ಬಂಟ್ವಾಳ: ಎಂ.ಡಿ.ಎಂ.ಎ ಎಂಬ ಮಾದಕವಸ್ತುಗಳನ್ನು ರಿಕ್ಷಾದಲ್ಲಿ ಅಕ್ರಮವಾಗಿ ಮಾರಾಟ ಮಾಡಲು ಸಂಚಾರ ಮಾಡುತ್ತಿದ್ದ ಕಾರ್ಯಚರಣೆ ನಡೆಸಿದ ಬಂಟ್ವಾಳ ನಗರ ಪೋಲೀಸ್ ಠಾಣಾ ಎಸ್‌ಐ.ಅವಿನಾಶ್ ನೇತೃತ್ವದ ತಂಡ ಆರೋಪಿಗಳಿಬ್ಬರನ್ನು ಬಂಧಿಸಿ ಅಮಲು ಪದಾರ್ಥಗಳ ಸಹಿತ ರಿಕ್ಷಾವನ್ನು ವಶಕ್ಕೆ ಪಡೆದುಕೊಂಡ ಘಟನೆ ಬಿಸಿರೋಡನಲ್ಲಿ ಡಿ.22 ರಂದು ಗುರುವಾರ ಸಂಜೆ ವೇಳೆ ನಡೆದಿದೆ.
ರಿಕ್ಷಾ ಚಾಲಕ ಬಂಟ್ವಾಳ ಬಾರೆಕಾಡು ನಿವಾಸಿ ಇರ್ಷಾದ್ ಹಾಗೂ ಹಿಂಬದಿಯಲ್ಲಿದ್ದ ಮಂಜೇಶ್ವರ ನಿವಾಸಿ ದಿಕ್ಷಿತ್ ಬಂಧಿತ ಆರೋಪಿಗಳು.
ಬಂಧಿತರಿಂದ ರೂ.20 ಸಾವಿರ ಮೌಲ್ಯದ 9 ಗ್ರಾಂ MDMA ಹಾಗೂ ಮಾರಾಟ ಮಾಡಲು ಹೋಗುವ ರೂ.75 ಸಾವಿರ ಮೌಲ್ಯದ ರಿಕ್ಷಾವನ್ನು ಪೋಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.
ಎಸ್.ಐ.ಅವಿನಾಶ್ ಅವರು ಸಂಜೆ ರೌಂಡ್ಸ್ ನಲ್ಲಿ ವಾಹನಗಳ ತಪಾಸಣೆ ಮಾಡುತ್ತಿದ್ದ ಸಂದರ್ಭದಲ್ಲಿ ಬಿಸಿರೋಡಿನಿಂದ ಗೂಡಿನಬಳಿ ಕಡೆಗೆ ಹೋಗುತ್ತಿದ್ದ ರಿಕ್ಷಾವೊಂದನ್ನು ರೈಲ್ವೆ ನಿಲ್ದಾಣ ದ ಎದುರುಗಡೆ ಗಣೇಶ್ ಬೀಡಿ ದಾಸ್ತನು ಮಳಿಗೆ ಮುಂಭಾಗದಲ್ಲಿ ತಡೆದು ನಿಲ್ಲಿಸಿ ವಿಚಾರಣೆ ನಡೆಸಿ ದಾಖಲೆ ಪತ್ರಗಳನ್ನು ಕೇಳಿದಾಗ ನೀಡದೆ ತೊದಲುತ್ತಿದ್ದು , ಸಂಶಯದಿಂದ ಹೆಚ್ಚಿನ ವಿಚಾರಣೆ ನಡೆಸಿದಾಗ ಅವರು ನಿದ್ರಾಜನಕ ಮಾತ್ರೆಗಳನ್ನು ಸೇವಿಸಿದ ಬಗ್ಗೆ ಹಾಗೂ ಅಕ್ರಮವಾಗಿ ಮಾರಾಟ ಮಾಡುವ ಉದ್ದೇಶದಿಂದ ಅಮಲು ಪದಾರ್ಥಗಳನ್ನು ಇಟ್ಟುಕೊಂಡಿರುವ ವಿಚಾರ ಬೆಳಕಿಗೆ ಬಂದಿದೆ.