ಬಂಟ್ವಾಳ: ಬಂಟ್ವಾಳ ತಾಲೂಕು ತೆಂಕಕಜೆಕಾರ್ ಗ್ರಾಮದ ಕಜೆಕಾರಿನಲ್ಲಿ ಮಾಜಿ ಗ್ರಾಮ ಪಂಚಾಯತ್ ಸದಸ್ಯರಾದ ಗಂಗಾಧರ ಪೂಜಾರಿ ಇವರ ನೇತೃತ್ವದಲ್ಲಿ ನಮ್ಮ ಜವನೆರ್ ಇವರ ಸಹಕಾರದೊಂದಿಗೆ ಕಜೆಕಾರು ಉತ್ಸವ 2023 ಹಾಗೂ ಕಬಡ್ಡಿ ಕ್ರೀಡಾಕೂಟ ಯಶಸ್ವಿಯಾಗಿ ನೆರವೇರಿತು.
ಕ್ರೀಡಾ ಜ್ಯೋತಿ ಕಜೆಕಾರು ಶ್ರೀ ಮಹಾದೇವದೇವೇಶ್ವರ ದೇವಸ್ಥಾನದ ಬಳಿಯಿಂದ ಅದ್ದೂರಿ ಮೆರವಣಿಗೆಯಲ್ಲಿ ಆಗಮಿಸಿತು.
ಕ್ರೀಡಾಜ್ಯೋತಿಯನ್ನು ಕಜೆಕಾರು ದೇವಸ್ಥಾನದ ಆಡಳಿತ ಸಮಿತಿಯ ಅಧ್ಯಕ್ಷರು ಗುಣಶೇಖರ ಕೊಡಂಗೆ ಬೆಳಗಿಸಿದರು ನಂತರ ಕ್ರೀಡಾಂಗಣದಲ್ಲಿ ಬಡಗಕಜೆಕಾರ್ ಶಾಲಾ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನೆರವೇರಿತು.
ಬಂಟ್ವಾಳ ವಿಧಾನಸಭಾ ಶಾಸಕರಾದ ರಾಜೇಶ್ ನಾಯಕ್ ಉಳಿಪಾಡಿಗುತ್ತು ಇವರ ಅಧ್ಯಕ್ಷತೆಯಲ್ಲಿ ನೆರವೇರಿದ ಸಭಾಕಾರ್ಯಕ್ರಮದ ಉದ್ಘಾಟನೆಯನ್ನು ಬಡಗಕಜೆಕಾರ್ ಗ್ರಾಮ ಪಂಚಾಯತ್ ಉಪಾಧ್ಯಕ್ಷರು ಡಿಕಯ್ಯ ಬಂಗೇರ ನೆರವೇರಿಸಿ ಕ್ರೀಡಾಕೂಟಕ್ಕೆ ಶುಭಹಾರೈಸಿದರು.
ಮಾಜಿ ಸಚಿವರಾದ ರಮಾನಾಥ ರೈ ಹಾಗೂ ಗ್ರಾಮ ಪಂಚಾಯತ್ ಸದಸ್ಯರುಗಳು ಹಲವು ಗಣ್ಯರು ಉಪಸ್ಥಿತರಿದ್ದರು.
ಕಜೆಕಾರಿನ ಸುಮಾರು 49 ಸಾಧಕರನ್ನು ಸನ್ಮಾನಿಸಲಾಯಿತು. ದೇವದಾಸ್ ಕಜೆಕಾರ್ ಸ್ವಾಗತಿಸಿ ಗಂಗಾಧರ ಪೂಜಾರಿಯವರು ಉತ್ಸವಕ್ಕೆ ಸಹಕರಿಸಿದ ಎಲ್ಲರಿಗೂ ವಂದಿಸಿದರು.
ಶಿವರಾಜ್ ಗಟ್ಟಿ ಕಾರ್ಯಕ್ರಮ ನಿರೂಪಿಸಿದರು. ನಂತರ 60ಕೆಜಿ ವಿಭಾಗ ಮತ್ತು ಮುಕ್ತ ವಿಭಾಗದ ಕಬ್ಬಡಿ ಕ್ರೀಡಾಕೂಟ ನೆರವೇರಿತು.