯದಲ್ಲಿ ಆಡಳಿತ ನಡೆಸಿದೆ ಎಂಬುದು ನಾಚಿಕೆಯ ವಿಚಾರ ಎಂದು ಹೇಳಿದರು.

ಜೆ.ಡಿ.ಎಸ್.ಪಕ್ಷದ ಕಾರ್ಯಕರ್ತ ಅಮಾನುಲ್ಲಾ ಗುಡ್ಡೆಯಂಗಡಿ ಅವರು ಕಾಂಗ್ರೆಸ್ ಗೆ ಸೇರ್ಪಡೆಯಾದರು.

ಈ ಸಂದರ್ಭದಲ್ಲಿ ಯಾತ್ರೆಯ ಪ್ರಮುಖರಾದ ಪಿಯೂಸ್ ಎಲ್. ರೋಡ್ರಿಗಸ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರುಗಳಾದ ಬೇಬಿ ಕುಂದರ್, ಸುದೀಪ್ ಶೆಟ್ಟಿ ಮಾಣಿ, ಪುರಸಭಾ ಸದಸ್ಯರಾದ ಸಿದ್ದೀಕ್ ಬೋಗೋಡಿ, ಮಹಮ್ಮದ್ ನಂದರಬೆಟ್ಟು, ವಾಸು ಪೂಜಾರಿ, ಲೋಲಾಕ್ಷ ಶೆಟ್ಟಿ,ಹಸೈನಾರ್ ಕೈಕಂಬ, ಮಾಜಿ ಜಿ.ಪಂ.ಸದಸ್ಯರಾದ ಚಂದ್ರಪ್ರಕಾಶ್ ಶೆಟ್ಟಿ ತುಂಬೆ,ಪದ್ಮಶೇಖರ್ ಜೈನ್, ತಾ.ಪಂ.ಮಾಜಿ ಉಪಾಧ್ಯಕ್ಷ ಅಬ್ಬಾಸ್ ಆಲಿ, ತಾ.ಪಂ.ಸದಸ್ಯರಾದ ಉಸ್ಮಾನ್ ಕರೋಪಾಡಿ, ಪ್ರಮುಖರಾದ ಶಾಹುಲ್ ಹಮೀದ್, ಸುದರ್ಶನ ಜೈನ್, ಬಾಲಕೃಷ್ಣ ಶೆಟ್ಟಿ ಕೊಡಾಜೆ, ಶೋಬಿತ್ ಪೂಂಜಾ, ರಮೇಶ್ ಪಣೋಲಿಬೈಲು, ಚಿತ್ತರಂಜನ್ ಶೆಟ್ಟಿ, ಸಂಜೀವ ಪೂಜಾರಿ, ಪದ್ಮನಾಭ ರೈ,ಚಂದ್ರಶೇಖರ ಪೂಜಾರಿ, ರಾಜೀವ ಶೆಟ್ಟಿ ಎಡ್ತೂರು, ಮೊಹಮ್ಮದ್ ಇಕ್ಬಾಲ್,ಇಬ್ರಾಹಿಂ ನವಾಜ್, ವೆಂಕಪ್ಪ ಪೂಜಾರಿ, ಮತ್ತಿತರರು ಉಪಸ್ಥಿತರಿದ್ದರು.

More from the blog

ಏ.19 -28: ಇತಿಹಾಸ ಪ್ರಸಿದ್ಧ ಕಟ್ಟತ್ತಿಲ ಉರೂಸ್

ವಿಟ್ಲ: ಸಾಲೆತ್ತೂರು ಗ್ರಾಮದ ಕಟ್ಟತ್ತಿಲದಲ್ಲಿ ಅಂತ್ಯ ವಿಶ್ರಾಂತಿ ಹೊಂದುತ್ತಿರುವ ಇತಿಹಾಸ ಪ್ರಸಿದ್ಧ ಅಸ್ಸಯ್ಯಿದ್ ವಲಿಯುಲ್ಲಾಹಿ (ಖ.ಸಿ) ಅವರ ಹೆಸರಿನಲ್ಲಿ 2 ವರ್ಷಕ್ಕೊಮ್ಮೆ ನಡೆಸಿಕೊಂಡು ಬರುತ್ತಿರುವ ಉರೂಸ್ ಕಾರ್ಯಕ್ರಮ ಮತ್ತು ವಿವಿಧ ಆಧ್ಯಾತ್ಮಿಕ ಕಾರ್ಯಕ್ರಮ...

ಲೋಕಸಭಾ ಚುನಾವಣೆ : ದಕ್ಷಿಣ ಕನ್ನಡ ಕ್ಷೇತ್ರದ ಸಂಯೋಜಕರನ್ನಾಗಿ ಅಬ್ದುಲ್ ರೆಹಮಾನ್ ಪಡ್ಪು ನೇಮಕ

ಲೋಕಸಭಾ ಚುನಾವಣೆಯ ದಕ್ಷಿಣ ಕನ್ನಡ ಕ್ಷೇತ್ರದಲ್ಲಿ ಕಾರ್ಯ ನಿರ್ವಹಿಸಲು ಸಂಯೋಜಕರನ್ನಾಗಿ ಅಬ್ದುಲ್ ರೆಹಮಾನ್ ಪಡ್ಪು ಅವರನ್ನು ನೇಮಕ ಮಾಡಲಾಗಿದೆ.    

ವಿಟ್ಲ ಪೇಟೆಯಲ್ಲಿ ಕಾಂಗ್ರೆಸ್ ರೋಡ್ ಶೋ: ಸುಡುಬಿಸಿಲಿಗೂ ಜಗ್ಗದ ಉತ್ಸಾಹ

ವಿಟ್ಲ: ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಪದ್ಮರಾಜ್ ಆರ್. ಪೂಜಾರಿ ಅವರು ಮಂಗಳವಾರ ವಿಟ್ಲ ಪೇಟೆಯಲ್ಲಿ ರೋಡ್ ಶೋ ನಡೆಸಿ, ಪ್ರಚಾರ ಕಾರ್ಯ ನಡೆಸಿದರು. ಧಾರ್ಮಿಕ ಕೇಂದ್ರಗಳಲ್ಲಿ ವಿಶೇಷ ಪ್ರಾರ್ಥನೆ ನಡೆಸಿ, ಬಳಿಕ...

ದ.ಕ ಜಿಲ್ಲೆಯ 42 ಮಂದಿ ಜೆಡಿಎಸ್ ಪದಾಧಿಕಾರಿಗಳು ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆ

ಮಂಗಳೂರು: ಲೋಕಸಭಾ ಚುನಾವಣೆಯಲ್ಲಿ ಜೆಡಿಎಸ್ ಪಕ್ಷ ಬಿಜೆಪಿ ಜತೆ ಮೈತ್ರಿ ಮಾಡಿಕೊಂಡಿರುವುದನ್ನು ವಿರೋಧಿಸಿ ದ.ಕ ಜಿಲ್ಲೆಯ 42 ಮಂದಿ ಜೆಡಿಎಸ್ ಪದಾಧಿಕಾರಿಗಳು ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆ ಗೊಂಡರು ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಜಿಲ್ಲಾ ಕಾಂಗ್ರೆಸ್...