Monday, April 8, 2024

ಗಾಣದಪಡ್ಪು ಬ್ರಹ್ಮಶ್ರೀ ನಾರಾಯಣ ಗುರು ಶಾಖೆಯಲ್ಲಿ ಮಾತೃ ವಂದನಾ ಕಾರ್ಯಕ್ರಮ

ಬ್ರಹ್ಮಶ್ರೀ ನಾರಾಯಣ ಗುರು ಶಾಖೆ, ಗಾಣದಪಡ್ಪು ಇಲ್ಲಿ ಮಾತೃ ಧ್ಯಾನ, ಮಾತೃ ಪೂಜನ, ಮಾತೃ ವಂದನಾ ಹಾಗೂ ಮಾತೃ ಭೋಜನ ಕಾರ್ಯಕ್ರಮ ನಡೆಯಿತು

ಯೋಗಬಂಧುಗಳು ಹಾಗೂ ಯೋಗೇತರ ಬಂಧುಗಳು, ಪುಟಾಣಿ ಮಕ್ಕಳ ಸಮ್ಮಿಲನದೊಂದಿಗೆ ಕಾರ್ಯಕ್ರಮವೂ ಅಮ್ಮನ ಪ್ರೀತಿ -ವಾತ್ಸಲ್ಯದ ನೆನಪಿನ ಲೋಕದಲ್ಲಿ ..ಭಾವಾನಾತ್ಮಕವಾಗಿ… ಕೌಟುಂಬಿಕ ಸಂಬಂಧಗಳ ಮಹತ್ವ ತಿಳಿದುಕೊಳ್ಳುವ ಮೂಲಕ ಎಲ್ಲಾ ಯೋಗಬಂಧುಗಳ ಉತ್ಸಾಹ.. ಸಂಭ್ರಮ-ಸಡಗರ ಮಾತೃಶಾಖೆಯವರ ಸಂಪೂರ್ಣ ಸಹಕಾರದಿಂದ ಮಾತೃ ವಂದನಾ ಕಾರ್ಯಕ್ರಮವೂ ಬಹಳ ಅರ್ಥಪೂರ್ಣವಾಗಿ ಯಶಸ್ವಿಯಾಗಿ ನಡೆಯಿತು.

ಮೊದಲಿಗೆ ಶಾಖೆಯ ಯೋಗ ಬಂಧುಗಳು ಸಾಮೂಹಿಕ ಭಜನೆ ಮಾಡುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಆಟೋಟಗಳನ್ನು ಜಿಲ್ಲಾ ಪ್ರಮುಖರು -ನಗರ ಪ್ರಮುಖರು- ತಾಲೂಕು ಪ್ರಮುಖರು ಸೇರಿ ನಡೆಸಿಕೊಟ್ಟರು.. ಶ್ರೀ ರಕ್ತೇಶ್ವರೀ ಶಾಖೆಯ ಶಿಕ್ಷಕರು ಕೂಡ ಪ್ರಮುಖರಿಗೆ ಸಹಕರಿಸಿದರು

ನಗುವೇ ಯೋಗದೊಂದಿಗೆ ಸಭಾ ಕಾರ್ಯಕ್ರಮದ ಪ್ರಾಸ್ತಾವಿಕ ನುಡಿಯನ್ನು ಜಿಲ್ಲಾ ಸಂಸ್ಕಾರ ಪ್ರಮುಖರಾದ ಲಕ್ಷ್ಮೀ ನಾರಾಯಣ ಅವರು ತಾಯಿಯ ಬಗೆಗಿನ ಪ್ರೀತಿ -ವಾತ್ಸಲ್ಯ ತುಂಬಿದ ವಿಚಾರ ಹಾಗೂ ಸಮಿತಿಯ ಪರಿಚಯಗಳನ್ನು ಮನ ಮುಟ್ಟುವಂತೆ ವಿವರಿಸಿದರು.

ಮುಖ್ಯ ಅಭ್ಯಾಗತರಾಗಿ ಬಿ.ಸಿ.ರೋಡು ನ್ಯಾಯವಾದಿ ಶೈಲಜಾ ರಾಜೇಶ್ ಅವರು, ಮಾತೃತ್ವ ದ ಬಗ್ಗೆ ಹಿತನುಡಿಗಳನ್ನಾಡಿದರು
ಅಧ್ಯಕ್ಷತೆಯನ್ನು ಶ್ರೀ ರಕ್ತೇಶ್ವರಿ ಶಾಖೆಯ ಶಿಕ್ಷಕರಾದ ಸುಗುಣ ಅವರು, ವಹಿಸಿಕೊಂಡು ಸಮಿತಿಯು ನಡೆಸುವಂತ ಕಾರ್ಯಕ್ರಮಗಳ ಬಗ್ಗೆ ಸಂಕ್ಷಿಪ್ತವಾಗಿ ವಿವರಿಸಿದರು
ಕಾರ್ಯಕ್ರಮದ ನಿರೂಪಣೆಯನ್ನು ಮಲ್ಲಿಕಾ, ವೈಯಕ್ತಿಕ ಪ್ರಾರ್ಥನೆಯನ್ನು ಸುಮಿತ್ರ,  ಸ್ವಾಗತವನ್ನು ಯಶಿಕ, ವರದಿಯನ್ನು ಅಮೃತ,
ಅದೇ ರೀತಿ ವಂದನಾರ್ಪಣೆಯನ್ನು ವನಿತಾ ನಡೆಸಿಕೊಟ್ಟರು.

ಈ ಕಾರ್ಯಕ್ರಮವೂ ಬಹಳ ಯಶಸ್ವಿಯಾಗಿ ಹಾಗೂ ಅಚ್ಚುಕಟ್ಟಾಗಿ ನಡೆಯಲು ಮಾರ್ಗದರ್ಶನ ನೀಡಿದ ಪ್ರಾಂತ್ಯ ಪ್ರಮುಖರು ಹಾಗೂ ಮಾರ್ಗದರ್ಶನ ನೀಡುವುದರೊಂದಿಗೆ ಸಂಪೂರ್ಣ ಸಹಕರಿಸಿದ ಜಿಲ್ಲಾ ಪ್ರಮುಖರು, ಕಂಕನಾಡಿ ನಗರದ ಎಲ್ಲಾ ಪ್ರಮುಖರು, ಹಾಗೂ ತಾಲೂಕುವಾರು ಪ್ರಮುಖರು, ಶಿಕ್ಷಕರು, ಬಂಟ್ವಾಳ ತಾಲೂಕು ಶಾಖೆಯ ಎಲ್ಲಾ ಯೋಗಬಂಧುಗಳು ಭಾಗವಹಿಸಿದ್ದರು.

 

More from the blog

ವಿಶ್ವ ಹಿಂದೂ ಪರಿಷತ್, ಭಜರಂಗದಳ ಬಂಟ್ವಾಳ ಪ್ರಖಂಡ ವತಿಯಿಂದ “ನಮ್ಮನಡೆ ಪೊಳಲಿ ದೇವಸ್ಥಾನದ ಕಡೆ” ಬೃಹತ್ ಪಾದಯಾತ್ರೆ

ಬಂಟ್ವಾಳ: ವಿಶ್ವ ಹಿಂದೂ ಪರಿಷತ್,ಭಜರಂಗದಳ ಬಂಟ್ವಾಳ ಪ್ರಖಂಡ ವತಿಯಿಂದ ಲೋಕಕಲ್ಯಾಣಾರ್ಥವಾಗಿ "ನಮ್ಮನಡೆ ಪೊಳಲಿ ದೇವಸ್ಥಾನದ ಕಡೆ" ಬೃಹತ್ ಪಾದಯಾತ್ರೆಯು ಭಾನುವಾರ ಮುಂಜಾನೆ ನಡೆಯಿತು. ಬೆಳಗ್ಗಿನ ಜಾವ‌ 5.30 ರ ವೇಳೆಗೆ ಕಡೆಗೋಳಿ ಪೊಳಲಿ ದ್ವಾರ,...

ತುಂಬೆ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಜೀರ್ಣೋದ್ಧಾರ ಹಾಗೂ ಬ್ರಹ್ಮಕಲಶೋತ್ಸವ ಕಾರ್ಯಕ್ರಮದಲ್ಲಿ ಶ್ರಮಿಸಿದ ಸ್ವಯಂಸೇವಕರಿಗೆ ಕೃತಜ್ಞತಾ ಸಭೆ

ಬಂಟ್ವಾಳ: ದೇವಸ್ಥಾನದ ನಿರ್ಮಾಣ ಮಾಡಿದರೆ,ಸಾಲದು ಅದರ ಪ್ರಭಾವ ಇನ್ನಷ್ಟು ಬೆಳಗಬೇಕಾದರೆ ಭಕ್ತರು ಕ್ಷೇತ್ರಕ್ಕೆ ಬಂದು ದೇವರ ದರ್ಶನ ಮಾಡಬೇಕಾಗಿದೆ ಎಂದು ಶ್ರೀ ಧಾಮ ಮಾಣಿಲ ಕ್ಷೇತ್ರದ ಯೋಗಿ ಕೌಸ್ತುಭ ಶ್ರೀ ಶ್ರೀ ಮೋಹನದಾಸ ಸ್ವಾಮೀಜಿ...

ಪ್ರಶಾಂತ್ ಪುಂಜಾಲಕಟ್ಟೆ ಅವರಿಗೆ ಪಿತೃ ವಿಯೋಗ

ಬಂಟ್ವಾಳ: ನಮ್ಮ ಬಂಟ್ವಾಳ ಸಮೂಹ ಸಂಸ್ಥೆಯ ಮಾಲಕರಾದ ಪ್ರಶಾಂತ್ ಪುಂಜಾಲಕಟ್ಟೆ ಅವರ ತೀರ್ಥರೂಪರು, ಕುಕ್ಕಳ ಗ್ರಾಮದ ಪುಂಜಾಲಕಟ್ಟೆ ನಿವಾಸಿ ಸಂಜೀವ ಪೂಜಾರಿ( 83) ಅವರು ಅಲ್ಪಕಾಲದ ಅಸೌಖ್ಯದಿಂದ ಎ.6ರಂದು ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ...

ಬಂಟ್ವಾಳ: ನಿಯಮ ಮೀರಿ ಚಾಲನೆ ಮಾಡಿ ಪೋಲೀಸರ ಕೈಗೆ ಸಿಕ್ಕಿಬಿದ್ದರೆ ದಂಡ ಗ್ಯಾರಂಟಿ….

ಬಂಟ್ವಾಳ: ರಸ್ತೆಯಲ್ಲಿ ಟ್ರಾಫಿಕ್ ಪೋಲೀಸರು ದಂಡ ವಸೂಲಿ ಮಾಡುವ ವೇಳೆ ಸುಳ್ಳು ಹೇಳಿಬಚಾವಾಗಲು ಸಾಧ್ಯವಿಲ್ಲ, ಜೊತೆಗೆ ಅಸಭ್ಯ ವರ್ತನೆ ಮಾಡಿದರೆ ಜೋಕೆ, ಅವರ ಶರೀರದಲ್ಲಿ ಕಣ್ಗಾವಲು ಕ್ಯಾಮರಾ ಅಳವಡಿಸಿಲಾಗಿದ್ದು, ಸೂಕ್ಷ್ಮವಾಗಿ ಎಲ್ಲವನ್ನು ಸೆರೆ...