ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಬಜೆಟ್ ಮಂಡನೆ ಮಾಡಿದ ಬಳಿಕ ಬಜೆಟ್ ಭಾಷಣದ ಪೂರ್ಣ ಪ್ರತಿ ಇಂಡಿಯಾ ಬಜೆಟ್ ವೆಬ್ಸೈಟ್ನಲ್ಲಿ ಲಭ್ಯವಿರಲಿದೆ. ಈ ವೆಬ್ಸೈಟ್ನಿಂದ ಪಿಡಿಎಫ್ ಪ್ರತಿಯನ್ನು ಡೌನ್ಲೋಡ್ ಮಾಡಿಕೊಳ್ಳಬಹುದಾಗಿದೆ.
ಮೊದಲು ನೀವು ಬಜೆಟ್ ವೆಬ್ಸೈಟ್ ಲಿಂಕ್ (www.indiabudget.gov.in) ಓಪನ್ ಮಾಡಬೇಕು. ನಂತರ ‘ಬಜೆಟ್ ಸ್ಪೀಚ್’ ಟ್ಯಾಬ್ ಅನ್ನು ಕ್ಲಿಕ್ ಮಾಡುವ ಮೂಲಕ ಬಜೆಟ್ ಪ್ರತಿಯನ್ನು ನೀವು ವೀಕ್ಷಿಸಬಹುದು. ಅಲ್ಲಿ ವಿವಿಧ ಹಣಕಾಸು ವರ್ಷಗಳ ಬಜೆಟ್ ಪ್ರತಿಗಳಿರುತ್ತವೆ. ಈ ಪೈಕಿ ನಿಮ್ಮ ಆಯ್ಕೆಯ ಹಣಕಾಸು ವರ್ಷವನ್ನು ಕ್ಲಿಕ್ ಮಾಡಿ ನಂತರ ಡೌನ್ಲೋಡ್ ಆಯ್ಕೆ ಮೇಲೆ ಕ್ಲಿಕ್ ಮಾಡಿದರೆ ಬಜೆಟ್ ಪ್ರತಿ ಡೌನ್ಲೋಡ್ ಆಗುತ್ತದೆ.
ಈ ಬಾರಿಯ ಬಜೆಟ್ ಪ್ರತಿ ಡೌನ್ಲೋಡ್ ಮಾಡುವುದು ಹೇಗೆ..?
ಈ ಬಾರಿಯ ಬಜೆಟ್ ಪ್ರತಿಯನ್ನು ಡೌನ್ಲೋಡ್ ಮಾಡುವುದಕ್ಕಾಗಿ ನೀವು ಇಂಡಿಯಾ ಬಜೆಟ್ ವೆಬ್ಸೈಟ್ಗೆ ಭೇಟಿ ನೀಡಿದ ಬಳಿಕ ‘2023-24 ಬಜೆಟ್ ಪಿಡಿಎಫ್’ ಅನ್ನು ಆಯ್ಕೆ ಮಾಡಬೇಕು. ನಂತರ ಡೌನ್ಲೋಡ್ ಕ್ಲಿಕ್ ಮಾಡಬೇಕು. ಬಜೆಟ್ ಮಂಡನೆ ಪ್ರಕ್ರಿಯೆ ಮುಗಿದ ಬಳಿಕವಷ್ಟೇ ಬಜೆಟ್ ಪಿಡಿಎಫ್ ಪ್ರತಿ ಲಭ್ಯವಾಗಲಿದೆ ಎಂಬುದು ನೆನಪಿರಲಿ. ಅದೇ ರೀತಿ ಬಜೆಟ್ ಮಂಡನೆ ಬಳಿಕ ಕನ್ನಡ ಸೇರಿದಂತೆ ಎಲ್ಲ ಪ್ರಾದೇಶಿಕ ಭಾಷೆಗಳಲ್ಲಿ ಬಜೆಟ್ ಭಾಷಣ ಲಭ್ಯವಾಗಲಿದೆ. ಅಧಿಕೃತ ವೆಬ್ಸೈಟ್ನ ಲಿಂಕ್ನಲ್ಲಿ ಪ್ರಾದೇಶಿಕ ಭಾಷೆಗಳ ಆಯ್ಕೆ ಇರುತ್ತದೆ. ನಿಮಗೆ ಯಾವ ಭಾಷೆ ಬೇಕೋ ಅದನ್ನು ಆಯ್ಕೆ ಮಾಡಿಕೊಂಡು, ನಿಮ್ಮದೇ ಭಾಷೆಯಲ್ಲಿ ಬಜೆಟ್ ಕಾಪಿಯನ್ನು ಓದಬಹುದು.