ಬೆಂಗಳೂರು: ಇದೇ ಮೊದಲ ಬಾರಿಗೆ ಚುನಾವಣೆಯಲ್ಲಿ 80 ವರ್ಷಕ್ಕಿಂತ ಮೇಲ್ಪಟ್ಟವರಿಗೆ ಮನೆಯಲ್ಲಿಯೇ ಮತ ಚಲಾಯಿಸಲು ಅವಕಾಶ ಕಲ್ಪಿಸಲಾಗುವುದು ಎಂದು ಚುನಾವಣಾ ಆಯೋಗ ಘೋಷಿಸಿದೆ.

ರಾಜ್ಯದಲ್ಲಿ ಈ ಬಾರಿ ಯುವ ಮತದಾರರ ಸಂಖ್ಯೆಯೂ ಹೆಚ್ಚಳವಾಗಿದೆ ಎಂದು ಮುಂಬರುವ ಕರ್ನಾಟಕ ವಿಧಾನಸಭಾ ಚುನಾವಣೆಯ ಸಿದ್ಧತೆ ಕುರಿತು ಕರೆದ ಪತ್ರಿಕಾಗೋಷ್ಠಿಯಲ್ಲಿ ಮುಖ್ಯ ಚುನಾವಣಾ ಆಯುಕ್ತ ರಾಜೀವ್ ಕುಮಾರ್, ಚುನಾವಣಾ ಆಯುಕ್ತ ಅನುಪ್ ಚಂದ್ರ ಪಾಂಡೆ ಮತ್ತು ಅರುಣ್ ಗೋಯೆಲ್ ಮಾಹಿತಿ ನೀಡಿದ್ದಾರೆ.

ಚುನಾವಣಾ ಆಯುಕ್ತರು ನೀಡಿದ ಮಾಹಿತಿಗಳೇನು..?
- ಕಳೆದ ಮೂರು ದಿನಗಳಿಂದ ಎಲ್ಲಾ ರಾಜಕೀಯ ಪಕ್ಷಗಳ ಪ್ರತಿನಿಧಿಗಳ, ಚುನಾವಣಾಧಿಕಾರಿಗಳ, ಬಿಬಿಎಂಪಿ ಅಧಿಕಾರಿಗಳ ಜೊತೆ ಸಭೆ ನಡೆಸಿದ್ದೇವೆ. ಚುನಾವಣಾ ಪೂರ್ವ ಸಿದ್ಧತೆ, ಪಾರದರ್ಶಕ ಚುನಾವಣೆ ಬಗ್ಗೆ ಚರ್ಚೆ ಮಾಡಿದ್ದೇನೆ-ರಾಜೀವ್ ಕುಮಾರ್ಮೇ
- 24ಕ್ಕೆ ಹದಿನೈದನೇ ವಿಧಾನಸಭೆಯ ಅವಧಿ ಮುಕ್ತಾಯ ಆಗಲಿದೆ-ರಾಜೀವ್ ಕುಮಾರ್
- 80 ವರ್ಷ ಮೇಲ್ಪಟ್ಟವರಿಗೆ, ವಿಶೇಷ ಚೇತನ ಅವರಿಗೆ ಮನೆಯಿಂದಲೇ ಮತದಾನ ಮಾಡಲು ಅವಕಾಶ
- ರಾಜ್ಯದಲ್ಲಿ ಮೊದಲ ಬಾರಿಗೆ 9,17,241 ಮಂದಿ ಮತದಾನ ಮಾಡಲಿದ್ದಾರೆ
- 58,282 ಸಾವಿರ ಮತಗಟ್ಟೆ ಕೇಂದ್ರಗಳು, 883 ಮತದಾರರಿರುವ ಕಡೆ ಒಂದು ಮತಗಟ್ಟೆ
- ನಗರ ಪ್ರದೇಶಗಳಲ್ಲಿ 24063, ಗ್ರಾಮೀಣ ಪ್ರದೇಶಗಳಲ್ಲಿ 34219 ಮತಗಟ್ಟೆಗಳ ಸ್ಥಾಪನೆ
- ಕರ್ನಾಟಕದಲ್ಲಿ ಒಟ್ಟು ಮತದಾರರ ಸಂಖ್ಯೆ: 5,21,73,599
- ಈ ಪೈಕಿ ಪುರುಷ ಮತದಾರರ ಸಂಖ್ಯೆ: 2,62,42,561
- ಮಹಿಳಾ ಮತದಾರರ ಸಂಖ್ಯೆ: 2,59,26,319
- ಸರ್ಕಾರಿ ನೌಕರ ಮತದಾರರ ಸಂಖ್ಯೆ: 47,779
- ಮತಗಟ್ಟೆಗಳ ವಿವರ, ಒಟ್ಟು ಮತಗಟ್ಟೆಗಳು: 58,282
- ನಗರ ಪ್ರದೇಶದಲ್ಲಿ 24,063 ಮತಗಟ್ಟೆಗಳು
- ಮಹಿಳೆಯರಿಂದ ನಿರ್ವಹಣೆ ಮಾಡುವ ಮತಗಟ್ಟೆಗಳು: 1320
- ಗ್ರಾಮೀಣ ಭಾಗದಲ್ಲಿ ಇರುವ ಮತಗಟ್ಟೆಗಳು: 34,219
- ಮಾದರಿ ಮತಗಟ್ಟೆಗಳ ಸಂಖ್ಯೆ: 240
- ಲಿಂಗತ್ವ ಅಲ್ಪಸಂಖ್ಯಾತ ಮತದಾರರ ಸಂಖ್ಯೆ: 42,312
- 224 ಕ್ಷೇತ್ರಗಳ ಪೈಕಿಯಲ್ಲಿ ಎಸ್ಸಿ ಮೀಸಲು ಕ್ಷೇತ್ರ 36, ಎಸ್ಟಿ ಮೀಸಲು ಕ್ಷೇತ್ರ 15 ಹಾಗೂ ಸಾಮಾನ್ಯ ಕ್ಷೇತ್ರಗಳು 173 ಇವೆ
All arrangements will be made at the polling station for the convenience of senior citizens & PwD voters. For the first time, home voting facility is also there for 12.15 lakh 80 years + & 5.55 lakh benchmarked PwD voters so they can vote from the comfort of their homes: CEC pic.twitter.com/IT9kNrU27t
— Election Commission of India #SVEEP (@ECISVEEP) March 11, 2023