ಸುರಕ್ಷಾ ಸಂಗಮ ಪೂರ್ಲಿಪ್ಪಾಡಿ ಕಲ್ಲಡ್ಕ ಇದರ ಪ್ರಾಯೋಜಕತ್ವದಲ್ಲಿ ಬ್ಯಾಂಕ್ ಆಫ್ ಬರೋಡಾ, ಕಲ್ಲಡ್ಕ ಶಾಖೆ ಮತ್ತು ಝಾನ್ಸಿರಾಣಿ ಲಕ್ಷೀಬಾಯಿ ಮಹಿಳಾ ಮಂಡಳಿ (ರಿ.) ಕಲ್ಲಡ್ಕ ಹಾಗೂ ಕಸ್ತೂರ್ಬಾ ಮೆಡಿಕಲ್ ಕಾಲೇಜು, ಮಂಗಳೂರು ಇದರ ಸಹಯೋಗದೊಂದಿಗೆ ಜನವರಿ 22 ರಂದು ಬೆಳಿಗ್ಗೆ 09:30ರಿಂದ ಮಧ್ಯಾಹ್ನ 02:00 ಗಂಟೆಯವರೆಗೆ ಕಲ್ಲಡ್ಕದ ಪಂಚವಟಿ ವಾಣಿಜ್ಯ ಸಂಕೀರ್ಣದ ಪದ್ಮಾವತಿ ಕಲ್ಯಾಣ ಮಂಟಪದಲ್ಲಿ ರಕ್ತದಾನ ಶಿಬಿರ ನಡೆಯಲಿದೆ.
“ನನ್ನ ಜೀವವನ್ನುಳಿಸಲು ರಕ್ತದಾನ ಮಾಡಿದ ರಕ್ತದಾನಿ ನೀವಾಗಿರಬಹುದೇ?” ಎನ್ನುವ ಧ್ಯೇಯವಾಕ್ಯದೊಂದಿಗೆ, ಪ್ರತಿವರ್ಷದಂತೆ ನಾಡಿನಾದ್ಯಂತ ಹಲವಾರು ಇನ್ನಿತರ ವಿಶೇಷ ಕಾರ್ಯಕ್ರಮಗಳನ್ನು ಯಶಸ್ವಿಯಾಗಿ ನಡೆಸಿ ಸದರಿ ಈ ವರ್ಷವೂ ರಕ್ತದಾನ ಶಿಬಿರ ಎನ್ನುವ ಮಹತ್ತರ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ. ಈ ಸೇವಾಕಾರ್ಯದಲ್ಲಿ ಕೈಜೋಡಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳೊಸಬೇಕಾಗಿ ಸುಕ್ಷಾ ಸಂಗಮ (ರಿ.) ಪೂರ್ಲಿಪ್ಪಾಡಿ ಕಲ್ಲಡ್ಕ ಇವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.