Sunday, October 22, 2023

ವಿಠಲ್ ಜೇಸೀಸ್ ಆಂಗ್ಲ ಮಾಧ್ಯಮ ಪ್ರೌಢಶಾಲೆಯಲ್ಲಿ ಕವಿಗೋಷ್ಠಿ, ಸಂವಾದ

Must read

ವಿಟ್ಲ: ಪ್ರತಿಯೊಂದು ಕ್ಷಣಗಳಲ್ಲಿ ಹೊಸತನದೊಂದಿಗೆ, ಸ್ವರಚನೆಯ ಪ್ರಯತ್ನದಿಂದ ಸಾಹಿತ್ಯ ಸೃಷ್ಠಿಯಾದಾಗ ಸುಂದರವಾಗಿರುತ್ತದೆ. ತರಬೇತಿ, ಕಮ್ಮಟಗಳು ಮಕ್ಕಳ ಸಾಹಿತ್ಯ ಬೆಳವಣಿಗೆಗೆ ಮಾರ್ಗದರ್ಶಕವಾಗುವುದು. ಶಾಲೆ ಹಾಗೂ ಹೆತ್ತವರ ಪ್ರೋತ್ಸಾಹದಿಂದ ಮಕ್ಕಳ ಸಾಹಿತ್ಯ ಬೆಳೆಯಲು ಸಾಧ್ಯ ಎಂದು ಬಂಟ್ವಾಳ ಮಕ್ಕಳ ಲೋಕದ ಭಾಸ್ಕರ ಅಡ್ವಳ ಹೇಳಿದರು.

ಅವರು ವಿಟ್ಲ ಜೇಸೀ ಪೆವಿಲಿಯನ್ ನಲ್ಲಿ ವಿಠಲ ಜೇಸೀಸ್ ಆಂಗ್ಲಮಾಧ್ಯಮ ಪ್ರೌಢಶಾಲೆಯ ಕನ್ನಡ ಮತ್ತು ಸಾಹಿತ್ಯ ಸಮಿತಿ ಸಹಕಾರದಲ್ಲಿ ಪುಸ್ತಕ ಬಿಡುಗಡೆ, ಸಂವಾದ, ಬಾಲಕವಿಗೋಷ್ಠಿ ಮತ್ತು ಕವಿಗೋಷ್ಠಿ ಕಾರ್ಯಕ್ರಮ ನಡೆ ಸಾಹಿತ್ಯದೆಡೆಗೆ – 2023 ರಲ್ಲಿ ಪುಸ್ತಕ ಬಿಡುಗಡೆ ಮಾಡಿ ಮಾತನಾಡಿದರು.

ವಿಠಲ ಜೇಸೀಸ್ ಆಂಗ್ಲಮಾಧ್ಯಮ ಪೌಢಶಾಲೆಯ ಅಧ್ಯಕ್ಷ ಎಲ್.ಎನ್. ಕೂಡೂರು ಅಧ್ಯಕ್ಷತೆ ವಹಿಸಿದ್ದರು. ಪೋಷಕರ ಪರವಾಗಿ ಶೈಲಜಾ ಜಿ.ಎನ್., ಡಾ. ಕೃಷ್ಣ ಮೂರ್ತಿ, ಶಿಕ್ಷಕರ ಪರವಾಗಿ ಉಪಪ್ರಾಂಶುಪಾಲೆ ಜ್ಯೋತಿ ಶೆಣೈ, ಶಿಕ್ಷಕಿ ಸವಿತ ಅನಿಸಿಕೆ ವ್ಯಕ್ತ ಪಡಿಸಿದರು. ಮಾಣಿ ಕರ್ನಾಟಕ ಪದವಿ ಪೂರ್ವ ಕಾಲೇಜು ಪ್ರಾಂಶುಪಾಲೆ ರಶ್ಮಿಕಾ ಸುರೇಶ್, ಉಪಾಧ್ಯಕ್ಷ ಶ್ರೀಧರ ಶೆಟ್ಟಿ ಡಿ., ನಿರ್ದೇಶಕ ಹಸನ್ ವಿಟ್ಲ ಉಪಸ್ಥಿತರಿದ್ದರು. ಪ್ರಾಂಶುಪಾಲ ಜಯರಾಮ ರೈ ಸ್ವಾಗತಿಸಿದರು. ಆಡಳಿತಾಧಿಕಾರಿ ರಾಧಾಕೃಷ್ಣ ಎ. ಪ್ರಸ್ತಾವನೆಗೈದರು. ಸರಸ್ವತಿ ಡಿ. ಪುಸ್ತಕ ಪರಿಚಯ ಮಾಡಿದರು. ಉಪಪ್ರಾಂಶುಪಾಲೆ ಹೇಮಲತಾ ವಂದಿಸಿದರು. ನಿಹಾ, ನವ್ಯ ಭಟ್ ಕಾರ್ಯಕ್ರಮ ನಿರೂಪಿಸಿದರು.

ಅಧ್ಯಕ್ಷರೊಂದಿಗೆ ಸಂವಾದ:
ವಿಠಲ ಜೇಸೀಸ್ ಆಂಗ್ಲಮಾಧ್ಯಮ ಪ್ರೌಢಶಾಲೆಯ ಅಧ್ಯಕ್ಷ ಎಲ್.ಎನ್. ಕೂಡೂರು ಅವರೊಂದಿಗೆ ಸಂವಾದ ಕಾರ್ಯಕ್ರಮ ನಡೆಯಿತು. ವಿದ್ಯಾರ್ಥಿಗಳಾದ ಶಮ, ಚಿನ್ಮಯಿ, ನಮ್ರತಾ, ಋತ್ವಿಕಾ, ಮೊನೀಶ್ ಸಂವಾದಲ್ಲಿ ಭಾಗವಹಿಸಿದರು. ಶಿಕ್ಷಕಿ ಕವಿತಾ, ಸರ್ವಮಂಗಳ ಕಾರ್ಯಕ್ರಮ ನಿರೂಪಿಸಿದರು.

ಕವಿಗೋಷ್ಠಿ:
ತುಳಸಿ ಕೈರಂಗಳ ಕವಿಗೋಷ್ಠಿಗೆ ಚಾಲನೆ ನೀಡಿದರು. ಕವಿಗೋಷ್ಠಿಯ ಅಧ್ಯಕ್ಷತೆಯನ್ನು ರಾಜರಾಮ ವರ್ಮ ವಿಟ್ಲ ವಹಿಸಿದ್ದರು. ಬಾಲ ಕವಿಗಳಾದ ಆದ್ಯಾ, ಅವನಿ, ದೃತಿ, ನವ್ಯ, ಪ್ರಜ್ವಲ್, ಮೋನಿಷ್, ಶಮಂತ್, ಶ್ರೀಯಾ, ಮೋಹಿತ್ ಎಚ್., ರಸ್ಮಿಯಾ, ನಮ್ರತ, ಮಹೀಮ ಆರ್.ಕೆ., ನಿನಾದ್ ಕೈರಂಗಳ ಭಾಗವಹಿಸಿದರು. ಹಿರಿಯ ಕವಿಗಳಾದ ಅಶೋಕ್ ಕಡೇಶಿವಾಲಯ, ಅನ್ನಪೂರ್ಣ ಕುತ್ಪಾಜೆ, ಜಯರಾಮ ಪಡ್ರೆ, ವಿಷ್ಣುಗುಪ್ತ ಪುಣಚ, ತುಳಸಿ ಕೈರಂಗಳ, ನಾರಾಯಣ ಕುಂಬ್ರ, ಡಾ. ಮೈತ್ರಿ ಭಟ್, ಕಾವ್ಯಶ್ರೀ ಅಳಿಕೆ, ಸೀತಾಲಕ್ಷ್ಮೀ ವರ್ಮ, ರಶ್ಮಿಕಾ ಸುರೇಶ್ ಭಾಗವಹಿಸಿದರು. ಸೌಮ್ಯಾ ಸರಸ್ವತಿ ಗೀತಾ ಜಯಶ್ರೀ ಶೀಲಾ ಸ್ವಾಗತಿಸಿದರು. ಕಾರ್ಯಕ್ರಮ ನಿರೂಪಿಸಿದರು. ಶಲೆಟ್ ಸೆಲೆಸ್ಟಿನ್ ವಂದಿಸಿದರು.

More articles

Latest article