Friday, April 12, 2024

ಆಕಸ್ಮಿಕವಾಗಿ ಕಾಲು ಜಾರಿ ನೀರಿಗೆ ಬಿದ್ದ ಬಾಲಕ ಸಾವು

ಉಪ್ಪಿನಂಗಡಿ: ನದಿಯಲ್ಲಿ ಸ್ನಾನ ಮಾಡಲೆಂದು ನೀರಿಗಿಳಿದ ಬಾಲಕನೋರ್ವ ಆಕಸ್ಮಿಕವಾಗಿ ಕಾಲು ಜಾರಿ ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ ಘಟನೆ ಉಪ್ಪಿನಂಗಡಿ ಪೊಲೀಸ್‌ ಠಾಣಾ ವ್ಯಾಪ್ತಿಯ ಬಿಳಿಯೂರಿನಲ್ಲಿ ಸಂಭವಿಸಿದೆ.

ಮೂಲತಃ ಬಂಟ್ವಾಳ ತಾಲೂಕಿನ ಮಾಣಿ ನಿವಾಸಿ ದಿ.ಮಹಮ್ಮದ್‌ ತಾಹೀರ್‌ ಅವರ ಮಗ ಮಾಣಿ ಪ್ರೌಢಶಾಲೆಯಲ್ಲಿ ಹತ್ತನೇ ತರಗತಿಯ ವಿದ್ಯಾರ್ಥಿಯಾಗಿದ್ದ ಮಹಮ್ಮದ್‌ ಸಲ್ಮಾನ್‌ ಮೃತ ಬಾಲಕ.

ಈತ ತನ್ನ ಸೋದರ ಸಂಬಂಧಿ ಬಾಲಕ ಮಹಮ್ಮದ್‌ ಇರ್ಫಾರ್‌ ಜತೆಗೂಡಿ ಪೆರ್ನೆಯಲ್ಲಿನ ತನ್ನ ಚಿಕ್ಕಮ್ಮನ ಮನೆಗೆ ಬಂದಿದ್ದು, ನದಿಯಲ್ಲಿ ಸ್ನಾನ ಮಾಡುವ ಬಯಕೆಯಿಂದ ಬಿಳಿಯೂರಿನ ಅಣೆಕಟ್ಟಿನ ಬಳಿ ನದಿಗಿಳಿದಾತ ಕಾಲು ಜಾರಿ ನೀರಿಗೆ ಬಿದ್ದು ಸಾವನ್ನಪ್ಪಿದ್ದಾನೆ. ಈತನ ಜತೆಗಿದ್ದ ಮಹಮ್ಮದ್‌ ಇರ್ಫಾರ್‌ ರಕ್ಷಿಸಲ್ಪಟ್ಟಿದ್ದಾನೆ.

ಮೃತ ಮಹಮ್ಮದ್‌ ಸಲ್ಮಾನ್‌ನದ್ದು ಬಡಕುಟುಂಬವಾಗಿದ್ದು, ಆತನ ತಂದೆ ವರ್ಷದ ಹಿಂದೆ ಸಾವನ್ನಪ್ಪಿದ್ದರು. ತಾಯಿ ಅನಾರೋಗ್ಯಪೀಡಿತರಾಗಿದ್ದು, ತನ್ನ ಕಿರಿಯ ಸಹೋದರನೊಂದಿಗೆ ಬಂಧುಗಳ ಸಹಕಾರದೊಂದಿಗೆ ಜೀವನ ನಡೆಸುತ್ತಿದ್ದಾರೆ. ಪ್ರಸಕ್ತ ಮಾಣಿ ಪ್ರೌಢಶಾಲೆಯಲ್ಲಿ ಎಸ್‌.ಎಸ್‌.ಎಲ್.ಸಿ ಓದುತ್ತಿದ್ದ ಈತ ಮುಂಬರುವ ಪಬ್ಲಿಕ್‌ ಪರೀಕ್ಷೆಗೆ ಸಿದ್ಧತೆಯನ್ನು ಮಾಡಿಕೊಂಡಿದ್ದ.

 

More from the blog

ಪೊಳಲಿ ಶ್ರೀ ರಾಜರಾಜೇಶ್ವರಿ ದೇವಸ್ಥಾನ ವಾರ್ಷಿಕ ಜಾತ್ರೆ..ಮಹಾರಥೋತ್ಸವ ಕಣ್ಣುಂಬಿಕೊಂಡ ಸಾವಿರಾರು ಭಕ್ತರು

ಬಂಟ್ವಾಳ: ಪೊಳಲಿ ಶ್ರೀ ರಾಜರಾಜೇಶ್ವರಿ ದೇವಸ್ಥಾನದ ವಾರ್ಷಿಕ ಜಾತ್ರೆಯಲ್ಲಿ ಎ. ೧೧ರಂದು ಸಂಜೆ ರಥೋತ್ಸವ ನಡೆಯಿತು. ಜಾತ್ರೆಯಲ್ಲಿ ಸಹಸ್ರಾರು ಭಕ್ತರು ಪಾಲ್ಗೊಂಡಿದ್ದರು. ಮಹಾಪೂಜೆಯ ಬಳಿಕ ದೇವರು ರಥಾರೋಹಣಗೊಂಡು ಸಾಂಕೇತಿಕವಾಗಿ ರಥವನ್ನು ಎಳೆಯಲಾಯಿತು. ಮಧ್ಯಾಹ್ನ ರಥಕ್ಕೆ...

ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿಕೆಯ ನಕಲಿ ಸುದ್ದಿ ಪ್ರಕಟ : ಕ್ರಮ ಕೈಗೊಳ್ಳುವಂತೆ ಸುಬ್ರಹ್ಮಣ್ಯ ಕಾಂಗ್ರೆಸ್ ವತಿಯಿಂದ ಪೊಲೀಸ್ ದೂರು

ಮುಖ್ಯಮಂತ್ರಿ ಸಿದ್ದರಾಮಯ್ಯ ರವರು ಕೋಮು ಭಾವನೆಯ ಹೇಳಿಕೆ ನೀಡಿದ್ದಾರೆಂಬ ನಕಲಿ ಸುದ್ದಿಯನ್ನು ವಾಟ್ಸಾಪ್ ಗ್ರೂಪ್ ಗಳಲ್ಲಿ ಪ್ರಚಾರ ಮಾಡುತ್ತಿರುವವರ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಸುಬ್ರಹ್ಮಣ್ಯ ಕಾಂಗ್ರೆಸ್ ವತಿಯಿಂದ ಸುಬ್ರಹ್ಮಣ್ಯ ಪೊಲೀಸ್ ಠಾಣೆಗೆ...

ಬಂಟ್ವಾಳದ ಬಡಗಕಜೆಕಾರು, ತೆಂಕಕಜೆಕಾರು ಗ್ರಾಮದಲ್ಲಿ ಮತದಾರರ ಮನೆಗೆ ಭೇಟಿ ನೀಡಿ ಮತಯಾಚನೆ ನಡೆಸಿದ ಶಾಸಕ ರಾಜೇಶ್ ನಾಯ್ಕ್

ಲೋಕ ಸಭಾ ಚುನಾವಣೆಯ ಹಿನ್ನಲೆಯಲ್ಲಿ ಕ್ಯಾ.ಬ್ರಿಜೇಶ್ ಚೌಟ ಅವರ ಗೆಲುವಿಗಾಗಿ "ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿಗುತ್ತು ಅವರ ಗ್ರಾಮ,ಮನೆ,ಮನ ಸಂಪರ್ಕ ಅಭಿಯಾನ"ದ ಅಂಗವಾಗಿ ಬಂಟ್ವಾಳದ ಬಡಗಕಜೆಕಾರು, ತೆಂಕಕಜೆಕಾರು ಗ್ರಾಮದಲ್ಲಿ ಮತದಾರರ ಮನೆಗೆ...

ಲೋಕಸಭಾ ಚುನಾವಣೆಯ ಹಿನ್ನೆಲೆ : ಚಾರ್ಮಾಡಿಯ ಮೂವರು ಗಡಿಪಾರು

ಬೆಳ್ತಂಗಡಿ: ಚುನಾವಣ ಸಂದರ್ಭದಲ್ಲಿ ಕಾನೂನು ಸುವ್ಯವಸ್ಥೆಗೆ ಧಕ್ಕೆ ತರುವ ಹಾಗೂ ಕೋಮು ಗಲಭೆಗಳಲ್ಲಿ ಭಾಗವಹಿಸುವ ಸಾಧ್ಯತೆ ಇರುವ ಕಾರಣ ಮೂವರು ರೌಡಿಶೀಟರ್‌ಗಳನ್ನು ಧರ್ಮಸ್ಥಳ ಪೊಲೀಸರು ಗಡಿಪಾರು ಮಾಡಿದ್ದಾರೆ. ಬೆಳ್ತಂಗಡಿ ತಾಲೂಕಿನ ಚಾರ್ಮಾಡಿ ಗ್ರಾಮದ ನಿವಾಸಿಗಳಾದ...