Wednesday, April 10, 2024

12 ನೇ ದಿನದ ಪಾದಯಾತ್ರೆ ಮಂಗ್ಲಿಮಾರ್ ಶ್ರೀ ಅಣ್ಣಪ್ಪ ಪಂಜುರ್ಲಿ ದೈವಸ್ಥಾನದಿಂದ ಪ್ರಾರಂಭ

ಜ.14 ರಂದು ಮಕರಸಂಕ್ರಾಂತಿಯಂದು ಪೊಳಲಿ ಶ್ರೀ ರಾಜರಾಜೇಶ್ವರಿ ದೇವಿ ಸನ್ನಿಧಿಯಿಂದ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿಗುತ್ತು ಅವರ ನೇತ್ರತ್ವದ ಬಂಟ್ವಾಳ ಬಿಜೆಪಿ ವತಿಯಿಂದ ಆರಂಭಗೊಂಡ “ಗ್ರಾಮ ವಿಕಾಸ ಯಾತ್ರೆ” “ಗ್ರಾಮದೆಡೆಗೆ ಶಾಸಕರ ನಡಿಗೆ” ವಿನೂತನ ಪಾದಯಾತ್ರೆಯ 12 ನೇ ದಿನವಾದ ಇಂದು.ಜ.25 ರಂದು ಬೆಳಿಗ್ಗೆ ಅಮ್ಟಾಡಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಮಂಗ್ಲಿಮಾರ್ ಶ್ರೀ ಅಣ್ಣಪ್ಪ ಪಂಜುರ್ಲಿ ದೇವಸ್ಥಾನದಿಂದ ಹೊರಟಿತು.

ಜ.24 ರಂದು 11 ನೇ ದಿನದ ಪಾದಯಾತ್ರೆ ಬೆಳಿಗ್ಗೆ ಕರ್ಪೆ ಕುಪ್ಪೆಟ್ಟಿ ಬರ್ಕೆ ಕುಪ್ಪೆಟ್ಟಿ ಪಂಜುರ್ಲಿ ಮೂಲಸ್ಥಾನದಿಂದ ಹೊರಟ ಪಾದಯಾತ್ರೆ ಸಂಜೆ ಅಮ್ಟಾಡಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಕುರಿಯಾಳದಲ್ಲಿ ಸಭಾ ಕಾರ್ಯಕ್ರಮದ ಮೂಲಕ ಸಮಾಪನಗೊಂಡಿತು.

ಶಾಸಕ ರಾಜೇಶ್ ನಾಯ್ಕ್ ಅವರು ಬಿಜೆಪಿ ಕಾರ್ಯಕರ್ತ ನಿವೃತ್ತ ಸೈನಿಕ ಅನಂದ ಡಿ.ಅವರ ಮನೆಯಲ್ಲಿ ವಾಸ್ತವ್ಯ ಹೂಡಿದ್ದರು.
ಇಂದು‌ ಬೆಳಿಗ್ಗೆ ನೂರಾರು ಕಾರ್ಯಕರ್ತರ ಜೊತೆಗೆ ಅಮ್ಟಾಡಿ ಮಂಗ್ಲಿಮಾರ್ ಅಣ್ಣಪ್ಪ ಪಂಜುರ್ಲಿ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿ, ವಂದೆ ಮಾತರಂ ಗೀತೆ ಹಾಡಿದ ಬಳಿಕ ಭೂಮಿಗೆ ನಮಿಸಿ ಕಾರ್ಯಕರ್ತರ ಜೊತೆ ಶಾಸಕರು ಹೆಜ್ಜೆ ಹಾಕಿದರು.

ಪಾದಯಾತ್ರೆ ಸಂಚಾಲಕ ದೇವದಾಸ್ ಶೆಟ್ಟಿ, ಮಾದವ ಮಾವೆ, ಸಹಸಂಚಾಲಕ ಸುದರ್ಶನ್ ಬಜ, ರಾಜ್ಯ ನೀರು ಸರಬರಾಜು ಹಾಗೂ ಒಳಚರಂಡಿ ನಿಗಮದ ನಿರ್ದೇಶಕಿ ಸುಲೋಚನ ಜಿ.ಕೆ.ಭಟ್, ಕಿಯೋನಿಕ್ಸ್ ಅಧ್ಯಕ್ಷ ಹರಿಕೃಷ್ಣ ಬಂಟ್ವಾಳ್, ಗ್ರಾ.ಪಂ.ಅಧ್ಯಕ್ಷೆ ಮೋಹಿನಿ , ಉಪಾಧ್ಯಕ್ಷ ಸುನಿಲ್, ಗ್ರಾ.ಪಂ.ಸದಸ್ಯರಾದ ವಿಶ್ವನಾಥ್,ವಿಜಯ್ ಕುಮಾರ್, ಹರೀಶ್ ಶೆಟ್ಟಿ ಪಡು, ರೂಪೇಶ್ ಪೂಜಾರಿ, ಯಶೋಧ ಮೇಗಿನಕುರಿಯಾಳ, ಪ್ರಮುಖರಾದ ಚೆನ್ನಪ್ಪ ಆರ್.ಕೋಟ್ಯಾನ್, ಕಮಲಾಕ್ಷಿ ಪೂಜಾರಿ, ದಿನೇಶ್ ಅಮ್ಟೂರು, ನಳಿನಿ ಶೆಟ್ಟಿ, ಅರುಣ್ ರೋಷನ್ ಡಿ.ಸೋಜ, ಕೃಷ್ಣಪ್ಪ ಪೂಜಾರಿ ಕಲ್ಲಡ್ಕ, ಪ್ರಸಾದ್ ಕುಮಾರ್ ರೈ, ಆಶಾ ಪಿ.ರೈ, ಸುರೇಶ್ ಕೋಟ್ಯಾನ್, ರೋನಾಲ್ಡ್ ಡಿ.ಸೋಜ, ಭಾರತಿ ಚೌಟ, ಸುಪ್ರೀತ್ ಆಳ್ವ, ಕಾರ್ತಿಕ್ ಬಲ್ಲಾಳ್, ಸಂತೋಷ್ ರಾಯಿಬೆಟ್ಟು, ಪದ್ಮನಾಭ ಬಂಟ್ವಾಳ, ಧನಂಜಯ ಶೆಟ್ಟಿ, ಚರಣ್ ಜುಮಾದಿಗುಡ್ಡೆ, ಪ್ರಕಾಶ್ ಬೆಂಗಳೂರು, ಕುಮಾರ್ ಅಳ್ವ, ಅನಿಲ್ ಕೊಟ್ಟಾರ,ರಾಮಚಂದ್ರ ಸುವರ್ಣ ಆಲಾಡಿ,ಉದಯ ಪ್ರಭು, ರಾಮ್ ಮೋಹನ್ ಶೆಟ್ಟಿ, ದಿನೇಶ್ , ಪ್ರಶಾಂತ್ ಕೆಂಪುಗುಡ್ಡೆ, ಚಂದ್ರಕಲಾಯಿ, ಲೋಕೇಶ್ , ಕುಮಾರ್ ಭಟ್ ,ಭಾಸ್ಕರ್ ಟೈಲರ್ , ಸೀತಾರಾಮ ಪೂಜಾರಿ, ಶೇಖರ್ ಶೆಟ್ಟಿ,ಲೋಕೇಶ್ ಸುವರ್ಣ, ವಾಮನ ಆಚಾರ್ಯ, ಸದಾನಂದ ಶೆಟ್ಟಿ ರಂಗೋಲಿ, ಭುವನೇಶ್ ಪಚ್ಚಿನಡ್ಕ, ರತ್ನಾಕರ್ ಶೆಟ್ಟಿ ,ಲಖಿತಾ ಆರ್‌ಶೆಟ್ಟಿ, ಸುಷ್ಮಾಚರಣ್, ದೇವಿಪ್ರಸಾದ್, ಮನೋಜ್ ಕಳ್ಳಿಗೆ, ವೆಂಕಟೇಶ ನಾವಡ, ಗಣೇಶ್ ಪೂಜಾರಿ, ದಾಮೋದರ ನೆತ್ತರಕೆರೆ, ಕಿಶೋರ್ ಪಲ್ಲಿಪಾಡಿ, ಗಣೇಶ್ ರೈ ಮಾಣಿ, ರಾಧಾಕೃಷ್ಣ ತಂತ್ರಿ ಮತ್ತಿತರರು ಪಾದಯಾತ್ರೆಯಲ್ಲಿ ಪಾಲ್ಗೊಂಡರು

More from the blog

ಹಿತೈಷಿ ತರಬೇತಿ ಕೇಂದ್ರದ ಎಲ್ಲಾ ವಿದ್ಯಾರ್ಥಿಗಳು ಉತ್ತಮ ಫಲಿತಾಂಶದೊಂದಿಗೆ ತೇರ್ಗಡೆ

2023-24ನೇ ಸಾಲಿನ ದ್ವಿತೀಯ ಪಿ.ಯು.ಸಿ ಪರೀಕ್ಷೆಯಲ್ಲಿ ಪಾಣೆಮಂಗಳೂರು, ನರಿಕೊಂಬುವಿನಲ್ಲಿರುವ ಹಿತೈಷಿ ತರಬೇತಿ ಕೇಂದ್ರದ ಎಲ್ಲಾ ವಿದ್ಯಾರ್ಥಿಗಳು ಉತ್ತಮ ಅಂಕಗಳೊಂದಿಗೆ ತೇರ್ಗಡೆಯಾಗಿದ್ದಾರೆ. ಕು.ಕೀರ್ತನ ಶೇ.95.6% ಅಂಕಗಳೊಂದಿಗೆ ಅತ್ಯುತ್ತಮ ಶ್ರೇಣಿಯಲ್ಲಿ ತೇರ್ಗಡೆಯಾಗಿರುತ್ತಾರೆ ಎಂದು ಸಂಸ್ಥೆಯ ಪ್ರಕಟನೆಯಲ್ಲಿ ತಿಳಿಸಲಾಗಿದೆ. 2024-25ನೇ...

ಬಂಟ್ವಾಳದ ಉಳಿ ಗ್ರಾಮದಲ್ಲಿ ಮತದಾರರ ಮನೆಗೆ ಭೇಟಿ ನೀಡಿ ಮತಯಾಚನೆ ನಡೆಸಿದ ಶಾಸಕ ರಾಜೇಶ್ ನಾಯ್ಕ್

ಲೋಕ ಸಭಾ ಚುನಾವಣೆಯ ಹಿನ್ನಲೆಯಲ್ಲಿ ಕ್ಯಾ.ಬ್ರಿಜೇಶ್ ಚೌಟ ಅವರ ಗೆಲುವಿಗಾಗಿ ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿಗುತ್ತು ಅವರ ಗ್ರಾಮ,ಮನೆ,ಮನ ಅಭಿಯಾನದ ಅಂಗವಾಗಿ ಬಂಟ್ವಾಳದ ಉಳಿ ಗ್ರಾಮದಲ್ಲಿ ಮತದಾರರ ಮನೆಗೆ ಬೇಟಿ ನೀಡಿ...

ವಿಟ್ಲ ಕೇಂದ್ರ ಜುಮಾ ಮಸೀದಿ, ಈದುಲ್ ಫಿತರ್

ವಿಟ್ಲ; ವಿಟ್ಲ ಕೇಂದ್ರ ಜುಮಾ ಮಸೀದಿಯಲ್ಲಿ ಈದುಲ್ ಫಿತರ್ ನ್ನು ವಿಜೃಂಭಣೆಯಿಂದ ಆಚರಿಸಲಾಯಿತು. ಖತೀಬ್ ಮಹಮ್ಮದ್ ನಸೀಹ್ ದಾರಿಮಿ ಉಸ್ತಾದ್ ರವರು ಖುತುಬಾ ಹಾಗೂ ಈದ್ ನಮಾಝ್ ನಿರ್ವಹಿಸಿದರು. ಈದ್ ಸಂಸೇಶ ನೀಡಿದ ಖತೀಬರು "...

ನೋಟ ಮತದಾನ ಅಭಿಯಾನ ಮಾಡುವವರ ವಿರುದ್ಧ ಕಾನೂನು ಕ್ರಮಕ್ಕೆ ತಾ.ಪಂ.ಸದಸ್ಯ ಪ್ರಭಾಕರ್ ಪ್ರಭು ಒತ್ತಾಯ…

ನೋಟ (NOTA) ಮತದಾನ ಅಭಿಯಾನ ಮಾಡುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ಮಾಜಿ ತಾ.ಪಂ‌.ಸದಸ್ಯ ಪ್ರಭಾಕರ್ ಪ್ರಭು ಜಿಲ್ಲಾಧಿಕಾರಿಗೆ ಮನವಿ ಮಾಡಿದ್ದಾರೆ ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಕೆಲವೊಂದು ವ್ಯಕ್ತಿಗಳು ಮತ್ತು ಸಂಘಟನೆಗಳು...