ಬಂಟ್ವಾಳದ ಲಯನ್ಸ್ ಕ್ಲಬ್ ವತಿಯಿಂದ ಬಿ.ಸಿ.ರೋಡ್ ನಲ್ಲಿ ನೂತನವಾಗಿ ನಿರ್ಮಾಣಗೊಂಡ ಪ್ರಯಾಣಿಕರ ತಂಗುದಾಣ ಉದ್ಘಾಟನೆಗೊಂಡಿತು.
ಬಿ.ಸಿ.ರೋಡ್ ನಲ್ಲಿ ಪ್ರಯಾಣಿಕರಿಗೆ ಅನುಕೂಲವಾಗುವಂತೆ ತಂಗುದಾಣವನ್ನು ಬಂಟ್ವಾಳದ ಲಯನ್ಸ್ ಕ್ಲಬ್ ವತಿಯಿಂದ ನಿರ್ಮಿಸಲಾಗಿದ್ದು, ನೂತನ ತಂಗುದಾಣವನ್ನು ಲಯನ್ಸ್ ಜಿಲ್ಲೆ ೩೧೭ ಡಿ ಗವರ್ನರ್ ಎಸ್. ಸಂಜಿತ್ ಶೆಟ್ಟಿ ಅವರು ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು, ಲಯನ್ಸ್ ಕ್ಲಬ್ ತನ್ನ ಸಮಾಜಸೇವಾ ಚಟುವಟಿಕೆಗಳ ಮೂಲಕ ಜನರ ಅಗತ್ಯಗಳನ್ನು ಪೂರೈಸುವ ಕೆಲಸ ಮಾಡುತ್ತಿದ್ದು, ಬಿ.ಸಿ.ರೋಡ್ ನಲ್ಲಿ ಬಸ್ ಗೆ ಕಾಯುವ ಜನರ ಬವಣೆಯನ್ನು ಗಮನಿಸಿ ತಂಗುದಾಣವನ್ನು ನಿರ್ಮಿಸಿದ್ದು ಶ್ಲಾಘನೀಯ ಎಂದರು.
ಈ ಸಂದರ್ಭ ಗವರ್ನರ್ ಅವರ ಪತ್ನಿ ಪ್ರಗತಿ ಶೆಟ್ಟಿ, ಲಯನ್ಸ್ ಮಲ್ಟಿಪಲ್ ಕೌನ್ಸಿಲ್ ಚೇರ್ ಪರ್ಸನ್ ವಸಂತ್ ಕುಮಾರ್ ಶೆಟ್ಟಿ, ಜಿಲ್ಲಾ ಸಂಯೋಜಕ ಶ್ರೀನಿವಾಸ ಪೂಜಾರಿ ಮೇಲ್ಕಾರ್, ಜಿಲ್ಲಾ ಕ್ಯಾಬಿನೆಟ್ ಸದಸ್ಯ ಧೀರಜ್ ಹೆಬ್ರಿ, ಪ್ರಾಂತ್ಯಾಧ್ಯಕ್ಷ ಲಕ್ಷ್ಮಣ್ ಕುಲಾಲ್ ಅಗ್ರಬೈಲ್, ವಲಯಾಧ್ಯಕ್ಷ ರಮಾನಂದ ನೂಜಿಪ್ಪಾಡಿ, ಜಿಲ್ಲಾ ಸಂಪುಟ ಸದಸ್ಯ ಜಗದೀಶ ಯಡಪಡಿತ್ತಾಯ, ಬಂಟ್ವಾಳ ಲಯನ್ಸ್ ಕ್ಲಬ್ ಅಧ್ಯಕ್ಷ ಉಮೇಶ್ ಆಚಾರ್, ಕಾರ್ಯದರ್ಶಿ ಬಿ.ಶಿವಾನಂದ ಬಾಳಿಗಾ, ಕೋಶಾಧಿಕಾರಿ ಜಗದೀಶ್ ಬಿ.ಎಸ್, ಸೇವಾ ಟ್ರಸ್ಟ್ ಕೋಶಾಧಿಕಾರಿ ಸುನೀಲ್ ಬಿ, ಲಯನ್ಸ್ ಮಾಜಿ ವಲಯಾಧ್ಯಕ್ಷ ಕೃಷ್ಣಶ್ಯಾಮ್, ಪೂರ್ವಾಧ್ಯಕ್ಷ ಡಾ. ವಸಂತ ಬಾಳಿಗಾ, ಸುಧಾಕರ ಆಚಾರ್ಯ, ಜಯಂತ್ ಶೆಟ್ಟಿ, ಮಧ್ವರಾಜ್ ಕಲ್ಮಾಡಿ, ಪ್ರಮುಖರಾದ ತಪೋಧನ ಶೆಟ್ಟಿ, ವಾಲ್ಟರ್ ನೊರೊನ್ಹ, ಮಾಧವ ಮಾರ್ಲ, ಜಯಚಂದ್ರ ಆಚಾರ್ಯ ಸರಪಾಡಿ ಮತ್ತಿತರರು ಉಪಸ್ಥಿತರಿದ್ದರು.