Saturday, April 6, 2024

ಜಗದ್ಗುರು ಬ್ರಹ್ಮಶ್ರೀ ನಾರಾಯಣ ಗುರುವರ್ಯರ 5ನೇ ವರ್ಷದ ಗುರು ಪೂಜೆ ಹಾಗೂ ನೂತನ ಗುರುಮಂದಿರ ನಿರ್ಮಾಣದ ಶಿಲಾನ್ಯಾಸ

ಪಿಲಾತಬೆಟ್ಟು, ಮೂಡು ಪಡುಕೋಡಿ, ಇರ್ವತ್ತೂರು ಗ್ರಾಮಗಳ ವ್ಯಾಪ್ತಿಯ ಬಿಲ್ಲವ ಸಮಾಜ ಸೇವಾ ಸಂಘ (ರಿ.) ಕುತ್ತಿಲ ಮತ್ತು ಕಿನ್ನಿದಾರು ಮಹಿಳಾ ಬಿಲ್ಲವ ಸಮಾಜ ಸೇವಾ ಸಮಿತಿ ಕುತ್ತಿಲ, ಪಿಲಾತಬೆಟ್ಟು-ಬಂಟ್ವಾಳ ತಾಲೂಕು-ಇದರ ಸಂಯುಕ್ತ ಆಶ್ರಯದಲ್ಲಿ,
ಜಗದ್ಗುರು ಬ್ರಹ್ಮಶ್ರೀ ನಾರಾಯಣ ಗುರುವರ್ಯರ ಐದನೇ ವರ್ಷದ ಗುರು ಪೂಜೆ ಹಾಗೂ ನೂತನ ಗುರುಮಂದಿರ ನಿರ್ಮಾಣದ ಶಿಲಾನ್ಯಾಸವು ಜರಗಿತು.

ಬೆಳಿಗ್ಗೆ 8.36ರ ಶುಭ ಲಗ್ನದಲ್ಲಿ ಬ್ರಹ್ಮ ಬೈದರ್ಕಳ ಗರಡಿ ಕುತ್ತಿಲದ ಆಡಳಿತ ಮೊಕ್ತೇಸರರಾದ, ಮಂದಿರ ನಿರ್ಮಾಣಕ್ಕೆ ಸ್ಥಳದಾನ ಮಾಡಿದ ಸುರೇಶ್ ಕರ್ಕೇರ ಮತ್ತು ಮನೆಯವರು ಶಿಲಾನ್ಯಾಸ ನೇರವೇರಿಸಿದರು.

ದಿವಂಗತ ಗುರುದಾಸ ಕರ್ಕೇರ ವೇದಿಕೆಯಲ್ಲಿ ನಡೆದ ಧಾರ್ಮಿಕ ಸಭಾ ಕಾರ್ಯಕ್ರಮದಲ್ಲಿ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದ ಮಾಜಿ ಜಿಲ್ಲಾ ಪಂಚಾಯತ್ ಉಪಾಧ್ಯಕ್ಷರಾದ ಎಂ.ತುಂಗಪ್ಪ ಬಂಗೇರ ಅವರು, ಬಿಲ್ಲವ ಸಮಾಜ ಈ ಭಾಗದಲ್ಲಿ ಒಗ್ಗಟ್ಟಾದದ್ದನ್ನು ನೋಡಿ ಸಂತೋಷವಾಗಿದೆ, ವಿದ್ಯೆಯಿಂದ ಜ್ಞಾನ ಸಂಪಾದನೆ ಮುಖ್ಯ ಆದ್ಯತೆಯಾಗಲಿ, ಆ ಮೂಲಕ ನಮ್ಮ ಮನೆಯನ್ನು ಆರ್ಥಿಕವಾಗಿ ಸಬಲೀಕರಣ ಮಾಡೋಣ, ಬಲಿಷ್ಠವಾದ ದೇಶವನ್ನು ಕಟ್ಟೋಣ ಎಂದು ಹೇಳಿದರು.

ತುಳು ಚಲನಚಿತ್ರ ನಟ ಅರ್ಜುನ್ ಕಾಪಿಕಾಡು ಎಲ್ಲಾ ರಂಗಗಳಲ್ಲಿ ನಮ್ಮವರು ಮಿಂಚಬೇಕು. ನನ್ನನ್ನು ಆಶೀರ್ವದಿಸಿದ ನಿಮಗೆಲ್ಲರಿಗೂ ವಂದನೆಗಳು ಎನ್ನುವ ಮೂಲಕ ಸಾರ್ವಜನಿಕರ ಬೇಡಿಕೆಯಂತೆ ಹಾಡನ್ನು ಹಾಡಿ ಸಭೆಯನ್ನು ರಂಜಿಸಿದರು.

ಬಂಟ್ವಾಳ ಮೋಟಾರ್ ವಾಹನ ನಿರೀಕ್ಷಕರಾದ ಕೆ.ಚರಣ್ ರವರು ನಮ್ಮ ಸಮಾಜ ಹಿಂದುಳಿದ ಸಮಾಜ ಎನ್ನುವ ಹಣೆಪಟ್ಟಿಯನ್ನು ತೊಡೆದು ಎಲ್ಲಾ ರಂಗಗಳಲ್ಲೂ ಸ್ವತಂತ್ರತೆಯನ್ನು ಪಡೆಯುವಲ್ಲಿ ಪ್ರಯತ್ನವನ್ನು ಮಾಡಬೇಕು ಎಂದರು.

ಬಿಲ್ಲವ ಮಹಾಮಂಡಲ ಮೂಲ್ಕಿ ಇದರ ವಕ್ತಾರಾದ ಬೇಬಿ ಕುಂದರ್, ಗಣೇಶ್ ಎಲೆಕ್ಟ್ರಿಕಲ್ಸ್ ಮಂಗಳೂರು ಇದರ ಮಾಲಕರಾದ ಸೀತಾರಾಮ್, ಬಂಟ್ವಾಳ ಸಂಘಟನೆಯ ಮಹತ್ವವನ್ನು ವಿವರಿಸಿದರು. ಬಿಲ್ಲವ ಸಮಾಜ ಸಂಘದ ಕೋಶಾಧಿಕಾರಿಗಳಾದ ಕೆ ಉಮೇಶ್ ಸುವರ್ಣ, ಮಂಗಳೂರಿನ ಮಾಸ್ಟರ್ ಜಿಮ್ ಕ್ಲಬ್ಬಿನ ಸ್ಥಾಪಕರಾದ ಉಮೇಶ್ ಪೂಜಾರಿ ಮಿತ್ತೊಟ್ಟು ಸಂಘಟನೆಯಲ್ಲಿ ಯುವ ಜನತೆಯ ಪಾತ್ರದ ಬಗ್ಗೆ ಉಲ್ಲೇಖ ಮಾಡಿದರು.

ವೇದಿಕೆಯಲ್ಲಿ ಬಂಟ್ವಾಳ ತಾಲೂಕು ಮಹಿಳಾ ಬಿಲ್ಲವ ಸಮಾಜ ಸೇವಾ ಸಮಿತಿಯ ಅಧ್ಯಕ್ಷರಾದ ರೇವತಿ ಬಡಗ ಬೆಳ್ಳೂರು, ಬಸವೇಶ್ವರ ದೇವಸ್ಥಾನ ಬಸವನಗುಡಿ ಇದರ ವ್ಯವಸ್ಥಾಪನ ಸಮಿತಿ ಅಧ್ಯಕ್ಷರಾದ ಪ್ರಶಾಂತ್ ಪೂಂಜಾಲಕಟ್ಟೆ, ಕಕ್ಕೆಪದವು ಬ್ರಹ್ಮ ಬೈದರ್ಕಲ ಗರಡಿ ಅಧ್ಯಕ್ಷರಾದ ಮಾಯಿಲಪ್ಪ ಸಾಲಿಯಾನ್, ಶೇಖರ್ ಪೂಜಾರಿ ಅಗಲ್ದೊಡಿ, ಬಂಟ್ವಾಳ ನಾರಾಯಣ ಗುರು ಸೇವಾ ಸಂಘ ನಿರ್ದೇಶಕರಾದ ಹೇಮಂತ ಕುಮಾರ್, ಪಿಲಾತಬೆಟ್ಟು ಗ್ರಾಮ ಪಂಚಾಯತ್ ಅಧ್ಯಕ್ಷರಾದ ಹರ್ಷಿಣಿ ಪುಷ್ಪಾನಂದ, ಇರ್ವತ್ತೂರು ಗ್ರಾಮ ಪಂಚಾಯತ್ ಅಧ್ಯಕ್ಷರಾದ ಎಂ.ಪಿ. ಶೇಖರ್ ಉಪಸ್ಥಿತರಿದ್ದರು.

ನಾರಾಯಣ ಗುರು ವಸತಿ ಶಾಲೆ ಪುಂಜಾಲಕಟ್ಟೆ ಇದರ ಪ್ರಾಂಶುಪಾಲರಾದ ಸಂತೋಷ್ ಕುಮಾರ್ ಅಲ್ಲಿಪಾದೆ, ಈಶ್ವರ ಸಾಲಿಯಾನ್ ನೈನಾಡು, ಗೋಪಾಲ ಪೂಜಾರಿ ಮಾಡ, ಪ್ರವೀಣ್ ಪೂಜಾರಿ ಪಡಂತ್ರಬೆಟ್ಟು, ಚೇತನ್ ಕುಮಾರ್ ಆಲದ ಪದವು, ಜಯ ಪೂಜಾರಿ ಮೂಡಲ್‌ಗುತ್ತು, ಶರತ್ ಕೋಟ್ಯಾನ್ ಅಳದಂಗಡಿ, ದಿವ್ಯೇಶ್ ಕರ್ಕೇರ, ಸುಶಾಂತ್ ಕರ್ಕೇರ ಇವರ ಗೌರವ ಉಪಸ್ಥಿತಿಯಲ್ಲಿ, ಸಂಘದ ಅಧ್ಯಕ್ಷರಾದ ಗಿರೀಶ್ ಸಾಲಿಯಾನ್ ಹೆಗಡೆಬೆಟ್ಟು ಕಿನ್ನಿದಾರು ಮಹಿಳಾ ಸಮಿತಿಯ ಅಧ್ಯಕ್ಷೆ ಸೌಮ್ಯಶ್ರೀ ಮೋನಪ್ಪ ಇವರ ಉಪಸ್ಥಿತಿಯಲ್ಲಿ ಶ್ರೀನಿವಾಸ.ಪಿ ಅತ್ತಾಜೆ ಪ್ರಸ್ತಾವನೆಯೊಂದಿಗೆ ಅತಿಥಿಗಳನ್ನು ಸ್ವಾಗತಿಸಿದರು ಪೂರ್ಣಿಮಾ ರಾಜೇಶ್ ಕಾರ್ಯಕ್ರಮ ನಿರೂಪಣೆ ಮಾಡಿದರು.

ಅನ್ನ ಸಂತರ್ಪಣೆಯೊಂದಿಗೆ ಅಪರಾಹ್ಣ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗಿತ್ತು.

More from the blog

ನೀತಿ ಸಂಹಿತೆ ಉಲ್ಲಂಘನೆ : ಕೋಟಾ ಶ್ರೀನಿವಾಸ್‌ ಪೂಜಾರಿಗೆ ಕೋರ್ಟ್‌ ಸಮನ್ಸ್‌

ಬೆಂಗಳೂರು: ಬಿಜೆಪಿ ಅಭ್ಯರ್ಥಿ ಕೋಟಾ ಶ್ರೀನಿವಾಸ್‌ ಪೂಜಾರಿ ಅವರಿಗೆ ಕೋರ್ಟ್‌ ಸಮನ್ಸ್‌ ಜಾರಿ ಮಾಡಿದೆ. ಕೋಟಾ ಶ್ರೀನಿವಾಸ ಪೂಜಾರಿ, ಗುರ್ಮೆ ಸುರೇಶ್ ಶೆಟ್ಟಿ, ಲಾಲಾಜಿ ಮೆಂಡನ್ ಹಾಗೂ ಶಾಲಾ ಆಡಳಿತ ಮಂಡಳಿಗೆ ಜನಪ್ರತಿನಿಧಿಗಳ ವಿಶೇಷ...

ಸರ್ಕಾರದ ಕೋವಿ ಠೇವಣಿ ಕ್ರಮ: ಪರವಾನಿಗೆ ಪಡೆದ ರೈತರಿಂದ ಚುನಾವಣೆ ಬಹಿಷ್ಕಾರ 

ವಿಟ್ಲ: ಕರ್ನಾಟಕ ರಾಜ್ಯ ರೈತ ಸಂಘ ಹಸಿರುಸೇನೆಯ ದ.ಕ.ಜಿಲ್ಲಾ ಸಮಿತಿ ಮತ್ತು ಕೋವಿ ಪರವಾನಿಗೆ ಪಡೆದ ರೈತ ಬಳಕೆದಾರರ ಸಂಘವು ಈ ಬಾರಿ ಚುನಾವಣೆ ಬಹಿಷ್ಕರಿಸುತ್ತದೆ ಎಂದು ರೈತ ಸಂಘದ ಜಿಲ್ಲಾಧ್ಯಕ್ಷ ಶ್ರೀಧರ...

ಟ್ರಾಫಿಕ್ ಪೊಲೀಸ್ ಠಾಣೆಯ ಕಾಮಗಾರಿಯನ್ನು ಪೊಲೀಸ್ ಹೌಸಿಂಗ್ ಕಾರ್ಪೋರೇಸನ್ ಎಡಿಜಿಪಿ ರಾಮಚಂದ್ರರಾವ್ ವೀಕ್ಷಣೆ

ಬಂಟ್ವಾಳ; ಬಿಸಿರೋಡಿನ ಪಾಣೆಮಂಗಳೂರಿನಲ್ಲಿ ಅಂದಾಜು ರೂ.3.18 ಕೋಟಿ ವೆಚ್ಚದಲ್ಲಿ ನೂತನವಾಗಿ ನಿರ್ಮಾಣವಾಗುತ್ತಿರುವ ಟ್ರಾಫಿಕ್ ಪೋಲೀಸ್ ಠಾಣೆಯ ಕಾಮಗಾರಿಯನ್ನು ಪೋಲಿಸ್ ಹೌಸಿಂಗ್ ಕಾರ್ಪೋರೇಸನ್ ಎಡಿಜಿಪಿ ರಾಮಚಂದ್ರರಾವ್ ವೀಕ್ಷಣೆ ನಡೆಸಿದರು. ಉತ್ತಮ ಗುಣಮಟ್ಟದಲ್ಲಿ ಠಾಣೆಯ ಕೆಲಸವನ್ನು ಮಾಡುವ...

ಸೌಜನ್ಯ ಹೋರಾಟ ಸಮಿತಿಯಿಂದ ನೋಟ ಅಭಿಯಾನ

ಮಂಗಳೂರು: ರಾಜಕೀಯ ಪಕ್ಷಗಳು ಮತ್ತು ನ್ಯಾಯಾಂಗ ವ್ಯವಸ್ಥೆಯ ಗಮನ ಸೆಳೆಯುವ ಉದ್ದೇಶದಿಂದ ಸೌಜನ್ಯ ಪರ ಹೋರಾಟ ಸಮಿತಿ ವತಿಯಿಂದ ಮುಂಬರುವ‌ ಲೋಕಸಭಾ ಚುನಾವಣೆಯಲ್ಲಿ ನೋಟಕ್ಕೆ ಮತ ಚಲಾಯಿಸಲು ಜನ ಸಾಮಾನ್ಯರನ್ನು ಪ್ರೇರೇಪಿಸಲು ನೋಟ...