ಬಂಟ್ವಾಳ: ಬಂಟ್ವಾಳ ನಗರ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದ ಪ್ರಕರಣವೊಂದಕ್ಕೆ ಸಂಬಂಧಿಸಿ ನ್ಯಾಯಾಲಯಕ್ಕೆ ಹಾಜರಾಗದೆ ತಲೆಮರೆಸಿಕೊಂಡಿದ್ದ ಆರೋಪಿಯನ್ನು ಬಂಟ್ವಾಳ ನಗರ ಪೊಲೀಸರು ಬಂಧಿಸಿದ್ದಾರೆ.
ಉಜಿರೆ ಹಳೇಪೇಟೆ ನಿವಾಸಿ ಮಣಿ ಅಲಿಯಾಸ್ ಮಣಿಕಂಠ ಬಂಧಿತ ಆರೋಪಿ.
ಬಂಟ್ವಾಳ ಠಾಣೆಯಲ್ಲಿ ದಾಖಲಾಗಿದ್ದ ಪ್ರಕರಣವೊಂದಕ್ಕೆ ಸಂಬಂಧಿಸಿ ಸುಮಾರು 19 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಬೆಳ್ತಂಗಡಿ ತಾಲೂಕಿನ ಉಜಿರೆ ಹಳೆಪೇಟೆ ಟಿ.ಬಿ.ಕ್ರಾಸ್ ನಿವಾಸಿ ಮಣಿಕಂಠ ಎಂಬಾತನನ್ನು ನೆಲ್ಯಾಡಿ ಸಮೀಪದ ಶಿಬಾಜೆ ಎಂಬಲ್ಲಿ ದಸ್ತಗಿರಿ ಮಾಡಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.
ಕಾರ್ಯಚರಣೆಯಲ್ಲಿ ಬಂಟ್ವಾಳ ಠಾಣಾ ವಾರೆಂಟ್ ಸಿಬ್ಬಂದಿಯಾದ ಹೆಚ್‌ಸಿ ಗಣೇಶ್, ಕೈಂ ಸಿಬ್ಬಂದಿಗಳಾದ ಹೆಚ್ ರಾಜೇಶ್, ಪ್ರವೀಣ್ ಭಾಗಿಯಾಗಿದ್ದರು.