Friday, April 12, 2024

ಏ.1ರಿಂದ HUID ಸಂಖ್ಯೆ ಇಲ್ಲದ ಒಡವೆಗಳ ಮಾರಾಟ ನಿಷೇಧ ; ಏನಿದು ಹೊಸ ಹಾಲ್​ಮಾರ್ಕ್…?

ಬೆಂಗಳೂರು: ಭಾರತದಲ್ಲಿ ಏಪ್ರಿಲ್ 1ರಿಂದ ಹೊಸ ಹಾಲ್​ಮಾರ್ಕ್ ಗುರುತಾಗಿರುವ ಹೆಚ್​ಯುಐಡಿ ಸಂಖ್ಯೆ ಇಲ್ಲದ ಚಿನ್ನವನ್ನು ಎಲ್ಲಿಯೂ ಮಾರುವಂತಿಲ್ಲ. ಅದೂ ಚಿನ್ನಕ್ಕೆ 4 ಅಂಕಿಯ ಹೆಚ್​ಯುಐಡಿ ಅಲ್ಲ, 6 ಅಂಕಿಯ ಹೆಚ್​ಯುಐಡಿ ಇರುವುದು ಕಡ್ಡಾಯವಾಗಿದೆ.

ಇನ್ನು ಜಾಗತಿಕ ಗುಣಮಟ್ಟಕ್ಕೆ ತಾಳೆಯಾಗಲು ಮತ್ತು ಗ್ರಾಹಕರಿಗೆ ವಂಚನೆಯಾಗುವುದನ್ನು ತಡೆಯಲು ಹಾಗೂ ಪ್ರತೀ ಒಡವೆಯನ್ನೂ ಟ್ರೇಸ್ ಮಾಡಲು ಸರ್ಕಾರ ಈ ಕ್ರಮ ಕೈಗೊಂಡಿದೆ. 2023, ಮಾರ್ಚ್ 31ರ ನಂತರ ಯಾವುದೇ ಒಡವೆ ಅಂಗಡಿಗಳು, ಚಿನ್ನದ ವ್ಯಾಪಾರಿಗಳು ಅರಂಕಿಯ ಹೆಚ್​ಯುಐಡಿ ಇಲ್ಲದ ಚಿನ್ನವನ್ನು ಮಾರುವಂತಿಲ್ಲ.

ಈ ಹಿಂದೆ ಕೆಡಿಎಂ ಮಾರ್ಕ್ ಹಾಕಲಾಗುತ್ತಿತ್ತು. ಆ ಬಳಿಕ ಹಾಲ್​ಮಾರ್ಕ್ ವ್ಯವಸ್ಥೆ ಬಂದಿತು. ಸರ್ಕಾರ 2021ರ ಜೂನ್ ತಿಂಗಳಲ್ಲೇ ಚಿನ್ನಕ್ಕೆ ಹಾಲ್​ಮಾರ್ಕ್ ಹಾಕುವುದನ್ನು ಕಡ್ಡಾಯಪಡಿಸಿತು. ಹಾಲ್​ಮಾರ್ಕ್ ಇಲ್ಲದ ಒಡವೆಗಳು ಈಗಾಗಲೇ ಇದ್ದಲ್ಲಿ ಅದನ್ನು ಪೂರ್ಣವಾಗಿ ಮಾರಲು ಒಂದು ವರ್ಷ 9 ತಿಂಗಳ ಕಾಲಾವಕಾಶ ಕೊಟ್ಟಿತು. ಆ ಗಡುವು ಮುಗಿಯುತ್ತಿದ್ದು, ಏಪ್ರಿಲ್ 1ರಿಂದ ಹಾಲ್​ಮಾರ್ಕ್ ಇಲ್ಲದ ಚಿನ್ನದ ಮಾರಾಟವನ್ನು ನಿಷೇಧಿಸಲಾಗುತ್ತಿದೆ. ಅದ್ದರಿಂದ ಚಿನ್ನದ ವ್ಯಾಪಾರಿಗಳು ನಾಲ್ಕು ಅಂಕಿಯ ಎಚ್​ಯುಐಡಿ ಗುರುತಿನ ಚಿನ್ನಕ್ಕೆ ಆರು ಅಂಕಿಯ ಹೆಚ್​ಯುಐಡಿ ಗುರುತು ಹಾಕಿಸಿದ ಬಳಿಕವಷ್ಟೇ ಆ ಒಡವೆಯನ್ನು ಮಾರಾಟ ಮಾಡಲು ಸಾಧ್ಯ.

ಹಳೆಯ ಒಡವೆ ಹೊಂದಿರುವವರು ಏನು ಮಾಡಬೇಕು…?

ಹಳೆಯ ಒಡವೆ ಮಾರಬೇಕೆನ್ನುವ ಜನಸಾಮಾನ್ಯರಿಗೆ ಯಾವ ತೊಡಕೂ ಇರುವುದಿಲ್ಲ. ಹಳೆಯ ಒಡವೆಗಳಿಗೆ ಹಾಲ್​ಮಾರ್ಕ್ ಇರುವುದು ಕಡಿಮೆ. ಆದರೆ, ಹಾಲ್ಮಾರ್ಕ್ ಸೆಂಟರ್​ಗಳಿಗೆ ಹೋಗಿ ಒಡವೆಯ ಶುದ್ಧತೆಯ ಪರೀಕ್ಷೆ ಮಾಡಿಸಿಕೊಂಡು ಆ ನಂತರ ಅದನ್ನು ಮಾರಬಹುದು. ಈ ಹಳೆಯ ಒಡವೆಯನ್ನು ಕೊಳ್ಳುವ ಒಡವೆ ಅಂಗಡಿಯವರು ಈ ಚಿನ್ನವನ್ನು ಕರಗಿಸಿ ಹೊಸ ಒಡವೆ ಮಾಡಿ ಅದಕ್ಕೆ ಹಾಲ್​ಮಾರ್ಕ್ ಸರ್ಟಿಫಿಕೇಶನ್ ಮಾಡಿಸಬೇಕಾಗುತ್ತದೆ

 

More from the blog

ಎಳನೀರು ಸೇವಿಸಿ 136 ಮಂದಿ ಅಸ್ವಸ್ಥ ಪ್ರಕರಣ : ಬೊಂಡ ಫ್ಯಾಕ್ಟರಿ ಬಂದ್‌ ಗೆ ಆದೇಶ

ಮಂಗಳೂರು: ನಗರದ ಹೊರವಲಯದ ಅಡ್ಯಾರ್‌ನಲ್ಲಿರುವ ಬೊಂಡ ಫ್ಯಾಕ್ಟರಿಯ ಬೊಂಡ ನೀರು ಸೇವಿಸಿ ನೂರಾರು ಮಂದಿ ಅಸ್ವಸ್ಥಗೊಂಡ ಘಟನೆ ವರದಿಯಾಗಿದ್ದು, ಈ ಪ್ರಕರಣದ ಹಿನ್ನೆಲೆಯಲ್ಲಿ ಅಧಿಕಾರಿಗಳು ಗುರುವಾರ ಬೊಂಡ ಫ್ಯಾಕ್ಟರಿಗೆ ಬೀಗ ಜಡಿದಿದ್ದಾರೆ. ದ.ಕ.ಜಿಲ್ಲಾ ಆರೋಗ್ಯ...

ಸ್ವಿಮ್ಮಿಂಗ್​ ಪೂಲ್​ ನೀರಿಗೆ ಬಿದ್ದು 4ನೇ ತರಗತಿ ವಿದ್ಯಾರ್ಥಿ ಸಾವು

ಉಡುಪಿ‌: ಸ್ವಿಮ್ಮಿಂಗ್​ ಫೂಲ್​ನಲ್ಲಿ ಮುಳುಗಿ 4ನೇ ತರಗತಿಯ ವಿದ್ಯಾರ್ಥಿ ಸಾವನ್ನಪ್ಪಿರುವ ಘಟನೆ ಕುಂದಾಪುರ ತಾಲೂಕಿನ ಹೆಂಗವಳ್ಳಿ ಸಮೀಪದ ಟಿನ್ ಟಾನ್ ಎನ್ವೆಂಚರ್ಸ್ ರೆಸಾರ್ಟ್​​ನಲ್ಲಿ ನಡೆದಿದೆ. ಉಡುಪಿ‌ಯ ಹೊಡೆ ಮೂಲದ ಮುಹಮ್ಮದ್ ಅರೀಝ್ ಮೃತ ವಿದ್ಯಾರ್ಥಿ. ದಾರುಸ್ಸಲಾಮ್...

ರಾಮೇಶ್ವರಂ ಕೆಫೆ ಬ್ಲಾಸ್ಟ್‌ ಪ್ರಕರಣ : ನಿದ್ದೆಯಲ್ಲಿದ್ದ ಉಗ್ರರನ್ನು ಬಡಿದೆಬ್ಬಿಸಿದ ಎನ್ಐಎ

ಬೆಂಗಳೂರು: ರಾಮೇಶ್ವರಂ ಕೆಫೆ ಬ್ಲಾಸ್ಟ್‌ ಪ್ರಕರಣಕ್ಕೆ ಸಂಬಂಧಪಟ್ಟಂತೆ ರಾಷ್ಟ್ರೀಯ ತನಿಖಾ ಸಂಸ್ಥೆ ಭರ್ಜರಿ ಕಾರ್ಯಾಚರಣೆ ನಡೆಸಿ, ಉಗ್ರರ ಗ್ಯಾಂಗ್ ಅನ್ನು ಬಂಧಿಸುವಲ್ಲಿ ಯಶಸ್ವಿಯಾಗಿದೆ. ರಾಮೇಶ್ವರಂ ಕೆಫೆ ಬಾಂಬರ್‌ ಗ್ಯಾಂಗ್ ಬಂಧಿಸಲು NIA ಭರ್ಜರಿ ಬಲೆ...

ಚಿನ್ನದ ದರ ಮತ್ತೆ ಏರಿಕೆ : ಇಂದು ಗೋಲ್ಡ್​ ರೇಟ್​ ಎಷ್ಟಿದೆ ಗೊತ್ತಾ..?

ಚಿನ್ನ ದಿನದಿಂದ ದಿನಕ್ಕೆ ಶಾಕ್​ ನೀಡುತ್ತಾ ಬರುತ್ತಿದೆ. ಕಳೆದ ತಿಂಗಳು ಮಾರ್ಚ್ ನಲ್ಲಿ ಅರವತ್ತು ಸಾವಿರದ ಗಡಿಯಲ್ಲಿದ್ದ ಬಂಗಾರ ಏಪ್ರಿಲ್ ನಲ್ಲಿ ಇದೀಗ ಎಪ್ಪತ್ತು ಸಾವಿರದ ಗಡಿ ದಾಟಿದೆ. ಕೇವಲ ಒಂದು ತಿಂಗಳ...