ಕ್ರಿಸ್ಮಸ್ ಸೌಹಾರ್ದ ಸಂಭ್ರಮ ಸಮಿತಿ ಬಂಟ್ವಾಳ ಇವರ ಆಶ್ರಯದಲ್ಲಿ ಬಂಟ್ವಾಳ ಮತ್ತು ಪಾಣೆ ಮಂಗಳೂರು ಮಹಿಳಾ ಕಾಂಗ್ರೆಸ್ ಇವರ ಸಹಕಾರದೊಂದಿಗೆ ಕ್ರಿಸ್ಮಸ್ ಸೌಹಾರ್ದ ಸಂಭ್ರಮ ಮೊಡಂಕಾಪು ಚರ್ಚ್ ಮೈದಾನ ದಲ್ಲಿ ನಡೆಯಲಿದ್ದು, ಇದರ ಪೂರ್ವಭಾವಿಯಾಗಿ ಬಿಸಿರೋಡಿನ ಸರ್ಕಲ್ ನಿಂದ ಬೃಹತ್ ಬೈಕ್ ರ್ಯಾಲಿ ಹಾಗೂ ವಿವಿಧ ಸ್ತಬ್ಧ ಚಿತ್ರ ಗಳ ಮೆರವಣಿಗೆಗೆ ಮಾಜಿ ಸಚಿವ ಬಿ.ರಮಾನಾಥ ರೈ ಅವರು ಪಾರಿವಾಳ ಗಳನ್ನು ಹಾರಲು ಬಿಡುವ ಮೂಲಕ ಚಾಲನೆ ನೀಡಿದರು.
ಈ ಸಂದರ್ಭದಲ್ಲಿ ಪ್ರಮುಖರಾದ ಬೇಬಿ ಕುಂದರ್, ಸುದೀಪ್ ಶೆಟ್ಟಿ, ಪ್ರಕಾಶ್ ಶೆಟ್ಟಿ ತುಂಬೆ, ಜಯಂತಿ ಪೂಜಾರಿ, ಅಬ್ಬಾಸ್ ಆಲಿ ಮತ್ತಿತರರು ಉಪಸ್ಥಿತರಿದ್ದರು.