Tuesday, April 9, 2024

ಪ್ರವೀಣ್ ನೆಟ್ಟಾರು ಹತ್ಯೆ ಕೇಸ್ : ತಲೆಮರೆಸಿಕೊಂಡಿರುವ ನಾಲ್ವರು ಆರೋಪಿಗಳ ಗುರುತು ಪತ್ತೆಗೆ ನಗದು ಬಹುಮಾನ ಘೋಷಿಸಿದ ಎನ್.ಐ.ಎ

ಬೆಳ್ಳಾರೆ: ರಾಜ್ಯದಲ್ಲಿ ಸಂಚಲನ ಮೂಡಿಸಿದ್ದ ಪ್ರವೀಣ್ ನೆಟ್ಟಾರು ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬಾಕಿ ಉಳಿದಿರುವ ನಾಲ್ಕು ಆರೋಪಿಗಳ ಬಗ್ಗೆ ಸುಳಿವು ನೀಡದರೆ ಬಹುಮಾನ ನೀಡುವ ಘೋಷಣೆ ಮಾಡಿದ ಬೆಂಗಳೂರು ಎನ್.ಐ.ಎ.ಪೋಲಿಸರು.

ಜುಲೈ 26 ರಂದು ಸುಳ್ಯ ದ ಚಿಕನ್ ಅಂಗಡಿ ಮಾಲಕ ಯುವ ಬಿಜೆಪಿ ನಾಯಕ ಪ್ರವೀಣ್ ನೆಟ್ಟಾರು ಅವರನ್ನು ಅಂಗಡಿ ಬಂದ್ ಮಾಡುವ ವೇಳೆ ಬೈಕಿನಲ್ಲಿ ಬಂದು ದುಷ್ಕರ್ಮಿಗಳು ಕೊಲೆ ಮಾಡಿ ಪರಾರಿಯಾಗಿದ್ದರು.

ಅ ಬಳಿಕ ಪೋಲೀಸರು ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ 10 ಮಂದಿ ಸ್ಥಳೀಯ ಯುವಕರನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿತ್ತು.

ಆದರೆ ಈ ಕೊಲೆಗೆ ಪ್ರಮುಖವಾಗಿ ಪ್ಲಾನ್ ರೂಪಿಸಿದ ಹಾಗೂ ಸಹಾಯ ಮಾಡಿದ ಪ್ರಮುಖ ‌ನಾಲ್ವರು ಬಂಧನವಾಗದೆ ಹಾಗೆ ಉಳಿದಿದ್ದಾರೆ.

ಪ್ರಕರಣ ವನ್ನು ‌ಗಂಭೀರವಾಗಿ ಪರಿಗಣಿಸಿ ಸರಕಾರ ಕೇಂದ್ರದ ಎ.ಎನ್.ಐ.ಗೆ ಹಸ್ತಾಂತರ ಮಾಡಿತ್ತು.

ಪ್ರಕರಣವನ್ನು ವಿವಿಧ ಆಯಾಮಗಳಲ್ಲಿ ತನಿಖೆ ಮುಂದುವರಿಸಿ ದ ಎ.ಎನ್.ಐ.ಕೊಲೆ ಪ್ರಕರಣ ದ ಸಂಪೂರ್ಣ ಮಾಹಿತಿಯನ್ನು ಸಂಗ್ರಹಿಸಿದೆ.

ಇದೀಗ ಪ್ರಕರಣ ಪ್ರಮುಖ ಆರೋಪಿಗಳಾದ ಪ್ರವೀಣ್ ನೆಟ್ಟಾರು ಅವರ ಕೊಲೆಗೆ ಪ್ಲಾನ್ ರೂಪಿಸಿದ ಮುಸ್ತಾಪ ಹಾಗೂ ಸಹಾಯ ಮಾಡಿದ ಹಾಗೂ ಕುಟ್ಟಪ್ಪ ಕೊಲೆ ಪ್ರಕರಣದ ಆರೋಪಿಯಾದ ತುಫೈಲ್ ಅವರ ಬಗ್ಗೆ ಸುಳಿವು ನೀಡಿದರೆ ತಲಾ 5 ಲಕ್ಷ ಬಹುಮಾನ, ಜೊತೆಗೆ ಕೊಲೆಗೆ ಬೈಕ್ ನೀಡಿ ಸಹಕಾರ ನೀಡಿದ ಫಾರೂಕ್ ಹಾಗೂ ಕೊಲೆ ಮಾಡುವವರೆಗೆ ಯಾರು ಬರುತ್ತಾರೆ ಎಂದು ‌ಕಾವಲು ಕಾದ ಸಿದ್ದೀಕ್ ‌ಅವರ ಬಗ್ಗೆ ಮಾಹಿತಿ ನೀಡಿದರೆ ತಲಾ 2 ಲಕ್ಷ ಬಹುಮಾನ ಘೋಷಣೆ ಮಾಡಿದ್ದಾರೆ.

More from the blog

ಭಕ್ತರೇ ಗಮನಿಸಿ…. ಈ ದಿನ ಪಣೋಲಿಬೈಲು ಶ್ರೀ ಕಲ್ಲುರ್ಟಿ ದೈವಸ್ಥಾನದಲ್ಲಿ ಆಗೇಲು ಸೇವೆ ಇರುವುದಿಲ್ಲ

ಬಂಟ್ವಾಳ ತಾಲೂಕು ಸಜೀಪಮೂಡ ಪಣೋಲಿಬೈಲು ಶ್ರೀ ಕಲ್ಲುರ್ಟಿ ದೈವಸ್ಥಾನದಲ್ಲಿ ಏ.12, 14, 16 ರಂದು ಆಗೇಲು ಸೇವೆ ಇರುವುದಿಲ್ಲ. ಏ. 19ರಿಂದ ಆಗೇಲು ಸೇವೆ ನಡೆಯುತ್ತದೆ ಹಾಗೂ ಏ.21 ರಂದು ಆಗೇಲು ಸೇವೆ...

ಲೋಕಸಭಾ ಚುನಾವಣೆ : ಅಕ್ರಮ ವ್ಯವಹಾರಿಗಳಿಗೆ ರಹದಾರಿಯಾದ ಸಾಲೆತ್ತೂರು ಬಳಿಯ ಕೂಡುರಸ್ತೆ ಚೆಕ್ ಪೋಸ್ಟ್

ವಿಟ್ಲ: ಲೋಕಸಭಾ ಚುನಾವಣೆಗೆ ಈಗಾಗಲೇ ದಿನ ನಿಗದಿಯಾಗಿದ್ದು, ಜಿಲ್ಲಾಡಳಿತ ಸರ್ವ ಸನ್ನದ್ದವಾಗಿದೆ. ಅಕ್ರಮಗಳನ್ನು ತಡೆಗಟ್ಟುವ ಉದ್ದೇಶದಿಂದ ದಕ್ಷಿಣ ಕನ್ನಡ ಜಿಲ್ಲಾಡಳಿತವು ಗಡಿಪ್ರದೇಶ ಸೇರಿದಂತೆ ಜಿಲ್ಲೆಯಲ್ಲಿ 23 ಕಡೆಗಳಲ್ಲಿ ಚೆಕ್ ಪೋಸ್ಟ್ ಗಳನ್ನು ಸ್ಥಾಪಿಸಿದೆ. ಆದರೆ...

5,8,9,11ನೇ ತರಗತಿ ಪರೀಕ್ಷೆ ಫಲಿತಾಂಶಕ್ಕೆ ಸುಪ್ರೀಂ ತಡೆ

ಹೊಸದಿಲ್ಲಿ: 5, 8, 9 ಮತ್ತು 11 ನೇ ತರಗತಿಗಳ ಬೋರ್ಡ್ ಪರೀಕ್ಷೆಗಳ ಫಲಿತಾಂಶಗಳನ್ನು ಪ್ರಕಟಿಸಲು ಸುಪ್ರೀಂ ಕೋರ್ಟ್ ಸೋಮವಾರ ತಡೆಯಾಜ್ಞೆ ನೀಡಿದೆ. ರಾಜ್ಯದಲ್ಲಿ 5, 8, 9ನೇ ತರಗತಿಗೆ ಬೋರ್ಡ್​ ಪರೀಕ್ಷೆ ಮುಗಿದಿದ್ದು,...

ಮನೆಯೊಳಗೆ ‌ನುಗ್ಗಿ ವ್ಯಕ್ತಿಗೆ ಚೂರಿ ಇರಿತ : ಆರೋಪಿ ಪರಾರಿ

ಬಂಟ್ವಾಳ: ಮನೆಯೊಳಗೆ ‌ನುಗ್ಗಿ ವ್ಯಕ್ತಿಯೋರ್ವನಿಗೆ ಚೂರಿ ಹಾಕಿ ಪರಾರಿಯಾಗಿರುವ ಘಟನೆ ಬಂಟ್ವಾಳ ಗ್ರಾಮಾಂತರ ಪೋಲೀಸ್ ಠಾಣಾ ವ್ಯಾಪ್ತಿಯ ಪುದು ಎಂಬಲ್ಲಿ ನಡೆದಿದೆ. ಪುದು ಗ್ರಾಮದ 10 ನೇ ಮೈಲಿಕಲ್ಲು ನಿವಾಸಿ...