ವಿಟ್ಲ: ಇತ್ತೀಚೆಗೆ ಅಪಘಾತದಲ್ಲಿ ನಿಧನ ಹೊಂದಿದ ಮಾಣಿಲ ಗ್ರಾಮದ ತಾರಿದಲ ನಿವಾಸಿ ನಾರಾಯಣ ಪೂಜಾರಿಯವರ ಮಗ ಮನೋಜ್ ಅವರ ಮನೆಗೆ ವಿಟ್ಲ ಬಿಲ್ಲವ ಸಂಘದ ಪದಾಧಿಕಾರಿಯವರು ಭೇಟಿ ನೀಡಿ ಆರ್ಥಿಕ ಧನಸಹಾಯವನ್ನು ನೀಡಿ, ಅವರ ತಾಯಿ ಮೋಹಿನಿಯವರಿಗೆ ಸಾಂತ್ವನದ ನುಡಿಗಳನ್ನು ಹೇಳಿದರು.
ಈ ಸಂದರ್ಭದಲ್ಲಿ ಬೆಳ್ಳಿಹಬ್ಬ ಸಮಿತಿ ಯ ಅಧ್ಯಕ್ಷ ರಾದ ಡಾ. ಗೀತಪ್ರಕಾಶ್, ಬಿಲ್ಲವಸಂಘದ ಪೂರ್ವಾಧ್ಯಕ್ಷರಾದ ಸಂಜೀವ ಪೂಜಾರಿ ನಿಡ್ಯ, ಚಂದ್ರಹಾಸ ಸುವರ್ಣ, ಅಧ್ಯಕ್ಷರಾದ ಹರೀಶ್ ಸಿ. ಹೆಚ್, ಕಾರ್ಯದರ್ಶಿ ಸಂಜೀವ ಪೂಜಾರಿ ಎಂ.ಎಸ್ ಮತ್ತು ಬಾಳೆಕಲ್ಲು ಗರಡಿ ಮನೆಯ ಐತಪ್ಪ ಪೂಜಾರಿ ಅವರು ಉಪಸ್ಥಿತರಿದ್ದರು.