Friday, April 19, 2024

ತಡೆಗೋಡೆ ನಿರ್ಮಾಣ ವೇಳೆ ಮಣ್ಣು ಕುಸಿತ : ಮಣ್ಣಿನಡಿ ಸಿಲುಕಿದ ಮೂರು ಕಾರ್ಮಿಕರು, ಮುಂದುವರಿದ ರಕ್ಷಣಾ ಕಾರ್ಯ

ಸುಳ್ಯ: ಸುಳ್ಯ ಗಾಂಧಿನಗರದ ಗುರುಂಪು ಎಂಬಲ್ಲಿ ಮನೆಯೊಂದರ ಹಿಂಬಾಗ ತಡೆಗೋಡೆ ನಿರ್ಮಾಣದ ವೇಳೆ ಮಣ್ಣು ಜರಿದು ಮೂವರು ಕಾರ್ಮಿಕರು ಮಣ್ಣಿನಡಿಯಲ್ಲಿ ಸಿಲುಕಿದ್ದಾರೆ.

ಮಣ್ಣಿನಡಿ ಸಿಲುಕಿರುವ ಮೂವರು ಕಾರ್ಮಿಕರು ಧಾರವಾಡ ಮೂಲದವರು ಎನ್ನಲಾಗಿದ್ದು ಇವರ ಪೈಕಿ ಒಬ್ಬರು ಮಹಿಳೆಯಾಗಿದ್ದಾರೆ ಎನ್ನಲಾಗಿದೆ.

ಗುರುಂಪು ನಿವಾಸಿ ಅಬೂಬಕ್ಕರ್‌ ಎಂಬವರ ಮನೆಯ ಹಿಂಭಾಗದಲ್ಲಿ ತಡೆಗೋಡೆ ನಿರ್ಮಿಸಲು ಗುತ್ತಿಗೆ ನೀಡಲಾಗಿತ್ತು. ಆಕಸ್ಮಿಕವಾಗಿ ಮಣ್ಣು ಕುಸಿದು ಈ ದುರ್ಘಟನೆ ಸಂಭವಿಸಿದ್ದು, ಜೆಸಿಬಿ ಮೂಲಕ ಮಣ್ಣಿನ ತೆರವು ಕಾರ್ಯಾಚರಣೆ ನಡೆಯುತ್ತಿದೆ. ಈಗಾಗಲೇ ಮಣ್ಣಿನಡಿ ಸಿಲುಕಿರುವ ಎರಡು ದೇಹವನ್ನು ಹೊರ ತೆಗೆಯಲಾಗಿದ್ದು, ಇನ್ನೊಂದು ದೇಹಕ್ಕಾಗಿ ಶೋಧ ಕಾರ್ಯ ಮುಂದುವರಿದಿದೆ. ಅಗ್ನಿ ಶಾಮಕದಳ ಮತ್ತು ಸ್ಥಳೀಯರು ರಕ್ಷಣಾ ಕಾರ್ಯಾಚರಣೆಯಲ್ಲಿ ತೊಡಗಿದ್ದಾರೆ.

More from the blog

ಟ್ಯಾಂಕರ್ ಹರಿದು ಪಾದಚಾರಿ ಸ್ಥಳದಲ್ಲೇ ಸಾವು

ಮಂಗಳೂರು: ಟ್ಯಾಂಕರ್ ಢಿಕ್ಕಿಯಾಗಿ ಪಾದಚಾರಿ ಸ್ಥಳದಲ್ಲೇ ಮೃತಪಟ್ಟ ಘಟನೆ ಶುಕ್ರವಾರ ಬೆಳಗ್ಗೆ ಕೂಳೂರಿನಲ್ಲಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಸಂಭವಿಸಿದೆ. ಮೃತ ವ್ಯಕ್ತಿಯನ್ನು ಉತ್ತರ ಪ್ರದೇಶ ಮೂಲದ ಕಾರ್ಮಿಕ ಗುಡ್ಡು ಯಾದವ್ ಎನ್ನಲಾಗಿದೆ ಯಾದವ್ ರಸ್ತೆ ಬದಿ‌ ನಡೆದುಕೊಂಡು...

ಏ.21ರಂದು ನಮ್ಮ ನಡೆ ಮತಗಟ್ಟೆಯ ಕಡೆ ಅಭಿಯಾನ

ಮತದಾರರನ್ನು ಮತಗಟ್ಟೆಗೆ ಸೆಳೆಯುವ ಸಲುವಾಗಿ ಚುನಾವಣಾ ಆಯೋಗ ಸ್ವೀಪ್ ಕಾರ್ಯಕ್ರಮದ ಮೂಲಕ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಿದೆ. ಅದರಂತೆ ಎ.21ರಂದು ಎಲ್ಲಾ ಬೂತ್ ಮತಗಟ್ಟೆಗಳಲ್ಲಿ ನಮ್ಮ ನಡೆ ಮತಗಟ್ಟೆಯ ಕಡೆ ಅಭಿಯಾನ ಹಮ್ಮಿಕೊಂಡಿದ್ದು, ಬಂಟ್ವಾಳ...

ನೇತ್ರಾವತಿ ನದಿ ತೀರದ ಕೃಷಿಕರ ಪಂಪ್ ಸೆಟ್ ಗಳ ವಿದ್ಯುತ್ ಸ್ಥಗಿತ : ರೈತರಿಂದ ಪ್ರತಿಭಟನೆ

ಬಂಟ್ವಾಳ: ದ.ಕ.ಜಿಲ್ಲಾಡಳಿತವೂ ಮಂಗಳೂರು ನಗರಕ್ಕೆ ಕುಡಿಯುವ ನೀರು ಕೊರತೆಯಾಗುತ್ತಿದೆ ಎಂದು ನೇತ್ರಾವತಿ ನದಿ ಪಾತ್ರದ ಕೃಷಿ ಪಂಪ್ ಸೆಟ್ ಗಳ ವಿದ್ಯುತ್ ಕಡಿತ ಮಾಡಿರುವ ವಿರುದ್ಧ ರೈತರು ಬಂಟ್ವಾಳ ತಾಲೂಕು ಆಡಳಿತ ಸೌಧದ...

ಕಟೀಲು ಶ್ರೀ ದುರ್ಗಾಪರಮೇಶ್ವರಿ ದೇವಾಸ್ಥಾನದ ವಾರ್ಷಿಕ ಜಾತ್ರಾ ಮಹೋತ್ಸವ : ರಸ್ತೆ ಸಂಚಾರದಲ್ಲಿ ಬದಲಾವಣೆ

ಮಂಗಳೂರು: ಕಟೀಲು ಶ್ರೀ ದುರ್ಗಾಪರಮೇಶ್ವರಿ ದೇವಾಸ್ಥಾನದಲ್ಲಿ ನಡೆಯುವ ವಾರ್ಷಿಕ ಜಾತ್ರಾ ಮಹೋತ್ಸವದ ಅಂಗವಾಗಿ ಸಾರ್ವಜನಿಕರ ಹಿತ ಹಾಗೂ ವಾಹನಗಳ ಸುಗಮ ಸಂಚಾರದ ದೃಷ್ಟಿಯಿಂದ ಎ.19 ಮತ್ತು 20ರಂದು ಕಟೀಲು ಪರಿಸರದಲ್ಲಿ ವಾಹನ ಸಂಚಾರದಲ್ಲಿ...