ಶ್ವೇತಾ ನಿತಿನ್ ಪೂಜಾರಿ ಅವರ ಮಗು ಲವೀಶ್ ಈತನ ಚಿಕಿತ್ಸೆಗಾಗಿ ಭವತಿ ಭಿಕ್ಷಾದೇಹಿ ಮೂಲಕ ಒಟ್ಟು ಸೇರಿಸಿದ ರೂ.1,09,896 ನ್ನು ಮಗುವಿನ ಕುಟುಂಬಕ್ಕೆ ಹಸ್ತಾಂತರ ಮಾಡಿದರು.
ಬಂಟ್ವಾಳ ತಾಲೂಕಿನ ನೀರಾಜೆ ನಿವಾಸಿಯಾಗಿರುವ ಲವೀಶ್ ಎಂಬ ಪುಟ್ಟ ಮಗುವಿನ ಶಸ್ತ್ರ ಚಿಕಿತ್ಸೆಗಾಗಿ ಬೆಂಗಳೂರಿನ ನಾರಾಯಣ ಹೃದಾಲಯಕ್ಕೆ ದಾಖಲಿಸಬೇಕಿತ್ತು. ಅಲ್ಲಿ ಸುಮಾರು 7 ಲಕ್ಷ ರೂ ವೆಚ್ಚ ತಗಲುತ್ತದೆ ಎಂಬ ವಿಚಾರವನ್ನು ವೈದ್ಯ ತಂಡ ಮಗುವಿನ ಪೋಷಕರಲ್ಲಿ ತಿಳಿಸಿತ್ತು.
ಬಡ ಕುಟುಂಬದ ಕೂಲಿ ಮಾಡಿ ಜೀವನ ಸಾಗಿಸುವ ಈ ಕುಟುಂಬಕ್ಕೆ ಮಗುವಿನ ಶಸ್ತ್ರ ಚಿಕಿತ್ಸೆ ಮಾಡುವುದು ಕನಸಿನ ಮಾತಾಗಿತ್ತು. ಮಗುವಿನ ಚಿಕಿತ್ಸೆಗಾಗಿ ಕಣ್ಣೀರು ಹಾಕುವ ಕುಟುಂಬಕ್ಕೆ ನೆರವಿನ ಹಸ್ತ ನೀಡಿ ಶ್ರೀ ಶಾರದಾ ಫ್ರೆಂಡ್ಸ್ ಸರ್ಕಲ್ ಸಜೀಪಮುನ್ನೂರಿನ ಯುವಕರ ತಂಡ ಧೈರ್ಯ ತುಂಬಿದವರು.
ಈ ಹಿಂದೆಯೂ ಅನೇಕ ಅಶಕ್ತರಿಗೆ ನೆರವಾದ ಈ ಸಂಘಟನೆ, ಇವರ 10 ನೇ ಮಾಸಿಕ ಯೋಜನೆಯ ಮೂಲಕ ಲವೀಶ್ ಅವರಿಗೆ ಲಕ್ಷ ಹಣವನ್ನು ನೀಡಿ ಮಾನವೀಯತೆ ಮೆರೆದಿದ್ದಾರೆ. ಆಪತ್ಬಾಂಧವ ಸಂತೋಷ್ ಶೆಟ್ಟಿ ದಳಂದಿಲ ಭವತಿ ಬಿಕ್ಷಾದೇಹಿ ಮೂಲಕ ಜೋಡಿಸಿದ ಹಣ ಲವೀಶ್ ನ ಚಿಕಿತ್ಸೆ ಸಾಕಾಗುವುದಿಲ್ಲ ಎಂಬ ಚಿಂತೆಯಲ್ಲಿರುವ ಕುಟುಂಬಕ್ಕೆ ನೆರವಾಗಿದ್ದು ಮುಂಬಯಿಯ ಕಾರ್ಪೋರೆಟ್ ರ್ ಯುವ ಉದ್ಯಮಿ ಸಜೀಪ ನಿವಾಸಿ ಸಂತೋಷ್ ಶೆಟ್ಟಿ ದಳಂದಿಳ. ಶಾರದ ಫ್ರೆಂಡ್ಸ್ ಸರ್ಕಲ್ ನ ಯುವಕರು ಮಗುವಿನ ಚಿಕಿತ್ಸೆಗಾಗಿ ಸಹಾಯದ ಬಗ್ಗೆ ಕೇಳಿದಾಗ ಅವರು ಬೆಂಗಳೂರಿನ ನಾರಾಯಣ ಹೃದಯಾಲಯದ ಖ್ಯಾತ ವೈದ್ಯ ದೇವಿಪ್ರಸಾದ್ ಅವರ ಸಂಪರ್ಕ ಮಾಡಿ ಬಡ ಕುಟುಂಬದ ಮಗುವಿನ ಶಸ್ತ್ರ ಚಿಕಿತ್ಸೆಯ ವೆಚ್ಚವನ್ನು ಕಡಿಮೆ ಮಾಡಬೇಕು ಎಂದು ವಿನಂತಿಸಿಕೊಂಡ ಹಿನ್ನೆಲೆಯಲ್ಲಿ ವೈದ್ಯರು ಒಪ್ಪಿಕೊಂಡಿದ್ದು, ಕೇವಲ 1.5 ಲಕ್ಷ ದಲ್ಲಿ ಶಸ್ತ್ರ ಚಿಕಿತ್ಸೆ ಮಾಡಿದ್ದಾರೆ.