ಬಂಟ್ವಾಳ: ಬಂಟ್ವಾಳ ತಾ.ಪಿಲಾತಬೆಟ್ಟು ಗ್ರಾಮದ ಕುತ್ತಿಲ ಶ್ರೀ ಕೊಡಮಣಿತ್ತಾಯ ಬ್ರಹ್ಮ ಬೈದರ್ಕಳ ಗರಡಿಯಲ್ಲಿ ವರ್ಷಾವಧಿ ನೇಮೋತ್ಸವ ಜ.10ರಿಂದ ಜ.12ರವರೆಗೆ ನಡೆಯಲಿದೆ.
ಜ.10 ರಂದು ಸಂಜೆ ಇರ್ವತ್ತೂರು ಬೀಡು ಹಾಗೂ ಕುತ್ತಿಲ ಮನೆಯಿಂದ ಭಂಡಾರ ಆಗಮನ, ಕಲಶ ಪ್ರಧಾನ ಹೋಮ, ಧ್ವಜಾರೋಹಣ, ದೇವರ ಬಲಿ ಉತ್ಸವ, ದೈವಂಕುಲು ಮತ್ತು ಮೈಸಂದಾಯ ದೈವದ ನೇಮೋತ್ಸವ ನಡೆಯಲಿದೆ.
ಜ.11ರಂದು ಸಂಜೆ ಅಂಕ ಅಂಬೋಡಿ, ಚೆಂಡು, ಶ್ರೀ ಕೊಡಮಣಿತ್ತಾಯ ಮತ್ತು ಶ್ರೀ ಪಿಲಿಚಾಮುಂಡಿ ನೇಮೋತ್ಸವ, ಸಂಕ್ರಾಂತಿ, ಜ.12ರಂದು ಬೈದರ್ಕಳ ಜಾತ್ರೆ, ಮಾಯಂದಾಳ್ ದೇವಿ ನೇಮೋತ್ಸವ, ಜ.13ರಂದು ಧ್ವಜಾವರೋಹಣ ನಡೆಯಲಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.