ವಿಟ್ಲ: ಇತ್ತೀಚೆಗೆ ಓಜಾಲ ಶಾಲೆಯಲ್ಲಿ ನಡೆದ ಮಕ್ಕಳ ಕನ್ನಡ ಸಾಹಿತ್ಯ ಸಮ್ಮೇಳನದಂದು ನಿರ್ಮಾಣಗೊಂಡ ಮಕ್ಕಳ ಉದ್ಯಾನ ವನವನ್ನು ಜಿಲ್ಲಾ ಗವರ್ನರ್ ರೋಟಾರಿಯೋ ಪ್ರಕಾಶ್ ಕಾರಂತ್ ಉದ್ಘಾಟಿಸಿದರು.
ಇವರ ಜೊತೆಗೆ ರೋಟರಿ ಕ್ಲಬ್ ಪುತ್ತೂರು ಸಿಟಿಯ ಅಧ್ಯಕ್ಷರಾದ ರೋಟಾರಿಯೋ ಪ್ರಶಾಂತ ಶೆಣೈ , ಮಾಜಿ ಜಿಲ್ಲಾ ಗವರ್ನರ್ ರೋಟಾರಿಯೋ ಎಂ ರಂಗನಾಥ್ ಭಟ್, ಕಾರ್ಯದರ್ಶಿ ರೋಟಾರಿಯೋ ಜಯ ಗುರು ಆಚಾರ್ಯ ಮತ್ತು ರೋಟರಿ ಕ್ಲಬ್ ಪುತ್ತೂರು ಸಿಟಿ ಇದರ ಸರ್ವ ಸದಸ್ಯರು ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ಇಡ್ಕಿದು ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ಸುಧೀರ್ ಕುಮಾರ್ ಶೆಟ್ಟಿ ಹಾಗೂ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಗೋಕುಲ ದಾಸ್ ಭಕ್ತ ಮತ್ತು ಸದಸ್ಯರು, ಶಾಲಾ ಎಸ್ ಡಿ ಎಂ ಸಿ ಅಧ್ಯಕ್ಷರಾದ ಚಿದಾನಂದ ಪಿ ಮತ್ತು ಸರ್ವ ಸದಸ್ಯರು, ಊರವರು, ವಿದ್ಯಾಭಿಮಾನಿಗಳು ಉಪಸ್ಥಿತರಿದ್ದರು.
ಅಧ್ಯಾಪಕ ವೃಂದ ಕೊಡುಗೆ ನೀಡಿದ ರೋಟರಿ ಪುತ್ತೂರು ಸಿಟಿ ಇದರ ಬಗ್ಗೆ ಮೆಚ್ಚುಗೆಯ ಮಾತುಗಳನ್ನು ವ್ಯಕ್ತಪಡಿಸಿದರು.
ಸಹ ಶಿಕ್ಷಕಿ ವಿಲ್ಮಾ ಸಿಕ್ವೇರಾ ಸ್ವಾಗತಿಸಿದರು. ಮುಖ್ಯ ಶಿಕ್ಷಕ ಸಂಜೀವ ಮಿತ್ತಳಿಕೆ ವಂದಿಸಿದರು.