Saturday, April 20, 2024

ಸುರಕ್ಷಾ ಸಂಗಮ ಪೂರ್ಲಿಪ್ಪಾಡಿ ಕಲ್ಲಡ್ಕ ಇದರ ಪ್ರಾಯೋಜಕತ್ವದ ರಕ್ತದಾನ ಶಿಬಿರ : ಲಾಂಛನ ಅನಾವರಣ

ಸುರಕ್ಷಾ ಸಂಗಮ ಪೂರ್ಲಿಪ್ಪಾಡಿ ಕಲ್ಲಡ್ಕ ಇದರ ಪ್ರಾಯೋಜಕತ್ವದಲ್ಲಿ ಬ್ಯಾಂಕ್ ಆಫ್ ಬರೋಡಾ, ಕಲ್ಲಡ್ಕ ಶಾಖೆ ಮತ್ತು ಝಾನ್ಸಿರಾಣಿ ಲಕ್ಷೀಬಾಯಿ ಮಹಿಳಾ ಮಂಡಳಿ (ರಿ.) ಕಲ್ಲಡ್ಕ ಹಾಗೂ ಕಸ್ತೂರ್ಬಾ ಮೆಡಿಕಲ್ ಕಾಲೇಜು, ಮಂಗಳೂರು ಇದರ ಸಹಯೋಗದೊಂದಿಗೆ ಕಲ್ಲಡ್ಕದ ಪಂಚವಟಿ ವಾಣಿಜ್ಯ ಸಂಕೀರ್ಣದ ಪದ್ಮಾವತಿ ಕಲ್ಯಾಣ ಮಂಟಪದಲ್ಲಿ ರಕ್ತದಾನ ಶಿಬಿರ ಪುತ್ತೂರು ವಿದ್ಯಾವರ್ಧಕ ಸಂಘದ ಅಧ್ಯಕ್ಷರಾದ ಡಾ ಪ್ರಭಾಕರ್ ಭಟ್ ಕಲ್ಲಡ್ಕ ಇವರ ಅಧ್ಯಕ್ಷತೆಯಲ್ಲಿ ಜರಗಿತು.

ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಪುತ್ತೂರು ವಿದ್ಯಾವರ್ಧಕ ಸಂಘದ ಅಧ್ಯಕ್ಷರಾದ ಡಾ ಪ್ರಭಾಕರ್ ಭಟ್ ಕಲ್ಲಡ್ಕ ಅವರು “ನನ್ನ ಜೀವವನ್ನುಳಿಸಲು ರಕ್ತದಾನ ಮಾಡಿದ ರಕ್ತದಾನಿ ನೀವಾಗಿರಬಹುದೇ?” ಎನ್ನುವ ಧ್ಯೇಯವಾಕ್ಯದೊಂದಿಗೆ, ಪ್ರತಿವರ್ಷದಂತೆ ನಾಡಿನಾದ್ಯಂತ ಹಲವಾರು ಇನ್ನಿತರ ವಿಶೇಷ ಕಾರ್ಯಕ್ರಮಗಳನ್ನು ಯಶಸ್ವಿಯಾಗಿ ನಡೆಸಿ ಸದರಿ ಈ ವರ್ಷವೂ ರಕ್ತದಾನ ಶಿಬಿರ ಎನ್ನುವ ಮಹತ್ತರ ಕಾರ್ಯಕ್ರಮವನ್ನು ಮಾಡುವುದು ಅಭಿನಂದಕರವಾಗಿದೆ. ರಕ್ತದಾನ ಮೂಲಕ ಖರ್ಚು ಇಲ್ಲದೆ ಪುಣ್ಯ ಸಂಪಾದಿಸಲು ಸಾಧ್ಯ ಎಂದರು.

ಕೆ.ಎಂ.ಸಿ ಡಾಕ್ಟರ್ ಅಖಿಲ್ ರಕ್ತದಾನ ಯಾರೆಲ್ಲ ಮಾಡಬಹುದು ಎನ್ನುವ ಬಗ್ಗೆ ಮಾಹಿತಿ ನೀಡಿದರು ಹಾಗೂ ಕಾರ್ಯಕ್ರಮದ ಸಂಘಟಕರಿಗೆ ತನ್ನ ಸಂಸ್ಥೆಯ ವತಿಯಿಂದ ಅಭಿನಂದನಾ ಪತ್ರ ನೀಡಿದರು.

ಕಾರ್ಯಕ್ರಮ ದಲ್ಲಿ ಸುರಕ್ಷಾ ಸಂಗಮ (ರಿ.) ಪೂರ್ಲಿಪ್ಪಾಡಿ, ಕಲ್ಲಡ್ಕ ಇದರ ಲಾಂಛನವನ್ನು ಅನಾವರಣ ಗೊಳಿಸಲಾಯಿತು.

ಕಾರ್ಯಕ್ರಮದ ವೇದಿಕೆಯಲ್ಲಿ ಮಾಜಿ ಶಾಸಕರಾದ ಏ. ರುಕ್ಮಯ ಪೂಜಾರಿ, ಪದ್ಮನಾಭ ಕೊಟ್ಟರಿ, ಬಾಳ್ತಿಲ ಗ್ರಾಮ ಪಂಚಾಯತ್ ಅಧ್ಯಕ್ಷೆ ಹಿರಣ್ಮಯಿ, ಝಾನ್ಸಿರಾಣಿ ಲಕ್ಷೀಬಾಯಿ ಮಹಿಳಾ ಮಂಡಳಿ ಅಧ್ಯಕ್ಷೆ ಮೀನಾಕ್ಷಿ ಆರ್. ಪೂಜಾರಿ, ಸುರಕ್ಷಾ ಸಂಗಮ (ರಿ.) ಪೂರ್ಲಿಪ್ಪಾಡಿ ಕಲ್ಲಡ್ಕ ಇದರ ಗೌರವ ಅಧ್ಯಕ್ಷರಾದ ವೆಂಕಟ್ರಾಯ ಪ್ರಭು, ಉಪಸ್ಥಿತರಿದ್ದರು.

ಜಯಂತಿ ಪ್ರಾರ್ಥಿಸಿ, ಸುರಕ್ಷಾ ಸಂಗಮ (ರಿ.) ಪೂರ್ಲಿಪ್ಪಾಡಿ ಇದರ ಅಧ್ಯಕ್ಷರಾದ ನಿತಿನ್ ಕುಮಾರ್ ಸ್ವಾಗತಿಸಿ, ಸಂಘದ ಸಲಹಾ ಸಮಿತಿಯ ಸದಸ್ಯರು ಯತಿನ್ ಕುಮಾರ್ ಪ್ರಸ್ತಾವಿಕ ಬಾಷಣ ಮಾತನಾಡಿ, ಬ್ಯಾಂಕ್ ಆಫ್ ಬರೋಡದ ಮ್ಯಾನೇಜರ್ ಸದಾಶಿವ ಆಚಾರ್ಯ ಧನ್ಯವಾದ ನೀಡಿದರು. ರಾಜೇಶ್ ಕೊಟ್ಟಾರಿ ಕಾರ್ಯಕ್ರಮ ನಿರೂಪಿಸಿದರು.

More from the blog

ಸೈಕಲ್ ರಿಪೇರಿಗೆ ಹಟ : ಬಾಲಕ ಆತ್ಮಹತ್ಯೆ

ಉಪ್ಪಿನಂಗಡಿ: ಬಾಲಕನೋರ್ವ ಆತ್ಮಹತ್ಯೆ ಮಾಡಿಕೊಂಡ ಘಟನೆ ಕರಾಯ ಗ್ರಾಮದ ಶಿವಗಿರಿ ದುಗಲಾಡಿ ಎಂಬಲ್ಲಿ ನಡೆದಿದೆ. ಮೂಲತಃ ಪಂಜದ ಅಳ್ಪೆಬನದ ನಿವಾಸಿ. ದಿ. ರೋಹಿತ್ ಮತ್ತು ರಮ್ಯ ದಂಪತಿಗಳ ಪುತ್ರ ಖಾಸಗಿ ಶಾಲೆಯ 8ನೇ ತರಗತಿಯ...

ಆಸ್ಪತ್ರೆಯಿಂದ ಆಂಬ್ಯುಲೆನ್ಸ್ ನಲ್ಲಿ ತೆರಳಿ ಸಿಇಟಿ ಪರೀಕ್ಷೆ ಬರೆದ ಆ್ಯಸಿಡ್ ದಾಳಿ ಸಂತ್ರಸ್ಥೆ ವಿದ್ಯಾರ್ಥಿನಿ

ಕಡಬ: ಆ್ಯಸಿಡ್ ದಾಳಿಗೆ ಒಳಗಾಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಕಡಬದ ಸರ್ಕಾರಿ ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿನಿ ಆಂಬ್ಯುಲೆನ್ಸ್ ಮೂಲಕ ತೆರಳಿ ಸಿಇಟಿ ಪರೀಕ್ಷೆ ಬರೆದಿದ್ದಾರೆ. ಮಾರ್ಚ್ 4ರಂದು ಕಾಲೇಜಿನಲ್ಲಿ ಪರೀಕ್ಷೆಗೆ ತಯಾರಾಗುತ್ತಿದ್ದ ವೇಳೆ ಅಬಿನ್...

ಬಂಟ್ವಾಳ ಬ್ಲಾಕ್ ಕಾಂಗ್ರೆಸ್ ಕಚೇರಿಗೆ ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಭೇಟಿ

ದಕ್ಷಿಣ ಕನ್ನಡ ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಇಂದು ಬಂಟ್ವಾಳ ಬ್ಲಾಕ್ ಕಾಂಗ್ರೆಸ್ ಕಚೇರಿಗೆ ದ.ಕ ಜಿಲ್ಲಾ ಉಸ್ತುವಾರಿ ಸಚಿವರಾದ ದಿನೇಶ್ ಗುಂಡೂರಾವ್ ರವರು ಭೇಟಿ ನೀಡಿ ಪಕ್ಷದ ಮುಖಂಡರು ಹಾಗೂ ಕಾರ್ಯಕರ್ತರ ಸಮಾಲೋಚನಾ...

ಜನಪರವಾದ ಕೆಲಸ ಮಾಡದ ಬಿಜೆಪಿಗೆ ಸೋಲು ಖಚಿತ-ಚಾಮರಸ ಮಾಲೀಪಾಟೀಲ್

ಬಂಟ್ವಾಳ: 2024 ರ ಚುನಾವಣೆಯಲ್ಲಿ ಬಿಜೆಪಿ ಹಾಗೂ ಮಿತ್ರಪಕ್ಷವನ್ನು ಸೋಲಿಸುವ ತೀರ್ಮಾನವನ್ನು ಕರ್ನಾಟಕ ರಾಜ್ಯ ರೈತ ಸಂಘ ಮಾಡಿದ್ದು, ಈ ದೃಷ್ಟಿಯಿಂದ ರೈತರ ಮನವೊಲಿಸುವ ಕಾರ್ಯದಲ್ಲಿ ತೊಡಗಿದ್ದೇವೆ, ಈ ಬಾರಿ ಬಿಜೆಪಿ ನೆಲಕಚ್ಚುವುದು...