ಪುತ್ತೂರು: ಕಾರೊಂದು ಎರಡು ವಿದ್ಯುತ್ ಕಂಬಕ್ಕೆ ಗುದ್ದಿ 50 ಅಡಿ ಆಳದ ತೋಟಕ್ಕೆ ಬಿದ್ದ ಪರಿಣಾಮ ಓರ್ವ ಮೃತಪಟ್ಟ ಘಟನೆ ಸಂಟ್ಯಾರು ಬೆಟ್ಟಂಪಾಡಿ ರಸ್ತೆಯ ಸಂಟ್ಯಾರು ಸಮೀಪದ ಬಳಕ್ಕ ಎಂಬಲ್ಲಿ ನಡೆದಿದೆ.
ಅಪಘಾತದಲ್ಲಿ ಮೃತಪಟ್ಟವರನ್ನು ನಿಡ್ಪಳ್ಳಿ ಗ್ರಾ.ಪಂ.ನ ಬಿಜೆಪಿ ಬೆಂಬಲಿತ ಸದಸ್ಯ ಮುರಳೀಧರ್ ಭಟ್ ಎಂದು ಗುರುತಿಸಲಾಗಿದೆ.
ಫೋರ್ಡ್ ಫಿಗೋ ಕಾರು ಬೆಟ್ಟಂಪಾಡಿ ಕಡೆ ಪ್ರಯಾಣಿಸುತ್ತಿದ್ದಾಗ ಚಾಲಕನ ನಿಯಂತ್ರಣ ತಪ್ಪಿ, ರಸ್ತೆ ಬದಿಯಲ್ಲಿದ್ದ ಎರಡು ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದು ತೋಟಕ್ಕೆ ಬಿದ್ದಿದೆ. ಅಪಘಾತದಲ್ಲಿ ಮುರಳಿ ಕೃಷ್ಣ ಮೃತಪಟ್ಟಿದ್ದು, ಗಾಯಳುಗಳನ್ನು ಸಮೀಪದ ಆಸ್ಪತ್ರೆಗೆ ದಾಖಲಿಸಲಾಗಿದೆ. ಬೆಟ್ಟಂಪಾಡಿಯ ದಿಲೀಪ್ ಕುಮಾರ್‌ರಾವ್, ಶಶಿಕುಮಾರ್, ನವನೀತ್ ಅವರು ಕಾರಿನಲ್ಲಿದ್ದರು ಎಂದು ತಿಳಿದುಬಂದಿದೆ.
ಪುತ್ತೂರು ಡಿವೈಎಸ್ಪಿ ವೀರಯ್ಯ ಹೀರೆಮಠ್ ಅಪಘಾತದ ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿದ್ದು ತನಿಖೆ ನಡೆಸುತ್ತಿದ್ದಾರೆ