Saturday, April 20, 2024

ಉಚಿತ ನಾಯಿಮರಿಗಳು ಬೇಕೇ…? ಹಾಗಾದರೆ ಇಂದು ಬಿಸಿರೋಡಿಗೆ ಬನ್ನಿ…. ಸಂಜೆ 5 ಗಂಟೆಯವರೆಗೆ ಎನಿಮಲ್ ಕೇರ್ ಸಂಸ್ಥೆಯಿಂದ ಉಚಿತ ನಾಯಿಮರಿಗಳ ಶಿಬಿರ

ಆದಿತ್ಯವಾರ ರಜೆ ಬಂದರೆ ಸಾಕು ,ಜನ ಮಾರ್ಕೆಟ್ ನಲ್ಲಿ ಖರೀದಿಗಾಗಿ ಮುಗಿಬೀಳುತ್ತಾರೆ.

ಆದರೆ ಈ ರವಿವಾರ ಮಾ26 ರಂದು ಮಾತ್ರ ಬಿಸಿರೋಡಿನ ಬಸ್ ನಿಲ್ದಾಣದ ಬಳಿ ಪ್ಲೈ ಓವರನ ಗಡಿಭಾಗದಲ್ಲಿ ಪುಲ್ ಜನವೋ ಜನ…..ಎಲ್ಲರೂ ಮುಗಿಬಿದ್ದು ನೋಡುತ್ತಿದ್ದಾರೆ.

ಏನಪ್ಪಾ ಅಂತ ನೋಡಿದರೆ, ನಾಯಿಮರಿ ಮತ್ತು ಬೆಕ್ಕಮರಿಗಳ ಉಚಿತ ದತ್ತುಕೊಡುವ ಶಿಬಿರ.

ಗೂಡಿನೊಳಗೆ ಕುಯಿಕುಯಿ ಎನ್ನುವ ಅಂದಚೆಂದದ ನಾಯಿಮರಿಗಳು, ಕಲರ್ ಕಲರ್ ಬೆಕ್ಕು ಮರಿಗಳು ಜನರ ‌ಅಕರ್ಷಣೆಯಾಗಿತ್ತು.

ಎನಿಮಲ್ ಕೇರ್ ಟ್ರಸ್ಟ್ (ರಿ) ಶಕ್ತಿನಗರ ಮಂಗಳೂರು ಮತ್ತು ರೋಟರಿ ಕ್ಲಬ್ ಬಂಟ್ವಾಳ ಇವರ ಸಹಯೋಗದಲ್ಲಿ ದೇಸಿ ನಾಯಿ ಮತ್ತು ಬೆಕ್ಕಿನ ಮರಿಗಳ ಉಚಿತ ದತ್ತು ಕೊಡುವ ಶಿಬಿರ ನಡೆಯಿತು.

ಬಂದವರು ಎಲ್ಲರೂ ಮಾರಾಟದ ನಾಯಿಗಳು ಎಂದು ಎಷ್ಡು ರೇಟ್ ಅಂತ ಕೇಳುತ್ತಿದ್ದರು.

ಎನಿಮಲ್ ಕೇರ್ ಟ್ರಸ್ಟ್ ಗೌರವ ಸಲಹೆಗಾರರಾದ ಮಮತಾ ರಾವ್

ಬೀದಿ ಬದಿಯಲ್ಲಿ ಬಿಟ್ಟುಹೋದ ನಾಯಿಗಳನ್ನು,ನಾಯಿಮರಿಗಳನ್ನು,ಬೆಕ್ಕು ಹಾಗೂ ದನಗಳನ್ನು ಕಳೆದ 22 ವರ್ಷಗಳಿಂದ ರಕ್ಷಣೆ ಮಾಡಿ ಅದನ್ನು ಸಾಕುವ ಕೆಲಸ ಮಾಡಲಾಗುತ್ತಿದೆ.

ಹಾಗೆ ರಕ್ಷಣೆ ಮಾಡಿದ ಪ್ರಾಣಿಗಳಿಗೆ ರೋಗಬಾರದಂತೆ ಚುಚ್ಚುಮದ್ದು ಹಾಕುವುದು ಮತ್ತು ಉತ್ತಮ ವಾಗಿ ನೋಡಿಕೊಳ್ಳಲು ತಂಡ ಇದೆ.

ಬಳಿಕ ಎಲ್ಲಾ ಪ್ರಾಣಿಗಳನ್ನು ಪ್ರೀತಿಯಿಂದ ಸಾಕುವ ಕುಟುಂಬಕ್ಕೆ ಉಚಿತವಾಗಿ ನೀಡುತ್ತೇವೆ.ಆದರೆ ಕೆಲವು ಷರತ್ತುಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು ಎಂದು ಸೂಚನೆ ನೀಡಲಾಗುತ್ತದೆ.

ಹೆಚ್ಚಾಗಿ ಹೆಣ್ಣು ನಾಯಿ ಮರಿ, ಬೆಕ್ಕು ಮರಿಗಳನ್ನು ಬೀದಿಯಲ್ಲಿ ಬಿಡಲಾಗುತ್ತದೆ, ಇದು ಸರಿಯಲ್ಲ ಎಂದು ಅವರು ಬೇಸರ ವ್ಯಕ್ತಪಡಿಸಿದರು.

ಜೊತೆಗೆ ಶಿಬಿರಕ್ಕೆ ಬಂದವರು ವಿದೇಶಿ ನಾಯಿ ಮರಿಗಳ ಬಗ್ಗೆ ಕೇಳುತ್ತಾರೆ, ನಾವು ಏನಿದ್ದರೂ ನಮ್ಮ ಊರಿನ ಪ್ರಾಣಿಗಳಿಗೆ ಮೊದಲು ರಕ್ಷಣೆ ನೀಡಬೇಕು ಎಂದು ಬೇಸರ ವ್ಯಕ್ತಪಡಿಸಿದರು.

ಪ್ರಾಣಿ ಗಳ ಸಾಕುವ ಜವಾಬ್ದಾರಿ ಹೊತ್ತಿದ್ದ ಸಂಸ್ಥೆಯ ವರಿಗೆ ದೊಡ್ಡ ಖರ್ಚು ಇದೆ.ಹಾಗಾಗಿ ದಾನರೂಪದಲ್ಲಿ ಹಣ ನೀಡಿದರೆ ಅವರು ಪಡೆಯುತ್ತಾರೆ.

More from the blog

ಜನಪರವಾದ ಕೆಲಸ ಮಾಡದ ಬಿಜೆಪಿಗೆ ಸೋಲು ಖಚಿತ-ಚಾಮರಸ ಮಾಲೀಪಾಟೀಲ್

ಬಂಟ್ವಾಳ: 2024 ರ ಚುನಾವಣೆಯಲ್ಲಿ ಬಿಜೆಪಿ ಹಾಗೂ ಮಿತ್ರಪಕ್ಷವನ್ನು ಸೋಲಿಸುವ ತೀರ್ಮಾನವನ್ನು ಕರ್ನಾಟಕ ರಾಜ್ಯ ರೈತ ಸಂಘ ಮಾಡಿದ್ದು, ಈ ದೃಷ್ಟಿಯಿಂದ ರೈತರ ಮನವೊಲಿಸುವ ಕಾರ್ಯದಲ್ಲಿ ತೊಡಗಿದ್ದೇವೆ, ಈ ಬಾರಿ ಬಿಜೆಪಿ ನೆಲಕಚ್ಚುವುದು...

ಬಂಟ್ವಾಳ ವಿಧಾನಸಭಾ ಕ್ಷೇತ್ರ ವ್ಯಾಪ್ತಿಗೆ ಜಿಲ್ಲಾಧಿಕಾರಿ ಮುಲ್ಲೈ ಮುಹಿಲನ್‌ ಭೇಟಿ

ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ 17-ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದ ಚುನಾವಣಾಧಿಕಾರಿಯೂ ಆಗಿರುವ ಜಿಲ್ಲಾಧಿಕಾರಿ ಮುಲ್ಲೈ ಮುಹಿಲನ್‌ ರವರು ದಿನಾಂಕ 19-04-2024 ರಂದು ಬಂಟ್ವಾಳ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಗೆ ಭೇಟಿ ನೀಡಿದರು. ಸೂಕ್ಷ್ಮ ಮತಗಟ್ಟೆಗಳಿರುವ ಪ್ರದೇಶಗಳಿಗೆ...

ಟ್ಯಾಂಕರ್ ಹರಿದು ಪಾದಚಾರಿ ಸ್ಥಳದಲ್ಲೇ ಸಾವು

ಮಂಗಳೂರು: ಟ್ಯಾಂಕರ್ ಢಿಕ್ಕಿಯಾಗಿ ಪಾದಚಾರಿ ಸ್ಥಳದಲ್ಲೇ ಮೃತಪಟ್ಟ ಘಟನೆ ಶುಕ್ರವಾರ ಬೆಳಗ್ಗೆ ಕೂಳೂರಿನಲ್ಲಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಸಂಭವಿಸಿದೆ. ಮೃತ ವ್ಯಕ್ತಿಯನ್ನು ಉತ್ತರ ಪ್ರದೇಶ ಮೂಲದ ಕಾರ್ಮಿಕ ಗುಡ್ಡು ಯಾದವ್ ಎನ್ನಲಾಗಿದೆ ಯಾದವ್ ರಸ್ತೆ ಬದಿ‌ ನಡೆದುಕೊಂಡು...

ಏ.21ರಂದು ನಮ್ಮ ನಡೆ ಮತಗಟ್ಟೆಯ ಕಡೆ ಅಭಿಯಾನ

ಮತದಾರರನ್ನು ಮತಗಟ್ಟೆಗೆ ಸೆಳೆಯುವ ಸಲುವಾಗಿ ಚುನಾವಣಾ ಆಯೋಗ ಸ್ವೀಪ್ ಕಾರ್ಯಕ್ರಮದ ಮೂಲಕ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಿದೆ. ಅದರಂತೆ ಎ.21ರಂದು ಎಲ್ಲಾ ಬೂತ್ ಮತಗಟ್ಟೆಗಳಲ್ಲಿ ನಮ್ಮ ನಡೆ ಮತಗಟ್ಟೆಯ ಕಡೆ ಅಭಿಯಾನ ಹಮ್ಮಿಕೊಂಡಿದ್ದು, ಬಂಟ್ವಾಳ...