ಮನೆಯಲ್ಲಿ ಯಾರು ಇಲ್ಲದ ವೇಳೆಯಲ್ಲಿ ಮನೆಯೊಳಗೆ ನುಗ್ಗಿ ಕಪಾಟಿನಲ್ಲಿದ್ದ ಲಕ್ಷಾಂತರ ರೂ ಮೌಲ್ಯದ ನಗನಗದುಗಳನ್ನು ಕಳವು ಮಾಡಿದ ಘಟನೆ ತಡವಾಗಿ ಬೆಳಕಿಗೆ ಬಂದಿದೆ.
ಬಂಟ್ವಾಳ ಗ್ರಾಮಾಂತರ ಪೋಲೀಸ್ ಠಾಣಾ ವ್ಯಾಪ್ತಿಯ ತುಂಬೆ ಗ್ರಾಮದ ರಾಮಲ್ ಕಟ್ಟೆ ಎಂಬಲ್ಲಿ ನಡೆದಿದೆ. ರಾಮಲ್ ಕಟ್ಟೆ ನಿವಾಸಿ ಮೈಮುನಾ ಎಂಬವರ ಮನೆಯಲ್ಲಿ ಕಳ್ಳತನ ನಡೆದಿದ್ದು ಸುಮಾರು 8.70 ಲಕ್ಷ ಮೌಲ್ಯದ ಚಿನ್ನಾಭರಣ ಹಾಗೂ ನಗದು ಹಣ ಮತ್ತು ಬೆಲೆಬಾಳುವ ಇತರ ವಸ್ತುಗಳು ಕಳವಾಗಿದೆ.
ಮೈಮುನಾ ಅವರು ಫೆ. 27 ರಂದು ಅವರು ಉಪ್ಪಿನಂಗಡಿಯಲ್ಲಿರುವ ಸಂಬಂಧಿಕರ ಮನೆಗೆ ಹೋಗಿದ್ದು, ಮಾ.1 ರಂದು ಬಂದು ನೋಡಿದಾಗ ಬಾಗಿಲು ತೆರದಿತ್ತು. ಒಳಗೆ ಹೋಗಿನೋಡಿದಾಗ ಮನೆಯೊಳಗೆ ಕೋಣೆಯಲ್ಲಿ ಇರಿಸಲಾಗಿದ್ದ ಗೋದ್ರೆಜ್ ನಿಂದ 7,08,000 ಮೌಲ್ಯದ 236 ಗ್ರಾಂ.ಚಿನ್ನಾಭರಣ, 1.17,000 ರೂ ಮೌಲ್ಯದ ವಾಚುಗಳು, ರೂ 47,000 ನಗದು ಹಣ ಕಳವಾದ ಬಗ್ಗೆ ಗಮನಕ್ಕೆ ಬಂದ ಮೇಲೆ ಬಂಟ್ವಾಳ ಗ್ರಾಮಾಂತರ ಪೋಲೀಸ್ ಠಾಣೆಗೆ ದೂರು ನೀಡಿದ್ದಾರೆ.