Saturday, April 13, 2024

ದೇಶದಲ್ಲಿ ಬಿಜೆಪಿಯನ್ನು ತೊಲಗಿಸಲು ಕಾಂಗ್ರೆಸ್ ಕಾರ್ಯಕರ್ತರು ಒಗ್ಗಟ್ಟಿನಿಂದ ಕೆಲಸ ಮಾಡಬೇಕು-ಕೆ.ಅಬ್ದುಲ್ ಜಬ್ಬಾರ್

ಬಂಟ್ವಾಳ: ಕರ್ನಾಟಕದ ಸಹಿತ ದೇಶದಲ್ಲಿ ದರಿದ್ರ ಬಿಜೆಪಿಯನ್ನು ತೊಲಗಿಸಲು ಕಾಂಗ್ರೆಸ್ ಕಾರ್ಯಕರ್ತರು ಒಗ್ಗಟ್ಟಿನಿಂದ ಕೆಲಸ ಮಾಡಬೇಕು
ಎಂದು ವಿಧಾನ ಸಭಾ ಸದಸ್ಯ ಕೆ.ಅಬ್ದುಲ್ ಜಬ್ಬಾರ್ ಅವರು ಹೇಳಿದರು.

ಅವರು ಮಾವಿನಕಟ್ಟೆಯಲ್ಲಿ ನಡೆದ ಪ್ರಜಾಧ್ವನಿ ಯಾತ್ರೆಯ ನಾಲ್ಕನೆಯ ದಿನದ ಸಭಾ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದರು.
ನಾವೆಲ್ಲರೂ ನೆಮ್ಮದಿಯಿಂದ ಬದುಕಬೇಕಾದರೆ ಕಾಂಗ್ರೆಸ್ ಅಧಿಕಾರಕ್ಕೆ ಬರಬೇಕು, ಅದಕ್ಕಾಗಿ ನಮ್ಮ ಒಳಗಿನ ಸಣ್ಣಪುಟ್ಟ ವ್ಯತ್ಯಾಸಗಳನ್ನು ಬದಿಗಿಟ್ಟು ಕಾಂಗ್ರೇಸ್ ಗೆಲುವಿಗಾಗಿ ಶ್ರಮಿಸಿ ಎಂದು ಅವರು ಕರೆ ನೀಡಿದರು.

ಕಳೆದ 70 ವರ್ಷಗಳಲ್ಲಿ ದೇಶದ ಅಭಿವೃದ್ಧಿಯಲ್ಲಿ ಮಹತ್ತರವಾದ ಕೊಡುಗೆಯನ್ನು ನೀಡಿದ ಕಾಂಗ್ರೆಸ್ ಸರಕಾರಕ್ಕೆ ಪ್ರಶ್ನೆ ಕೇಳುವ ಬಿಜೆಪಿ ಕಳೆದ ಎರಡು ಅವಧಿಯಲ್ಲಿ ಮಾಡಿದ ಸಾಧನೆ ಏನು? ಎಲ್ಲವೂ ಖಾಸಗೀಕರಣ ಇದು ಸಾಧನೆಯೇ ಎಂದು ಪ್ರಶ್ನಿಸಿದರು.

‌ ಮಾಜಿ ಸಚಿವ ಪ್ರಜಾಧ್ವನಿ ಯಾತ್ರೆಯ ಮುಂದಾಳು ಬಿ.ರಮಾನಾಥ ರೈ ಅವರು ಮಾತನಾಡಿ,
ಬಂಟ್ವಾಳ ವಿಧಾನ ಸಭಾ ಕ್ಷೇತ್ರದ ಲ್ಲಿ ಆರು ಭಾರಿ ಶಾಸಕನಾಗಿ ಪ್ರಾಮಾಣಿಕತೆಯಿಂದ ತಾಲೂಕಿನ ಜನರ ಸೇವೆ ಮಾಡಿದ್ದೇನೆ. ಕಾಂಗ್ರೆಸ್ ಪಕ್ಷ ಹಂತಹಂತವಾಗಿ ಜವಬ್ದಾರಿ ನೀಡಿದೆ.

ಜಾತ್ಯಾತೀತವಾಗಿ, ಸೈದ್ದಾಂತಿಕ ನಿಲುವಿನಲ್ಲಿ ರಾಜಿ ಮಾಡದೆ ಜನರ ಸೇವೆ ಮಾಡಿದ್ದೇನೆ.
ಆದರೆ ನಾನು ಮಾಡದ ,ಕನಸಿನಲ್ಲಿ ನೆನಸದ ಆರೋಪಗಳನ್ನು ನನ್ನ ಮೇಲೆ ಹಾಕಿ ಸೋಲಿಸುವ ಕೆಲಸ ವಿರೋಧ ಪಕ್ಷಗಳು ಮಾಡಿದ್ದು, ನನ್ನ ಮೇಲೆ ಮಾಡಿದ ಅರೋಪಗಳಿಗೆ ದೇವರ ಮೇಲೆ ಇಟ್ಟಿದ್ದೇನೆ, ಅದರ ಬಗ್ಗೆ ಮಾತನಾಡುವುದು ಸರಿಯಲ್ಲ ಎಂದು ಅವರು ಹೇಳಿದರು.

ಬಂಟ್ವಾಳ ಕ್ಷೇತ್ರದಲ್ಲಿ ಗಲಾಟೆ ಮಾಡಿಸಿದವರು ಇಂದಿನ ದಿನಗಳಲ್ಲಿ ಶಾಂತಿ ಇದೆ ಎಂದು ಹೇಳುತ್ತಿರುವುದು ಎಷ್ಟು ಸರಿ ಎಂದು ಅವರು ಪ್ರಶ್ನೆ ಮಾಡಿದರು.
ನಾನು ಯಾವುದೇ ಅಮಿಷಕ್ಕೆಒಳಗಾಗದೆ, ಕೆಲಸ ಮಾಡಿದ್ದೇನೆ. ಬಹುಗ್ರಾಮ ಯೋಜನೆ ಮೂಲಕ ಪ್ರತಿ ಮನೆಗೆ ನೀರು ನೀಡುವ ಕೆಲಸ ನನ್ನ ಅವಧಿಯಲ್ಲಿ ಮಾಡಿದ್ದೇನೆ ಎಂಬ ಖುಷಿ ಇದೆ ಎಂದು ಅವರು ತಿಳಿಸಿದರು.

ಸೌಹಾರ್ದ ಸೇತುವೆ, ಬೆಂಜನಪದವು ಕ್ರೀಡಾಂಗಣ, ಪಂಜೆಮಂಗೇಶ್ವರಾಯರ ಸಮುದಾಯ ಭವನ, ಅಂಬೇಡ್ಕರ್ ಭವನ ಅರ್ಧದಲ್ಲಿ ನಿಂತಿದ್ದು, ಅದೆಲ್ಲವನ್ನು ಪೂರ್ಣಮಾಡಬೇಕು ಎಂಬ ಕನಸು ನನ್ನದು,ಅದಕ್ಕಾಗಿ ನಾನು ಮತ್ತೊಮ್ಮೆ ನನಗೆ ಶಾಸಕನಾಗಿ ಆಯ್ಕೆಯಾಗಲು ಅವಕಾಶ ನೀಡಿ ಎಂದು ಅವರು ತಿಳಿಸಿದರು.

ನಾನು ಕೊನೆಯ ಬಾರಿ ಸ್ಪರ್ಧೆ ಮಾಡುತ್ತೇನೆ, ಅರ್ಧದಲ್ಲಿ ಬಾಕಿಯಾದ ಎಲ್ಲ ಕಾಮಗಾರಿಗಳನ್ನು ಪೂರ್ಣಮಾಡಬೇಕು ಎಂಬ ಆಸೆ ನನ್ನದು.
ಜನರ ಮೇಲಿನ ವಿಶ್ವಾಸವಿಟ್ಟು ನಿಮ್ಮ ಬಳಿಗೆ ಬಂದಿದೆ, ಮತದಾರರು ನನಗೆ ಶಕ್ತಿ ನೀಡಬೇಕು ಎಂದು ಅವರು ಮನವಿ ಮಾಡಿದರು.

ಕೋವಿಡ್ ಸಂದರ್ಭದಲ್ಲಿ ಇಂದಿರಾ ಗಾಂಧಿ ಕ್ಷೇಮ ನಿಧಿ ಎಂಬ ಹೆಸರಿನಲ್ಲಿ ಆಹಾರದ ಕಿಟ್ ವಿತರಣೆ ಮಾಡಿದ್ದೇನೆ.

ಈ ಸಂದರ್ಭದಲ್ಲಿ ಪ್ರಜಾಧ್ವನಿ ಯಾತ್ರೆಯ ಪ್ರಮುಖ ಪಿಯೂಸ್ ಎಲ್ .ರೋಡ್ರಿಗಸ್, ಬಂಟ್ವಾಳ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬೇಬಿಕುಂದರ್, ಪಾಣೆಮಂಗಳೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸುದೀಪ್ ಶೆಟ್ಟಿ, ಪ್ರಮುಖರಾದ ಸುದರ್ಶನ ಜೈನ್, ಚಂದ್ರಪ್ರಕಾಶ್ ಶೆಟ್ಟಿ ತುಂಬೆ,ಅಬ್ಬಾಸ್ ಆಲಿ, ವಾಸುಪೂಜಾರಿ, ಶಬೀರ್ ಸಿದ್ದಕಟ್ಟೆ,ರಾಜೀವ ಶೆಟ್ಟಿ ಎಡ್ತೂರು, ಶಾಹುಲ್ ಹಮೀದ್, ಜಗದೀಶ್ ಕೊಯಿಲ, ಮುಸಾಫಿರ್ ಅಹಮದ್, ಸಿದ್ದೀಕ್ ಬೋಗೊಡಿ,ರಝಾಕ್ ಕುಕ್ಕಾಜೆ, ಸಂಪತ್ ಕುಮಾರ್ ಶೆಟ್ಟಿ, ಶಿವಪ್ಪ ಪೂಜಾರಿ,ಲೋಲಾಕ್ಷ ಶೆಟ್ಟಿ, ವಿಲ್ಮಾ ಮೋರಸ್,ಸದಾಶಿವ ಬಂಗೇರ, ವೆಂಕಪ್ಪ ಪೂಜಾರಿ ಮತ್ತಿತರರು ಉಪಸ್ಥಿತರಿದ್ದರು.

More from the blog

ಮತದಾರರ ಜಾಗೃತಿ ಕಾರ್ಯಕ್ರಮ, ಕಾಲ್ನಡಿಗೆ ಜಾಥಾ ಹಾಗೂ ಬೀದಿನಾಟಕ

ತಾಲೂಕು ಪಂಚಾಯತ್‌ ಬಂಟ್ವಾಳ, ತಾಲೂಕು ಸ್ವೀಪ್‌ ಸಮಿತಿ, ಕಂದಾಯ ಇಲಾಖೆ, ಶಿಕ್ಷಣ ಇಲಾಖೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಆರೋಗ್ಯ ಇಲಾಖೆ, ಬಂಟ್ವಾಳ ಪುರಸಭೆ, ರಾಷ್ಟ್ರೀಯ ಸೇವಾ ಯೋಜನೆ, ಮತದಾರರ ಸಾಕ್ಷರತಾ...

ಕಾಸರಗೋಡು ಜಿಲ್ಲೆಯಲ್ಲಿ ರಾಜಕೀಯ ಲಾಭಕ್ಕಾಗಿ ಬ್ರಹ್ಮ ಶ್ರೀ ನಾರಾಯಣ ಗುರುಗಳ ಪೋಟೋ ಬಳಕೆ ಖಂಡನೀಯ-ಜಗದೀಶ್ ಕೊಯಿಲ

ಬಂಟ್ವಾಳ: ಕಾಸರಗೋಡು ಜಿಲ್ಲೆಯಲ್ಲಿ ರಾಜಕೀಯ ಲಾಭಕ್ಕಾಗಿ ಬ್ರಹ್ಮ ಶ್ರೀ ನಾರಾಯಣ ಗುರುಗಳ ಪೋಟೋ ಬಳಕೆ ಮಾಡಿದ್ದು ಖಂಡನೀಯ ಎಂದು ಜಗದೀಶ್ ಕೊಯಿಲ ತಿಳಿಸಿದ್ದಾರೆ. ಅವರು ಬಿಸಿರೋಡಿನ ಪ್ರೆಸ್ ಕ್ಲಬ್ ನಲ್ಲಿ ಕರೆದ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು. ರಾಷ್ಟ್ರೀಯ...

ಕೆ.ಎಸ್.ಆರ್.ಟಿ.ಸಿ.ಬಸ್ ಗೆ ಹಿಂಬದಿಯಿಂದ ಡಿಕ್ಕಿ ಹೊಡೆದ ಬೈಕ್ : ಮೂವರಿಗೆ ಗಾಯ

ಬಂಟ್ವಾಳ: ಕೆ.ಎಸ್.ಆರ್.ಟಿ.ಸಿ.ಬಸ್ ಗೆ ಹಿಂಬದಿಯಿಂದ ಬೈಕ್ ಡಿಕ್ಕಿಯಾಗಿ ಬೈಕಿನಲ್ಲಿದ್ದ ಮೂವರು ಗಾಯಗೊಂಡ ಘಟನೆ ಮಂಗಳೂರು ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯ ತುಂಬೆ ಸಮೀಪದ ಕಡೆಗೋಳಿ ಎಂಬಲ್ಲಿ ನಡೆದಿದೆ. ಮಂಗಳೂರಿನಿಂದ ಬರುತ್ತಿದ್ದ ಕೆ.ಎಸ್.ಆರ್.ಟಿ‌.ಸಿ.ಬಸ್ ಗೆ ಹೆಲ್ಮೆಟ್ ಧರಿಸಿದೆ...

ಮನೆ ಮನೆಗೆ ತೆರಳಿ ಲೋಕಸಭಾ ಅಭ್ಯರ್ಥಿ ಪದ್ಮರಾಜ್ ಪೂಜಾರಿ ಪರ ಮತಯಾಚನೆ

ನಮ್ಮ ಬೂತ್ ನಮ್ಮ ಹೊಣೆ ಘೋಷನೇಯಂತೆ ಬೂತ್ ಸಂಖ್ಯೆ 126 ವಾರ್ಡ್ 12 ರ ಅಜ್ಜೀಬೆಟ್ಟು ನಲ್ಲಿ ಮನೆ ಮನೆಗೆ ತೆರಲಿ ಲೋಕ ಸಭಾ ಅಭ್ಯರ್ಥಿ ಪದ್ಮರಾಜ್ ಪೂಜಾರಿಯವರ ಪರವಾಗಿ ಮತ ಯಾಚನೆ...