ಮಂಗಳೂರು: ಲವ್ ಜೆಹಾದ್‌ನಿಂದ ಸಂತ್ರಸ್ತರಾದವರಿಗಾಗಿ ವಿಶ್ವ ಹಿಂದೂ ಪರಿಷತ್ ವತಿಯಿಂದ ಸಹಾಯವಾಣಿ ಆರಂಭಿಸಲಾಗಿದೆ.
ದ.ಕ. ಜಿಲ್ಲೆಯಲ್ಲಿ ಸಾಕಷ್ಟು ಯುವತಿಯರು ಪ್ರೀತಿ ಪ್ರೇಮದ ಹೆಸರಿನಲ್ಲಿ ಲವ್ ಜೆಹಾದ್‌ಗೆ ಬಲಿಯಾಗುತ್ತಿದ್ದಾರೆ. ಬ್ಲ್ಯಾಕ್‌ಮೇಲ್‌ಗೆ ಒಳಗಾಗಿ ಜೀವನವನ್ನು ಕಳೆದುಕೊಂಡಿದ್ದಾರೆ. ಅಂಥವರ ರಕ್ಷಣೆಗಾಗಿ ಸಹಾಯವಾಣಿ ಆರಂಭಿಸಲಾಗಿದೆ. 9148658108ಗೆ ಕರೆ ಮಾಡಬಹುದು ಅಥವಾ 9591658108ಗೆ ವಾಟ್ಸ್‌ಆ್ಯಪ್ ಮಾಡಬಹುದು ಅಥವಾ ಸಂಸ್ಕೃತಿ ಸೇವಾ ಪ್ರತಿಷ್ಠಾನ, ಹಿಂದೂ ರುದ್ರಭೂಮಿ ರಸ್ತೆ, ಕದ್ರಿ ದೇವಸ್ಥಾನ ಹತ್ತಿರ, ಕದ್ರಿ ಮಂಗಳೂರು, ಇ-ಮೇಲ್ [email protected] ಸಂಪರ್ಕಿಸಬಹುದು ಎಂದು ತಿಳಿಸಿದ್ದಾರೆ.
ಲವ್ ಜೆಹಾದ್ ಪ್ರಕರಣ ಕಂಡುಬಂದರೆ ಅಥವಾ ಲವ್ ಜೆಹಾದ್‌ಗೆ ಸಂಬಂಧಿಸಿ ಯಾವುದೇ ಸಲಹೆ, ದೂರುಗಳನ್ನು ಕೂಡ ತಿಳಿಸಬಹುದು. ಅಗತ್ಯವಿದ್ದರೆ ಕಾನೂನು ಸಲಹೆ ನೀಡಲಾಗುವುದು. ಇನ್ನು ಮಾಹಿತಿ ನೀಡಿದವರ ವಿವರಗಳನ್ನು ಗೌಪ್ಯವಾಗಿಡಲಾಗುವುದು ಎಂದು ವಿಶ್ವ ಹಿಂದೂ ಪರಿಷತ್ ಪ್ರಕಟನೆ ತಿಳಿಸಿದೆ.