Tuesday, April 9, 2024

ತುಳುನಾಡಿನಲ್ಲಿ ಕರಾಳ ದಿನಾಚರಣೆ

ತುಳುನಾಡಿನಲ್ಲಿ ‘ಕರಾಳ ದಿನಾಚರಣೆ’ ಆಚರಿಸಲು ಕನ್ನಡ ರಾಜ್ಯೋತ್ಸವದಂದು ಕರೆಕೊಟ್ಟಿದ್ದಾರೆ. #ಬ್ಲ್ಯಾಕ್ ಡೇ ಫೋರ್ ತುಳುನಾಡು ಎಂಬ ಹ್ಯಾಷ್ ಟ್ಯಾಗ್ ಸದ್ಯ ಟ್ವಿಟ್ಟರ್ ನಲ್ಲಿ ಟ್ರೆಂಡಿಂಗ್ ಆಗಿದೆ.

ಬ್ಲ್ಯಾಕ್ ಡೇ ಫೋರ್ ತುಳುನಾಡು ಎಂಬ ಹ್ಯಾಷ್ ಟ್ಯಾಗ್ ಬಹಳಷ್ಟು ಜನ ಟ್ವೀಟ್ ಮಾಡುತ್ತಿದ್ದು, ಕರ್ನಾಟಕದಲ್ಲಿ ತುಳುಭಾಷೆಯನ್ನು ಸರ್ಕಾರ ಅಧಿಕೃತ ಮಾಡಬೇಕೆಂದು ಒತ್ತಾಯಿಸುತ್ತಿದ್ದಾರೆ. ನ.1 ರಂದು ತುಳುನಾಡು 2 ಭಾಗವಾಗಿ ಕೇರಳ ಮತ್ತು ಕರ್ನಾಟಕದ ನಡುವೆ ಹಂಚಿಹೋಗಿತ್ತು. ಹೀಗಾಗಿ ಕರಾಳ ದಿನ ಆಚರಿಸುತ್ತಿದ್ದಾರೆ.

“ಅಖಂಡ ತುಳುನಾಡನ್ನು ಎರಡು ಭಾಗಗಳಾಗಿ ಬೇರ್ಪಡಿಸಿ ಒಂದು ಭಾಗ ಕೇರಳಕ್ಕೆ ಇನ್ನೊಂದು ಭಾಗ ಕರ್ನಾಟಕ ಕ್ಕೆ ಹಂಚಿ ತುಳುವರ 1956 ನ. 1ರಂದು ತುಳುನಾಡನ್ನು ತುಂಡರಿಸಿ ತುಳುವರ ಸ್ವತಂತ್ರ್ಯವನ್ನು ಕಸಿದುಕೊಂಡ ದಿನ. ತುಳುವರಿಗೆ ಮಾತೃಭಾಷೆಯಲ್ಲಿ ಶಿಕ್ಷಣ ಕೊಡದೆ ತುಳುವರಿಗೆ ದ್ರೋಹ ಬಗೆದ ದಿನ” ಎಂದು ಟ್ವಿಟರ್ ಬಳಕೆದಾರರೊಬ್ಬರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಮತ್ತೊಬ್ಬ ಬಳಕೆದಾರರು “ಕರ್ನಾಟಕ ರಾಜ್ಯ ಸರಕಾರ ತುಳು ಭಾಷೆಯನ್ನು ಕರ್ನಾಟಕದಲ್ಲಿ ಅಧಿಕೃತ ಮಾಡದೇ ಇದ್ದರೆ ತುಳುವರು ಕರ್ನಾಟಕದಿಂದ ಪ್ರತ್ಯೇಕತೆ ಬಯಸುವುದರಲ್ಲಿ ಯಾವುದೇ ತಪ್ಪು ಇಲ್ಲ” ಎಂದು ಬರೆದುಕೊಂಡಿದ್ದಾರೆ.

More from the blog

ಪ್ರಕೃತಿಯಲ್ಲಿ ಒಂದಿಲ್ಲೊಂದು ವಿಸ್ಮಯ : ಈ ರೀತಿಯ ಕಿತ್ತಾಳೆ ಹಣ್ಣು ನೋಡಿದ್ದೀರಾ…

ಬಂಟ್ವಾಳ: ಪಕೃತಿಯಲ್ಲಿ ಆಗೊಮ್ಮೆ ಈಗೊಮ್ಮೆ ವಿಚಿತ್ರ ಸಂಗತಿಗಳು ಕಾಣಸಿಗುತ್ತವೆ. ಹಾಗೇಯೆ ಇಲ್ಲೊಂದು ಕಿತ್ತಾಳೆ ಹಣ್ಣು ತನ್ನ ರೂಪದಲ್ಲಿ ಸ್ವಲ್ಪ ಮಟ್ಟಿಗೆ ವಿಚಿತ್ರ ಕಂಡಿದೆ. ಮಾಮೂಲಿಯಾಗಿ ಕಿತ್ತಾಳೆ ಬಣ್ಣ ಮತ್ತು ಆಕಾರದಲ್ಲಿ ಒಂದೇ ಆಗಿರುತ್ತದೆ. ಆದರೆ...

ಅಕ್ರಮ ಮರಳು ಸಾಗಾಟ: ವಾಹನ ಸಹಿತ ಆರೋಪಿ ಅರೆಸ್ಟ್

ಬೆಳ್ತಂಗಡಿ: ಅಕ್ರಮ ಮರಳು ಸಾಗಾಟದ ಎರಡು ಪಿಕಪ್‌ ವಾಹನ ಹಾಗೂ ಪ್ರಕರಣಕ್ಕೆ ಸಂಬಂಧಪಟ್ಟಂತೆ ಇಬ್ಬರನ್ನು ವೇಣೂರು ಠಾಣೆಯ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ವೇಣೂರಿನ ಪಲ್ಗುಣಿ ನದಿಯಲ್ಲಿ ಅಕ್ರಮವಾಗಿ ಮರಳು ಕಳ್ಳತನ ಮಾಡಿ ಸಾಗಾಟ ಮಾಡುತ್ತಿರುವುದಾಗಿ...

300 ರೂ. ಗಡಿಯತ್ತ ಹಸಿ ಕೊಕ್ಕೊ… 900 ರೂ. ಗಡಿಯತ್ತ ಒಣ ಕೊಕ್ಕೊ

ಪುತ್ತೂರು: ಕ್ಯಾಂಪ್ಕೋ ಮಾರುಕಟ್ಟೆಯಲ್ಲಿ ಹಸಿ ಕೊಕ್ಕೊ, ಒಣ ಕೊಕ್ಕೊ ಧಾರಣೆ ಮತ್ತಷ್ಟು ಜಿಗಿದಿದ್ದು, ಹೊರ ಮಾರುಕಟ್ಟೆಯಲ್ಲಿಯೂ ಅತ್ಯಧಿಕ ದರ ದಾಖಲಾಗಿದೆ. ಒಣ ಕೊಕ್ಕೊ 900 ರೂ. ಗಡಿಯತ್ತ, ಹಸಿ ಕೊಕ್ಕೊ 300 ರೂ....

ಭಕ್ತರೇ ಗಮನಿಸಿ…. ಈ ದಿನ ಪಣೋಲಿಬೈಲು ಶ್ರೀ ಕಲ್ಲುರ್ಟಿ ದೈವಸ್ಥಾನದಲ್ಲಿ ಆಗೇಲು ಸೇವೆ ಇರುವುದಿಲ್ಲ

ಬಂಟ್ವಾಳ ತಾಲೂಕು ಸಜೀಪಮೂಡ ಪಣೋಲಿಬೈಲು ಶ್ರೀ ಕಲ್ಲುರ್ಟಿ ದೈವಸ್ಥಾನದಲ್ಲಿ ಏ.12, 14, 16 ರಂದು ಆಗೇಲು ಸೇವೆ ಇರುವುದಿಲ್ಲ. ಏ. 19ರಿಂದ ಆಗೇಲು ಸೇವೆ ನಡೆಯುತ್ತದೆ ಹಾಗೂ ಏ.21 ರಂದು ಆಗೇಲು ಸೇವೆ...