Sunday, April 7, 2024

ಎ.ಟಿ.ಎಮ್ ನಲ್ಲಿ ಬಾಕಿಯಾಗಿದ್ದ ಹಣವನ್ನು ವಾರೀಸುದಾರರಿಗೆ ನೀಡಿ ಮಾನವೀಯತೆ ಮೆರೆದ ತಾ.ಕಚೇರಿ ಅಧಿಕಾರಿ ಸೀತಾರಾಮ.

ಎ.ಟಿ.ಎಮ್.ನಲ್ಲಿ ಬಾಕಿಯಾಗಿದ್ದ ಹಣವನ್ನು ಪೊಲೀಸ್ ಇಲಾಖೆಯ ಸಹಕಾರದಿಂದ ಪತ್ತೆ ಹಚ್ಚಿ ವಾರೀಸುದಾರರಿಗೆ ನೀಡಿ ತಾಲೂಕಿನ ಕಂದಾಯ ಇಲಾಖೆಯ ಅಧಿಕಾರಿಅ ಅವರು ಮಾನವೀಯತೆ ಮೆರೆದಿದ್ದಾರೆ.

ಬಂಟ್ವಾಳ ತಾಲೂಕು ಕಚೇರಿಯ ನಿವೃತ್ತ ಸಿಬ್ಬಂದಿ ಮುಕ್ತಬಾಯಿ ಎಂಬವರು ಹಣ ಕಳೆದುಕೊಂಡಿದ್ದರು. ಕಂದಾಯ ಇಲಾಖೆಯ ಅಧಿಕಾರಿ ಸೀತಾರಾಮ ಅವರು ಮಾನವೀಯತೆ ಮೆರೆದ ಅಧಿಕಾರಿಯಾಗಿದ್ದಾರೆ.
ಫೆ. 27 ರಂದು ಬಿಸಿರೋಡಿನ ಕೆನರಾ ಬ್ಯಾಂಕ್ ಎ.ಟಿ.ಎಮ್ ನಲ್ಲಿ ದೊರೆತ ರೂ.9000 ನಗದನ್ನು ಇಂದು ವಾರೀಸುದಾರರಿಗೆ ಬಂಟ್ವಾಳ ನಗರ ಪೋಲೀಸ್ ಠಾಣೆಯಲ್ಲಿ ಪೋಲೀಸರ ಸಮಕ್ಷಮ ನೀಡಲಾಯಿತು.
ಏನಾಗಿತ್ತು?
ಫೆ. 27 ರಂದು ಬಿಸಿರೋಡಿನ ಕೆನರಾ ಬ್ಯಾಂಕ್ ಎ.ಟಿ.ಎಮ್ ನಲ್ಲಿ ಹಣ ಡ್ರಾ ಮಾಡಲೆಂದು ತೆರಳಿದ್ದ ತಾಲೂಕು ಕಚೇರಿ ಸಿಬ್ಬಂದಿ ಸೀತಾರಾಮ ಅವರು ಎ‌ಟಿಎಮ್ ನಲ್ಲೇ ಬಾಕಿಯಾಗಿದ್ದ 9000 ನಗದು ಹಣವನ್ನು ಬಂಟ್ವಾಳ ‌ನಗರ ಪೋಲಿಸ್ ಠಾಣೆಗೆ ತಂದು ಒಪ್ಪಿಸಿದ್ದು, ಬಂಟ್ವಾಳ ಪೋಲೀಸರು ಕೆನರಾ ಬ್ಯಾಂಕ್ ಸಹಾಯ ಪಡೆದು ವಾರೀಸುದಾರನ್ನು ಪತ್ತೆ ಮಾಡಿದಾಗ ಮುಕ್ತಬಾಯಿ ಎಂದು ತಿಳಿದು ಅವರನ್ನು ಠಾಣೆಗೆ ಕರೆದು ಇಂದು ಫೆ. 2 ರಂದು ಹಸ್ತಾಂತರ ಮಾಡಲಾಯಿತು.

More from the blog

ಬಂಟ್ವಾಳ: ನಿಯಮ ಮೀರಿ ಚಾಲನೆ ಮಾಡಿ ಪೋಲೀಸರ ಕೈಗೆ ಸಿಕ್ಕಿಬಿದ್ದರೆ ದಂಡ ಗ್ಯಾರಂಟಿ….

ಬಂಟ್ವಾಳ: ರಸ್ತೆಯಲ್ಲಿ ಟ್ರಾಫಿಕ್ ಪೋಲೀಸರು ದಂಡ ವಸೂಲಿ ಮಾಡುವ ವೇಳೆ ಸುಳ್ಳು ಹೇಳಿಬಚಾವಾಗಲು ಸಾಧ್ಯವಿಲ್ಲ, ಜೊತೆಗೆ ಅಸಭ್ಯ ವರ್ತನೆ ಮಾಡಿದರೆ ಜೋಕೆ, ಅವರ ಶರೀರದಲ್ಲಿ ಕಣ್ಗಾವಲು ಕ್ಯಾಮರಾ ಅಳವಡಿಸಿಲಾಗಿದ್ದು, ಸೂಕ್ಷ್ಮವಾಗಿ ಎಲ್ಲವನ್ನು ಸೆರೆ...

ಪೊಳಲಿ ಶ್ರೀ ರಾಜರಾಜೇಶ್ವರಿ ದೇವಸ್ಥಾನದ ವಾರ್ಷಿಕ ಜಾತ್ರಾ ಮಹೋತ್ಸವ : ಚೆಂಡಿನ ಗದ್ದೆಯಲ್ಲಿ ಪ್ರಥಮ ಚೆಂಡು

ಇತಿಹಾಸ ಪ್ರಸಿದ್ಧ ಪೊಳಲಿ ಶ್ರೀ ರಾಜರಾಜೇಶ್ವರಿ ದೇವಸ್ಥಾನದ ವಾರ್ಷಿಕ ಜಾತ್ರಾ ಮಹೋತ್ಸವದ ಅಂಗವಾಗಿ ದೇವಳದ ಚೆಂಡಿನ ಗದ್ದೆಯಲ್ಲಿ ಇಂದು ಪ್ರಥಮ ಚೆಂಡು ನಡೆಯಿತು. ‌ ಇವತ್ತಿನಿಂದ ಮುಂದಿನ ಐದು ದಿನಗಳ ಕಾಲ ಇಲ್ಲಿ ಚೆಂಡು...

ಏಪ್ರಿಲ್ 7ರಂದು ಕರ್ನಾಟಕ ಜಾನಪದ ಪರಿಷತ್ತು ದ.ಕ.ಜಿಲ್ಲಾ ಬಂಟ್ವಾಳ ತಾಲೂಕು ಘಟಕದ ಉದ್ಘಾಟನೆ ಹಾಗೂ ಪದಗ್ರಹಣ ಸಮಾರಂಭ

ಬಂಟ್ವಾಳ: ಏಪ್ರಿಲ್ 7ರಂದು ಅಪರಾಹ್ನ 3 ಗಂಟೆಗೆ ಬಿ.ಸಿ.ರೋಡು ರಂಗೋಲಿ ಸಭಾಂಗಣದಲ್ಲಿ ಕರ್ನಾಟಕ ಜಾನಪದ ಪರಿಷತ್ತು ದ.ಕ.ಜಿಲ್ಲಾ ಬಂಟ್ವಾಳ ತಾಲೂಕು ಘಟಕದ ಉದ್ಘಾಟನೆ ಹಾಗೂ ಪದಗ್ರಹಣ ಸಮಾರಂಭ ನಡೆಯಲಿದೆ ಎಂದು ತಾಲೂಕು ಘಟಕದ...

ದ್ವಿಚಕ್ರ ವಾಹನಕ್ಕೆ ರಿಕ್ಷಾ ಡಿಕ್ಕಿ : ಸಹಸವಾರ ಸ್ಥಳದಲ್ಲೇ ಮೃತ್ಯು

ಬಂಟ್ವಾಳ: ರಿಕ್ಷಾ ಡಿಕ್ಕಿಯಾಗಿ ದ್ವಿಚಕ್ರ ವಾಹನದಲ್ಲಿ ಸಂಚಾರ ಮಾಡುತ್ತಿದ್ದ ಸಹಸವಾರ ಸ್ಥಳದಲ್ಲಿಯೇ ಮೃತಪಟ್ಟ ಘಟನೆ ನರಿಕೊಂಬು ಎಂಬಲ್ಲಿ ನಡೆದಿದೆ. ನರಿಕೊಂಬು ನಿವಾಸಿ ನೀಲಪ್ಪ ಪೂಜಾರಿ ಅವರ ಮಗ ಪವನ್ ( 17) ಮೃತಪಟ್ಟ ಬಾಲಕ. ಮನೆಯಿಂದ...