ಮೂಡಬಿದ್ರೆ: ತಾಲೂಕು ಪತ್ರಕರ್ತರ ಕಚೇರಿ ಮೂಡಬಿದ್ರೆಯಲ್ಲಿ ತುಳುನಾಡ ಪೊರ್ಲು ಚಾರಿಟೇಬಲ್ ಟ್ರಸ್ಟ್ ಮಿಜಾರು ತಂಡದ ವತಿಯಿಂದ ಧನ ಸಹಾಯದ ಚೆಕ್ ಹಸ್ತಾಂತರಿಸಿದರು.
ಮೂಡಬಿದ್ರಿ ಸ್ಫೂರ್ತಿ ಭಿನ್ನ ಸಾಮರ್ಥ್ಯ ಮಕ್ಕಳ ಶಾಲೆ ಇಲ್ಲಿಯ ದಿವ್ಯಾಂಗ ಮಕ್ಕಳ ನಿರ್ವಹಣೆಗೆ ತಿಂಗಳಿಗೆ ಸುಮಾರು 2 ಲಕ್ಷದ ಅವಶ್ಯಕತೆಯಿದ್ದು ಅವರ ಮನವಿ ನಮಗೆ ಬಂದಿದ್ದು ಅವರ ಮನವಿಗೆ ಸ್ಪಂದಿಸಿ ನಮ್ಮ ತಂಡದ ವತಿಯಿಂದ 15,000/- ರೂ ಚೆಕ್ ನ್ನು ತಾಲೂಕು ಪತ್ರಕರ್ತರ ಕಚೇರಿ ಮೂಡಬಿದ್ರೆಯಲ್ಲಿ ಗಣ್ಯರ ಹಾಗೂ ತಂಡದ ಪದಾಧಿಕಾರಿಗಳ ಸೇವಾ ಮಾಣಿಕ್ಯರ ಸಮ್ಮುಖದಲ್ಲಿ ಹಸ್ತಾಂತರ ಮಾಡಲಾಯಿತು.
ಮಂಗಳೂರು ಪಣಂಬೂರಿನ ನಿವಾಸಿ ಶುಭಾಸ್ ಪೂಜಾರಿ ಇವರ ಪತ್ನಿ ನಳಿನಾಕ್ಷಿ ರಕ್ತ ಕ್ಯಾನ್ಸರ್ ನಿಂದ ಬಳಲುತ್ತಿದ್ದು ಇವರಿಗೆ bone myaro trance plant ಮೂಲಕ ಕಿಮೋಧೇರಪಿಯ ಚಿಕಿತ್ಸೆಯ ಅಗತ್ಯವಿದ್ದು ಅವರಿಗೆ 30 ಲಕ್ಷ ದ ಅವಶ್ಯಕತೆಯಿದ್ದು ಇವರು ನಮ್ಮ ತಂಡಕ್ಕೆ ಮನವಿ ನೀಡಿದ್ದು ಇವರ ಮನವಿ ಗೆ ಸ್ಪಂದಿಸಿದ ನಮ್ಮ ತಂಡ ಅವರಿಗೆ 15,000/- ರೂ ಚೆಕ್ಕ್ ನ್ನು ತಾಲೂಕು ಪತ್ರಕರ್ತರ ಕಚೇರಿ ಮೂಡಬಿದ್ರೆಯಲ್ಲಿ ಗಣ್ಯರ ಹಾಗೂ ತಂಡದ ಪದಾಧಿಕಾರಿಗಳ ಸೇವಾ ಮಾಣಿಕ್ಯರ ಸಮ್ಮುಖದಲ್ಲಿ ಹಸ್ತಾಂತರ ಮಾಡಲಾಯಿತು.