Tuesday, April 9, 2024

ಟ್ರಾಫಿಕ್ ಪೊಲೀಸ್ ಠಾಣೆ ಮಂಜೂರಾದ ಜಮೀನು ಒತ್ತುವರಿ : ಜಾಗದ ಗುರುತಿಗಾಗಿ ಅಧಿಕಾರಿಗಳ ಸಮ್ಮುಖದಲ್ಲಿ ಸರ್ವೇ ಕಾರ್ಯ

ಪಾಣೆಮಂಗಳೂರು ಹಳೆಯ ಸೇತುವೆ ಬಳಿ ಟ್ರಾಫಿಕ್ ಪೊಲೀಸ್ ಠಾಣೆ ಮಂಜೂರಾದ ಜಮೀನಿನ ಒತ್ತುವರಿ ನಡೆದಿದೆ ಎಂಬ ದೂರಿನ ಹಿನ್ನೆಲೆ, ಜಾಗದ ಗುರುತಿಗಾಗಿ ಸರ್ವೇ ಕಾರ್ಯ ಬುಧವಾರ ಅಧಿಕಾರಿಗಳ ಸಮ್ಮುಖದಲ್ಲಿ ನಡೆದಿದೆ.

ಪಾಣೆಮಂಗಳೂರು ಹಳೆಯ ಸೇತುವೆ ಬಳಿ ಹಳೆಯದಾದ ಪಶುಸಂಗೋಪನೆ ಇಲಾಖೆ ಕಾರ್ಯಚರಿಸುತ್ತಿದ್ದ ಹಂಚಿನಛಾವಣಿ ಹೊಂದಿರುವ ಕಟ್ಟಡ ಸಮೇತ ಸುಮಾರು 38 ಸೆಂಟ್ಸ್ ಜಾಗವನ್ನು ನಿವೇಶನ ರಹಿತ ಟ್ರಾಫಿಕ್ ಪೊಲೀಸ್ ಠಾಣೆಗೆ ಕಟ್ಟಡ ನಿರ್ಮಾಣಕ್ಕೆ ಸರಕಾರ ಮಂಜೂರು ಮಾಡಿತ್ತು.

ಮಂಜೂರಾತಿ ಆಗಿ ಮೂರು ವರ್ಷ ಕಳೆದರು ಈ ಜಾಗದಲ್ಲಿ ಕಟ್ಟಡ ನಿರ್ಮಾಣ ವಾಗಲಿಲ್ಲ. ಟ್ರಾಪಿಕ್ ಪೊಲೀಸ್ ಠಾಣೆ ನಿರ್ಮಾಣಕ್ಕೆ ಜಾಗ ಮಂಜೂರುಗೊಂಡ ಬಳಿಕ ಹೌಸಿಂಗ್ ಬೋರ್ಡ್ ನವರು ಬಂದು ಜಮೀನಿನ ವಿಸ್ತೀರ್ಣ ನೋಡಿದಾಗ ಇಲ್ಲಿ 23 ಸೆಂಟ್ಸ್ ಜಾಗ ಮಾತ್ರ ಇರುವ ಬಗ್ಗೆ ಖಾತ್ರಿಯಾಯಿತು. ಅ ಕಾರಣಕ್ಕಾಗಿ ಹೌಸಿಂಗ್ ಬೋರ್ಡ್ ನವರು ಇಲ್ಲಿ ಸಾಕಷ್ಟು ಜಾಗದ ಕೊರತೆ ಯಿರುವ ಕಾರಣ ಕಟ್ಟಡ ನಿರ್ಮಾಣ ಅಸಾಧ್ಯ ಎಂದು ತಿಳಿಸಿದ್ದಾರೆ.

ಸರಕಾರ ಟ್ರಾಪಿಕ್ ಪೊಲೀಸ್ ಠಾಣೆಗೆಂದು ಮಂಜೂರು ಮಾಡಿದ ಜೊತೆಗೆ ಪಶುಸಂಗೋಪನೆ ಇಲಾಖೆಯ ಹೆಸರಿನಲ್ಲಿ ಇದ್ದ 38 ಸೆಂಟ್ಸ್ ಜಾಗದ ಬದಲಾಗಿ ಪ್ರಸ್ತುತ ಕೇವಲ 23 ಸೆಂಟ್ಸ್ ಬಾಕಿ ಉಳಿದಿದ್ದು 15 ಸೆಂಟ್ಸ್ ಜಾಗವನ್ನು ಅಲ್ಲಿನ ಸ್ಥಳೀಯ ರು ಒತ್ತುವರಿ ಮಾಡಿ ಅ ಜಾಗದಲ್ಲಿ ಮನೆ ನಿರ್ಮಾಣ ಮಾಡಿದ ಬಗ್ಗೆ ದೂರುಗಳು ಕೇಳಿ ಬಂದ ಹಿನ್ನೆಲೆಯಲ್ಲಿ ಪೊಲೀಸ್ ಇಲಾಖೆ ಕಂದಾಯ ಇಲಾಖೆಗೆ ದೂರು ನೀಡಿ ಜಾಗ ಅಳತೆ ಮಾಡಿಕೊಡುವಂತೆ ಮಾಡಿಕೊಡುವಂತೆ ಕೇಳಿದ್ದರು.

ಪೊಲೀಸ್ ಇಲಾಖೆಯ ಮನವಿಯಂತೆ ಕಂದಾಯ ಇಲಾಖೆ ಸರ್ವೇ ಇಲಾಖೆಯ ಸಿಬ್ಬಂದಿಗಳನ್ನು ಜಮೀನಿನ ಸರ್ವೇ ಕಾರ್ಯಕ್ಕಾಗಿ ಇಂದು ಕಳುಹಿಸಲಾಗಿದೆ.

ಸರ್ವೇ ಸಂದರ್ಭದಲ್ಲಿ 15 ಸೆಂಟ್ಸ್ ಜಾಗವನ್ನು ‌ಒತ್ತುವರಿ ಮಾಡಿದ ಬಗ್ಗೆ ಗಮನಕ್ಕೆ ಬಂದಿದ್ದು, ಪೊಲೀಸ್ ಸ್ಟೇಷನ್ ಗೆ ಸೇರಿದ ಜಾಗವನ್ನು ಮತ್ತೆ ಇಲಾಖೆಗೆ ಬಿಟ್ಟುಕೊಡುವಂತೆ ತಹಶಿಲ್ದಾರರ ಮೂಲಕ ಮನವಿ ಮಾಡಿದ್ದಾರೆ.

ಒತ್ತುವರಿ ಮಾಡಿರುವ ಜಾಗದಲ್ಲಿ ಅಲ್ಲಿನ ನಿವಾಸಿಗಳು ಮನೆನಿರ್ಮಿಸಿಕೊಂಡಿದ್ದಾರೆ ಎಂದು ಹೇಳಲಾಗಿದೆ.

ಸರ್ವೇ ಕಾರ್ಯದ ಸಂದರ್ಭದಲ್ಲಿ ಟ್ರಾಫಿಕ್ ಎಸ್.ಐ‌.ಮೂರ್ತಿ,ಎ.ಎಸ್.ಗಳಾದ ವಿಜಯ, ಸುರೇಶ್ ಪಡಾರ್ ಹಾಗೂ ಸಿಬ್ಬಂದಿಗಳು ಹಾಜರಿದ್ದರು.

More from the blog

ಭಕ್ತರೇ ಗಮನಿಸಿ…. ಈ ದಿನ ಪಣೋಲಿಬೈಲು ಶ್ರೀ ಕಲ್ಲುರ್ಟಿ ದೈವಸ್ಥಾನದಲ್ಲಿ ಆಗೇಲು ಸೇವೆ ಇರುವುದಿಲ್ಲ

ಬಂಟ್ವಾಳ ತಾಲೂಕು ಸಜೀಪಮೂಡ ಪಣೋಲಿಬೈಲು ಶ್ರೀ ಕಲ್ಲುರ್ಟಿ ದೈವಸ್ಥಾನದಲ್ಲಿ ಏ.12, 14, 16 ರಂದು ಆಗೇಲು ಸೇವೆ ಇರುವುದಿಲ್ಲ. ಏ. 19ರಿಂದ ಆಗೇಲು ಸೇವೆ ನಡೆಯುತ್ತದೆ ಹಾಗೂ ಏ.21 ರಂದು ಆಗೇಲು ಸೇವೆ...

ಲೋಕಸಭಾ ಚುನಾವಣೆ : ಅಕ್ರಮ ವ್ಯವಹಾರಿಗಳಿಗೆ ರಹದಾರಿಯಾದ ಸಾಲೆತ್ತೂರು ಬಳಿಯ ಕೂಡುರಸ್ತೆ ಚೆಕ್ ಪೋಸ್ಟ್

ವಿಟ್ಲ: ಲೋಕಸಭಾ ಚುನಾವಣೆಗೆ ಈಗಾಗಲೇ ದಿನ ನಿಗದಿಯಾಗಿದ್ದು, ಜಿಲ್ಲಾಡಳಿತ ಸರ್ವ ಸನ್ನದ್ದವಾಗಿದೆ. ಅಕ್ರಮಗಳನ್ನು ತಡೆಗಟ್ಟುವ ಉದ್ದೇಶದಿಂದ ದಕ್ಷಿಣ ಕನ್ನಡ ಜಿಲ್ಲಾಡಳಿತವು ಗಡಿಪ್ರದೇಶ ಸೇರಿದಂತೆ ಜಿಲ್ಲೆಯಲ್ಲಿ 23 ಕಡೆಗಳಲ್ಲಿ ಚೆಕ್ ಪೋಸ್ಟ್ ಗಳನ್ನು ಸ್ಥಾಪಿಸಿದೆ. ಆದರೆ...

5,8,9,11ನೇ ತರಗತಿ ಪರೀಕ್ಷೆ ಫಲಿತಾಂಶಕ್ಕೆ ಸುಪ್ರೀಂ ತಡೆ

ಹೊಸದಿಲ್ಲಿ: 5, 8, 9 ಮತ್ತು 11 ನೇ ತರಗತಿಗಳ ಬೋರ್ಡ್ ಪರೀಕ್ಷೆಗಳ ಫಲಿತಾಂಶಗಳನ್ನು ಪ್ರಕಟಿಸಲು ಸುಪ್ರೀಂ ಕೋರ್ಟ್ ಸೋಮವಾರ ತಡೆಯಾಜ್ಞೆ ನೀಡಿದೆ. ರಾಜ್ಯದಲ್ಲಿ 5, 8, 9ನೇ ತರಗತಿಗೆ ಬೋರ್ಡ್​ ಪರೀಕ್ಷೆ ಮುಗಿದಿದ್ದು,...

ಮನೆಯೊಳಗೆ ‌ನುಗ್ಗಿ ವ್ಯಕ್ತಿಗೆ ಚೂರಿ ಇರಿತ : ಆರೋಪಿ ಪರಾರಿ

ಬಂಟ್ವಾಳ: ಮನೆಯೊಳಗೆ ‌ನುಗ್ಗಿ ವ್ಯಕ್ತಿಯೋರ್ವನಿಗೆ ಚೂರಿ ಹಾಕಿ ಪರಾರಿಯಾಗಿರುವ ಘಟನೆ ಬಂಟ್ವಾಳ ಗ್ರಾಮಾಂತರ ಪೋಲೀಸ್ ಠಾಣಾ ವ್ಯಾಪ್ತಿಯ ಪುದು ಎಂಬಲ್ಲಿ ನಡೆದಿದೆ. ಪುದು ಗ್ರಾಮದ 10 ನೇ ಮೈಲಿಕಲ್ಲು ನಿವಾಸಿ...