Monday, April 8, 2024

ರಸ್ತೆ ಮತ್ತು 8 ಸೇತುವೆಗಳ ಮರುನಿರ್ಮಾಣ ಕಾಮಗಾರಿ : ನ.2ರಂದು ಚಾಲನೆ – ಶಾಸಕ ಸಂಜೀವ ಮಠಂದೂರು

ಪುತ್ತೂರು : ಮಾಣಿ – ಮೈಸೂರು -ಬೆಂಗಳೂರು ರಾಷ್ಟ್ರೀಯ ಹೆದ್ದಾರಿ 275 ರ ಪುತ್ತೂರಿನಿಂದ ಸಂಪಾಜೆ ತನಕ ರಸ್ತೆ ಸುರಕ್ಷತಾ ಕಾಮಗಾರಿ ಮತ್ತು 8 ಸೇತುವೆಗಳನ್ನು ಅಗಲಗೊಳಿಸಿ ಮರುನಿರ್ಮಾಣ ಮಾಡುವ ಕಾಮಗಾರಿಗೆ ಕೇಂದ್ರ ಸರಕಾರವು ರೂ.51.96 ಕೋಟಿ ಬಿಡುಗಡೆಗೊಳಿಸಿದ್ದು, ನ. 2 ರಂದು ಪೂರ್ವಾಹ್ನ 11 ಗಂಟೆಗೆ ಪುತ್ತೂರಿನ ಕುಂಬ್ರದಲ್ಲಿ ಚಾಲನೆ ನೀಡಲಾಗುವುದು ಎಂದು ಪುತ್ತೂರು ಶಾಸಕ ಸಂಜೀವ ಮಠಂದೂರು ತಿಳಿಸಿದ್ದಾರೆ.

ಸೋಮವಾರ ಪುತ್ತೂರು ನೀರೀಕ್ಷಣ ಮಂದಿರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ದ.ಕ.ಸಂಸದ ಹಾಗೂ ರಾಜ್ಯ ಬಿಜೆಪಿ ಅಧ್ಯಕ್ಷ ನಳಿನ್ ಕುಮಾರ್ ಕಟೀಲ್, ಸಚಿವ ಎಸ್. ಅಂಗಾರ ಮೊದಲಾದವರು ಭಾಗವಹಿಸಲಿದ್ದಾರೆ ಎಂದು ಹೇಳಿದರು.

ಹಿಂದೆ ಕೆ.ಅರ್.ಡಿ.ಸಿ.ಎಲ್. ನಲ್ಲಿದ್ದ ರಸ್ತೆಯನ್ನು ಇತ್ತೀಚೆಗೆ ರಾಷ್ಟ್ರೀಯ ಹೆದ್ದಾರಿಯಾಗಿ ಪರಿವರ್ತಿಸಲಾಗಿತ್ತು. ಮಾಣಿಯಿಂದ ಸಂಪಾಜೆ ತನಕ 68 ಕಿ.ಮೀ. ಹೆದ್ದಾರಿಯನ್ನು ಮಡಿಕೇರಿ ವಿಭಾಗಕ್ಕೆ ರಾ.ಹೆ. ಯವರು ವಹಿಸಿದ್ದರು. ಅದನ್ನು ಮಂಗಳೂರು ವಿಭಾಗಕ್ಕೆ ನೀಡುವಂತೆ ಹೆದ್ದಾರಿ ಮುಖ್ಯ ಎಂಜಿನಿಯರ್‌ಗೆ ಮನವಿ ಮಾಡಿದ ಮೇರೆಗೆ ಸ್ಪಂದನೆ ಲಭಿಸಿದೆ ಎಂದರು.

ಅಪಾಯಕಾರಿ ಸೇತುವೆ, ತಿರುವು, ಅಪಾಯಕಾರಿ ವಲಯಗಳನ್ನು ಗುರುತಿಸಿ ಅದನ್ನು ಅಗಲೀಕರಣಗೊಳಿಸಲು, ಸೇತುವೆ ಅಗಲಗೊಳಿಸುವ ಪ್ರಸ್ತಾವನೆಯನ್ನು ಸಲ್ಲಿಸಿದ್ದೆ. ಈಗ ಅನುದಾನ ಬಿಡುಗಡೆಯಾಗಿದ್ದು, ಮುಗರೋಡಿ ಕನ್‌ಸ್ಟ್ರಕ್ಷನ್ ಸಂಸ್ಥೆಯವರು ಟೆಂಡರ್ ಪಡೆದುಕೊಂಡಿದ್ದಾರೆ. ಮಳೆಗಾಲಕ್ಕೆ ಮೊದಲು ಸೇತುವೆಗಳ ಕಾಮಗಾರಿ ಮುಗಿಸುವ ಭರವಸೆ ನೀಡಿದ್ದಾರೆ ಎಂದರು. ಮಾಣಿಯಿಂದ – ಮೈಸೂರು ತನಕ ಚತುಷ್ಪಥ ಕಾಮಗಾರಿಗೂ ಬೇಡಿಕೆ ಇಟ್ಟಿದ್ದೇವೆ. ನಳಿನ್ ಕುಮಾರ್ ಕಟೀಲ್ ಅವರ ಮೂಲಕವೂ ಮತ್ತೊಮ್ಮೆ ಮನವಿ ಮಾಡಲಾಗುವುದು ಎಂದು ಮಠಂದೂರು ತಿಳಿಸಿದರು.

 

8 ಸೇತುವೆಗಳು

ಮುಕ್ರಂಪಾಡಿ ಸೇತುವೆ: ರೂ. 1.73 ಕೋಟಿ

ಸಂಪ್ಯ ಸೇತುವೆ: ರೂ.3.03 ಕೋಟಿ

ಸಂಟ್ಯಾರ್ ಸೇತುವೆ: ರೂ. 4.55 ಕೋಟಿ

ಕುಂಬ್ರ ಸೇತುವೆ: ರೂ. 11.64 ಕೋಟಿ

ಶೇಖಮಲೆ ಸೇತುವೆ: ರೂ. 9.55 ಕೋಟಿ

ಕೌಡಿಚ್ಚಾರು ಸೇತುವೆ: ರೂ. 4.02 ಕೋಟಿ

ಪೈಚಾರ್ ಸೇತುವೆ 3.34 ಕೋಟಿ

ಕಡಪಾಲ ಸೇತುವೆ: 4.82 ಕೋಟಿ

ಒಟ್ಟು: ರೂ. 42.68 ಕೋಟಿ ವೆಚ್ಚ ಹಣ ಬಿಡುಗಡೆ ಆಗಿದೆ ಎಂದರು ಭೂ ಸ್ವಾಧೀನ , ಯುಟುಲಿಟಿ ಹಾಗೂ ಇತರ ಮೊತ್ತವಾಗಿ ರೂ. 9.28 ಕೋಟಿ ಇರಿಸಲಾಗಿದ್ದು, ಸೇತುವೆಗಳನ್ನು 12 ಮೀ. ಅಗಲಗೊಳಿಸಲಾಗುತ್ತದೆ. ರಸ್ತೆಗಳನ್ನು ಬಂದ್ ಮಾಡದೆ, ವಾಹನಗಳ ಸಂಚಾರಕ್ಕೆ ಯಾವುದೇ ಅಡೆ ತಡೆ ಉಂಟಾಗದಂತೆ ಕೆಲಸ ಪೂರ್ಣಗೊಳಿಸಲು ಸೂಚಿಸಲಾಗಿದೆ ಎಂದು ಸಂಜೀವ ಮಠಂದೂರು ಹೇಳಿದರು.

 

ಬಿಜೆಪಿ ಮುಖಂಡ ರಾಮದಾಸ್ ಹಾರಾಡಿ ಸುದ್ದಿಗೋಷ್ಠಿಯಲ್ಲಿ ಉಪಸ್ಥಿತರಿದ್ದರು.

More from the blog

ಲೋಕಸಭಾ ಚುನಾವಣೆ : ಅಕ್ರಮ ವ್ಯವಹಾರಿಗಳಿಗೆ ರಹದಾರಿಯಾದ ಸಾಲೆತ್ತೂರು ಬಳಿಯ ಕೂಡುರಸ್ತೆ ಚೆಕ್ ಪೋಸ್ಟ್

ವಿಟ್ಲ: ಲೋಕಸಭಾ ಚುನಾವಣೆಗೆ ಈಗಾಗಲೇ ದಿನ ನಿಗದಿಯಾಗಿದ್ದು, ಜಿಲ್ಲಾಡಳಿತ ಸರ್ವ ಸನ್ನದ್ದವಾಗಿದೆ. ಅಕ್ರಮಗಳನ್ನು ತಡೆಗಟ್ಟುವ ಉದ್ದೇಶದಿಂದ ದಕ್ಷಿಣ ಕನ್ನಡ ಜಿಲ್ಲಾಡಳಿತವು ಗಡಿಪ್ರದೇಶ ಸೇರಿದಂತೆ ಜಿಲ್ಲೆಯಲ್ಲಿ 23 ಕಡೆಗಳಲ್ಲಿ ಚೆಕ್ ಪೋಸ್ಟ್ ಗಳನ್ನು ಸ್ಥಾಪಿಸಿದೆ. ಆದರೆ...

5,8,9,11ನೇ ತರಗತಿ ಪರೀಕ್ಷೆ ಫಲಿತಾಂಶಕ್ಕೆ ಸುಪ್ರೀಂ ತಡೆ

ಹೊಸದಿಲ್ಲಿ: 5, 8, 9 ಮತ್ತು 11 ನೇ ತರಗತಿಗಳ ಬೋರ್ಡ್ ಪರೀಕ್ಷೆಗಳ ಫಲಿತಾಂಶಗಳನ್ನು ಪ್ರಕಟಿಸಲು ಸುಪ್ರೀಂ ಕೋರ್ಟ್ ಸೋಮವಾರ ತಡೆಯಾಜ್ಞೆ ನೀಡಿದೆ. ರಾಜ್ಯದಲ್ಲಿ 5, 8, 9ನೇ ತರಗತಿಗೆ ಬೋರ್ಡ್​ ಪರೀಕ್ಷೆ ಮುಗಿದಿದ್ದು,...

ಮನೆಯೊಳಗೆ ‌ನುಗ್ಗಿ ವ್ಯಕ್ತಿಗೆ ಚೂರಿ ಇರಿತ : ಆರೋಪಿ ಪರಾರಿ

ಬಂಟ್ವಾಳ: ಮನೆಯೊಳಗೆ ‌ನುಗ್ಗಿ ವ್ಯಕ್ತಿಯೋರ್ವನಿಗೆ ಚೂರಿ ಹಾಕಿ ಪರಾರಿಯಾಗಿರುವ ಘಟನೆ ಬಂಟ್ವಾಳ ಗ್ರಾಮಾಂತರ ಪೋಲೀಸ್ ಠಾಣಾ ವ್ಯಾಪ್ತಿಯ ಪುದು ಎಂಬಲ್ಲಿ ನಡೆದಿದೆ. ಪುದು ಗ್ರಾಮದ 10 ನೇ ಮೈಲಿಕಲ್ಲು ನಿವಾಸಿ...

ಲೋಕಾಯುಕ್ತ ಇಲಾಖೆಯಿಂದ ಸಾರ್ವಜನಿಕ ಜನಸಂಪರ್ಕ ಸಭೆ

ಬಂಟ್ವಾಳ: ಲೋಕಾಯುಕ್ತ ಇಲಾಖೆಗೆ ಸಂಬಂಧಿಸಿದಂತೆ ಸಾರ್ವಜನಿಕ ಜನಸಂಪರ್ಕ ಸಭೆ ಬಿಸಿರೋಡಿನ ತಾಲೂಕು ಪಂಚಾಯತ್ ಸಭಾಂಗಣದಲ್ಲಿ ಎ. 8 ರಂದು ಸೋಮವಾರ ಲೋಕಾಯುಕ್ತ ಡಿ.ವೈ.ಎಸ್.ಪಿ. ಗಾನ ಕುಮಾರಿ ಅವರ ಅಧ್ಯಕ್ಷತೆಯಲ್ಲಿ ಜರುಗಿತು. ಈ ಸಂದರ್ಭದಲ್ಲಿ ಮಾತನಾಡಿದ...