Friday, April 12, 2024

ಕಂಬಳ ವೀರ “ದೂಜೆ’ ಅಸ್ವಸ್ಥ…ವಾಮಾಚಾರದ ಶಂಕೆ

ಮಂಗಳೂರು: ಸರಣಿ ಪದಕಗಳ ಮೂಲಕ ಖ್ಯಾತಿ ಗಳಿಸಿರುವ ಪದವು ಕಾನಡ್ಕ ಡೋಲ್ಫಿ ಡಿ’ಸೋಜಾ ಮತ್ತು ಡೆರಿಕ್‌ ಡಿ’ಸೋಜಾ ಸಹೋದರರ ಮಾಲಕತ್ವದ ಕಂಬಳದ ಕೋಣ “ದೂಜೆ’ ಅಸ್ವಸ್ಥಗೊಂಡಿದ್ದು, ವಾಮಾಚಾರ ಮಾಡಿರುವ ಬಗ್ಗೆ ಮಾಲಕರು ಶಂಕೆ ವ್ಯಕ್ತಪಡಿಸಿದ್ದಾರೆ.

ಈ ಬಾರಿಯ ಕೂಟದಲ್ಲಿ ಕಕ್ಯೆಪದವಿನಲ್ಲಿ “ದೂಜೆ’ ಮತ್ತು “ಎರ್ಮುಡೆ’ ಜೋಡಿ ಸೆಮಿಫೈನಲ್‌ವರೆಗೆ ಹೋಗಿದ್ದವು. ವೇಣೂರು, ಹೊಕ್ಕಾಡಿಗೋಳಿಯಲ್ಲಿ ದ್ವಿತೀಯ, ಅಡ್ವೆಯಲ್ಲಿ ಪ್ರಥಮ ಸ್ಥಾನ ಪಡೆದಿದ್ದವು. ದೂಜೆ 10 ವರ್ಷಗಳಲ್ಲಿ 68 ಪದಕಗಳನ್ನು ಗಳಿಸಿದೆ. ಆದ್ರೆ ಐಕಳ ಕಂಬಳದ ಸಂದರ್ಭ ಎರಡು ಕೂಡ ಅಸ್ವಸ್ಥಗೊಂಡವು. ಅದರಲ್ಲಿ “ಎರ್ಮುಡೆ’ ಬೇಗ ಚೇತರಿಸಿಕೊಂಡಿತ್ತು. ಆದರೆ “ದೂಜೆ’ಯ ಆರೋಗ್ಯ ಹದಗೆಡುತ್ತ ಬಂದಿತ್ತು. ಸದ್ಯ ಸ್ವಲ್ಪ ಚೇತರಿಸಿಕೊಳ್ಳುತ್ತಿದೆ ಎಂದು ಡೋಲ್ಫಿ ತಿಳಿಸಿದ್ದಾರೆ

“ದೂಜೆ’ಯನ್ನು ನೋಡಲು ನಿತ್ಯ ನೂರಾರು ಮಂದಿ ಬರುತ್ತಿದ್ದರು. ಕೆಲವರು ಹಣ್ಣು ಹಂಪಲು ಇತ್ಯಾದಿ ನೀಡುತ್ತಿದ್ದರು. ನಾವು ತಡೆಯುತ್ತಿರಲಿಲ್ಲ. ಆದರೆ ದೂಜೆಗೆ ಅದೇನಾಯಿತು ಎಂದು ಗೊತ್ತಿಲ್ಲ. ಇತ್ತೀಚೆಗೆ ಕೊಟ್ಟಿಗೆ ಸ್ವತ್ಛಗೊಳಿಸುವಾಗ ನೂಲು, ಭಸ್ಮ, ತಗಡು ಕೂಡ ಸಿಕ್ಕಿತ್ತು. ಅದರ ಜತೆ ಚೆನ್ನೈ-ಮಂಗಳೂರು ರೈಲಿನ ಟಿಕೆಟ್‌ ಕೂಡ ಇತ್ತು. ಯಾರು ಏನು ಮಾಡಿದ್ದಾರೋ ಗೊತ್ತಾಗುತ್ತಿಲ್ಲ. ತಪ್ಪು ಮಾಡಿದವರಿಗೆ ದೇವರೇ ಶಿಕ್ಷೆ ನೀಡುತ್ತಾರೆ ಎಂದು ಡೋಲ್ಫಿ ಹೇಳಿದ್ದಾರೆ.

ಸಧ್ಯ ವಾಮಾಚಾರ ಸಾಧ್ಯತೆಯ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಕೂಡ ಚರ್ಚೆಯಾಗುತ್ತಿದೆ. ದೂಜೆಯನ್ನು ನೋಡಲು ಸದ್ಯ ಮಾಲಕರು ಹೊರಗಿನ ಯಾರಿಗೂ ಅವಕಾಶ ನೀಡುತ್ತಿಲ್ಲ ಎಂದು ತಿಳಿದು ಬಂದಿದೆ.

More from the blog

ಎಳನೀರು ಸೇವಿಸಿ 136 ಮಂದಿ ಅಸ್ವಸ್ಥ ಪ್ರಕರಣ : ಬೊಂಡ ಫ್ಯಾಕ್ಟರಿ ಬಂದ್‌ ಗೆ ಆದೇಶ

ಮಂಗಳೂರು: ನಗರದ ಹೊರವಲಯದ ಅಡ್ಯಾರ್‌ನಲ್ಲಿರುವ ಬೊಂಡ ಫ್ಯಾಕ್ಟರಿಯ ಬೊಂಡ ನೀರು ಸೇವಿಸಿ ನೂರಾರು ಮಂದಿ ಅಸ್ವಸ್ಥಗೊಂಡ ಘಟನೆ ವರದಿಯಾಗಿದ್ದು, ಈ ಪ್ರಕರಣದ ಹಿನ್ನೆಲೆಯಲ್ಲಿ ಅಧಿಕಾರಿಗಳು ಗುರುವಾರ ಬೊಂಡ ಫ್ಯಾಕ್ಟರಿಗೆ ಬೀಗ ಜಡಿದಿದ್ದಾರೆ. ದ.ಕ.ಜಿಲ್ಲಾ ಆರೋಗ್ಯ...

ಸ್ವಿಮ್ಮಿಂಗ್​ ಪೂಲ್​ ನೀರಿಗೆ ಬಿದ್ದು 4ನೇ ತರಗತಿ ವಿದ್ಯಾರ್ಥಿ ಸಾವು

ಉಡುಪಿ‌: ಸ್ವಿಮ್ಮಿಂಗ್​ ಫೂಲ್​ನಲ್ಲಿ ಮುಳುಗಿ 4ನೇ ತರಗತಿಯ ವಿದ್ಯಾರ್ಥಿ ಸಾವನ್ನಪ್ಪಿರುವ ಘಟನೆ ಕುಂದಾಪುರ ತಾಲೂಕಿನ ಹೆಂಗವಳ್ಳಿ ಸಮೀಪದ ಟಿನ್ ಟಾನ್ ಎನ್ವೆಂಚರ್ಸ್ ರೆಸಾರ್ಟ್​​ನಲ್ಲಿ ನಡೆದಿದೆ. ಉಡುಪಿ‌ಯ ಹೊಡೆ ಮೂಲದ ಮುಹಮ್ಮದ್ ಅರೀಝ್ ಮೃತ ವಿದ್ಯಾರ್ಥಿ. ದಾರುಸ್ಸಲಾಮ್...

ರಾಮೇಶ್ವರಂ ಕೆಫೆ ಬ್ಲಾಸ್ಟ್‌ ಪ್ರಕರಣ : ನಿದ್ದೆಯಲ್ಲಿದ್ದ ಉಗ್ರರನ್ನು ಬಡಿದೆಬ್ಬಿಸಿದ ಎನ್ಐಎ

ಬೆಂಗಳೂರು: ರಾಮೇಶ್ವರಂ ಕೆಫೆ ಬ್ಲಾಸ್ಟ್‌ ಪ್ರಕರಣಕ್ಕೆ ಸಂಬಂಧಪಟ್ಟಂತೆ ರಾಷ್ಟ್ರೀಯ ತನಿಖಾ ಸಂಸ್ಥೆ ಭರ್ಜರಿ ಕಾರ್ಯಾಚರಣೆ ನಡೆಸಿ, ಉಗ್ರರ ಗ್ಯಾಂಗ್ ಅನ್ನು ಬಂಧಿಸುವಲ್ಲಿ ಯಶಸ್ವಿಯಾಗಿದೆ. ರಾಮೇಶ್ವರಂ ಕೆಫೆ ಬಾಂಬರ್‌ ಗ್ಯಾಂಗ್ ಬಂಧಿಸಲು NIA ಭರ್ಜರಿ ಬಲೆ...

ಚಿನ್ನದ ದರ ಮತ್ತೆ ಏರಿಕೆ : ಇಂದು ಗೋಲ್ಡ್​ ರೇಟ್​ ಎಷ್ಟಿದೆ ಗೊತ್ತಾ..?

ಚಿನ್ನ ದಿನದಿಂದ ದಿನಕ್ಕೆ ಶಾಕ್​ ನೀಡುತ್ತಾ ಬರುತ್ತಿದೆ. ಕಳೆದ ತಿಂಗಳು ಮಾರ್ಚ್ ನಲ್ಲಿ ಅರವತ್ತು ಸಾವಿರದ ಗಡಿಯಲ್ಲಿದ್ದ ಬಂಗಾರ ಏಪ್ರಿಲ್ ನಲ್ಲಿ ಇದೀಗ ಎಪ್ಪತ್ತು ಸಾವಿರದ ಗಡಿ ದಾಟಿದೆ. ಕೇವಲ ಒಂದು ತಿಂಗಳ...