Sunday, April 21, 2024

ಕುಕ್ಕಾಜೆ ಶ್ರೀ ಕಾಳಿಕಾಂಬ ಆಂಜನೇಯ ಕ್ಷೇತ್ರದ ಬ್ರಹ್ಮಕಲಶೋತ್ವದ ಹಿನ್ನೆಲೆ ಮುಂಡಿತ್ತಡ್ಕ ಮಹಾ ವಿಷ್ಣು ಭಜನಾ ಮಂದಿರದಲ್ಲಿ ವಲಯ ಸಮಿತಿ ರಚನೆ

ಕಾಸರಗೋಡು: ಮಾಣಿಲ ಕುಕ್ಕಾಜೆ ಶ್ರೀ ಕಾಳಿಕಾಂಬ ಆಂಜನೇಯ ಕ್ಷೇತ್ರದಲ್ಲಿ 2023ರ ಮಾರ್ಚ್ ತಿಂಗಳಲ್ಲಿ ನಡೆಯಲಿರುವ ಬ್ರಹ್ಮಕಲಶೋತ್ಸವದ ಹಿನ್ನೆಲೆಯಲ್ಲಿ ಕ್ಷೇತ್ರದ ಧರ್ಮದರ್ಶಿ ಶ್ರೀ ಶ್ರೀಕೃಷ್ಣ ಗುರೂಜಿಯವರ ಮಾರ್ಗದರ್ಶನದಲ್ಲಿ
ಕಾಸರಗೋಡು ಮುಂಡಿತ್ತಡ್ಕದ ಮಹಾ ವಿಷ್ಣು ಭಜನಾ ಮಂದಿರದಲ್ಲಿ ಚೆನ್ನಯ ಪೂಜಾರಿ ಯವರ ಅಧ್ಯಕ್ಷತೆಯಲ್ಲಿ ವಲಯ ಸಮಿತಿಯ ರಚನೆಯ ಸಭೆ ನಡೆಯಿತು.

ಕುಕ್ಕಾಜೆ ಕ್ಷೇತ್ರಕ್ಕೆ ಮತ್ತು ಮುಂಡಿತ್ತಡ್ಕ ಕ್ಷೇತ್ರಕ್ಕೆ ಮೊದಲಿನಿಂದಲೂ ಬಂದ ಒಂದು ಸಂಭಂದ ಕ್ಷೇತ್ರದ ಈ ಮೊದಲು ನಡೆದ ಎಲ್ಲಾ ಕಾರ್ಯದಲ್ಲೂ ಈ ಕ್ಷೇತ್ರದ ಸಹಕಾರ ಸಿಕ್ಕಿರುವುದು ಆದ್ದರಿಂದ ಈ ವರ್ಷ ನಡೆಯುವ ಜೀರ್ಣೋದ್ಧಾರ ಹಾಗೂ ಬ್ರಹ್ಮಕಲಶೋತ್ಸವದ ಯಶಸ್ವಿಗೆ ಸಹಕರಿಸುವಂತೆ ಈ ವಲಯದ ಜನರು ಸಹಕರಿಸಬೇಕೆಂದು ಕುಕ್ಕಾಜೆ ಕ್ಷೇತ್ರ ಪರಮಪೂಜ್ಯ ಧರ್ಮದರ್ಶಿ ಶ್ರೀಕೃಷ್ಣ ಗುರೂಜಿಯವರು ವಿನಂತಿಸಿದರು ಕುಕ್ಕಾಜೆ ಕ್ಷೇತ್ರದ ಬಗ್ಗೆ ವಿಸ್ತಾರವಾಗಿ ಪ್ರಾಸ್ತಾವಿಕ ಭಾಷಣವನ್ನು ಸಂಕಪ್ಪ ಸುವರ್ಣ ಬಾಡೂರು ಮಾಡಿದರು.

ಮುಂಡಿತ್ತಡ್ಕ ಕ್ಷೇತ್ರದ ರಾಮ್ ಕುಮಾರ್ ಮುಂಡಿತ್ತಡ್ಕರವರು ಕುಕ್ಕಾಜೆ ಈ ಕ್ಷೇತ್ರಕ್ಕೆ ಹಾಗೂ ಕುಕ್ಕಾಜೆಗಿರುವ ಸಂಭಂದ ಯಾವರೀತಿಯಾಗಿ ನಡೆದು ಬಂದಿರುವುದೆಂದು ತಿಳಿಸಿದರು ಹಾಗೂ ಕುಕ್ಕಾಜೆ ಕ್ಷೇತ್ರದ ಅಭಿವೃದ್ಧಿಯಲ್ಲಿ ಹಾಗೂ ಶ್ರಮದಾನ ಮೂಲಕ ಈ ಹಿಂದೆಯೂ ಸಹಕರಿಸಿರುತ್ತೆವೆ ಮಂದೆಯೂ ಸಹಕರಿಸುವುದಾಗಿ ಭರವಸೆ ನೀಡಿದರು ಹೇಮಚಂದ್ರ ಮಂಡಿತ್ತಡ್ಕ, ಸೂರ್ಯಪ್ರಕಾಶ್ ಮುಂಡಿತ್ತಡ್ಕ, ಗಣೇಶ್ ಮುಂಡಿತ್ತಡ್ಕ , ಜಗನ್ನಾಥ ಆಳ್ವ ಮಂಜ ಕೊಟ್ಟಿಗೆ, ಸುರೇಶ್ ನಾಯ್ಕ ಮೈರೆ, ರವಿ ಕುಂಡಂಗುಳಿ ಮೊದಲಾದವರು ಉಪಸ್ಥಿತರಿದ್ದರು.

ಈ ಸಂದರ್ಭದಲ್ಲಿ ವಲಯ ಸಮಿತಿಯನ್ನು ರಚಿಸಲಾಯಿತು. ಶ್ರೀ ಮಹಾವಿಷ್ಣು ಮುಂಡಿತ್ತಡ್ಕ ವಲಯ ಸಮಿತಿಯ ಗೌರವ ಅಧ್ಯಕ್ಷರು ರಾಮ್ ಕುಮಾರ್ ಮಂಡಿತ್ತಡ್ಕ, ಅಧ್ಯಕ್ಷರಾಗಿ ಶಾಂತ ಕುಮಾರ್ ಮುಂಡಿತ್ತಡ್ಕ ಪ್ರದಾನ ಕಾರ್ಯದರ್ಶಿ ಮೋಕ್ಷಿತ್ ಕುಮಾರ್ ಮುಂಡಿತ್ತಡ್ಕ ಕೋಶಾಧಿಕಾರಿ ಹೇಮಚಂದ್ರ ಮುಂಡಿತ್ತಡ್ಕ ಹಾಗೂ ಕಾರ್ಯಕಾರಿ ಸಮಿತಿಯ ಸದಸ್ಯರಾಗಿ ಸೂರ್ಯಪ್ರಕಾಶ್ ಮುಂಡಿತ್ತಡ್ಕ, ಗಣೇಶ್ ಮುಂಡಿತ್ತಡ್ಕ, ಜಗನ್ನಾಥ ಆಳ್ವ ಮಂಜ ಕೊಟ್ಟಿಗೆ, ಸುರೇಶ್ ನಾಯ್ಕ ಮೈರೆ, ರವಿ ಕುಂಡಂಗುಳಿ, ಬಾಬು ಉಪ್ಪಿನ್, ಶಿವ ಪ್ರಸಾದ್ ಮುಂಡಿತ್ತಡ್ಕ ಮತ್ತು ಸುಮಾರು 25 ಮಂದಿ ಸದಸ್ಯರನ್ನಾಗಿ ಆಯ್ಕೆ ಮಾಡಲಾಯಿತು.

ಈ ಸಂಧರ್ಭದಲ್ಲಿ ಕುಕ್ಕಾಜೆ ಕ್ಷೇತ್ರದ ರವಿ ಎಸ್ಎಂ, ಲಕ್ಷ್ಮಣ ಪಿಲಿಂಗುರಿ ದೇವಿ ಪ್ರಸಾದ್ ಕುಕ್ಕಾಜೆ ಉಪಸ್ಥಿತರಿದ್ದರು, ಶಾಂತ ಕುಮಾರ್ ಸ್ವಾಗತಿಸಿ ಮೋಕ್ಷಿತ್ ಮುಂಡಿತ್ತಡ್ಕ ವಂದಿಸಿದರು.

More from the blog

ಕಾಂಗ್ರೇಸ್ ಸರಕಾರದ ಆಡಳಿತದಲ್ಲಿ ಹೆಣ್ಮಕ್ಕಳಿಗೆ ಸುರಕ್ಷತೆಯಿಲ್ಲ: ಬಿ.ವೈ.ವಿಜಯೇಂದ್ರ

ರಾಜ್ಯದಲ್ಲಿ ಬಿಜೆಪಿ ಮತ್ತು ಜೆಡಿಎಸ್ ಪಕ್ಷಗಳು ಮೈತ್ರಿಯಾಗಿ ಒಟ್ಟು 28 ಸ್ಥಾನದಲ್ಲಿದಲ್ಲಿ ಗೆಲುವು ಸಾಧಿಸುವುದು ನಿಶ್ವಿತ,ಇದನ್ನು ಯಾರಿಂದಲೂ ತಡೆಯಲು ಸಾಧ್ಯವಿಲ್ಲ ಎಂದು ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ತಿಳಿಸಿದರು. ಅವರು ಬಿಸಿರೋಡಿನ ಗಾಣದಪಡ್ಪು ಬ್ರಹ್ಮ ಶ್ರೀ ನಾರಾಯಣ ಗುರು...

ವಿಟ್ಲ ವ್ಯಾಪ್ತಿಯ ಪ್ರಮುಖ ಧಾರ್ಮಿಕ ಕೇಂದ್ರಗಳಿಗೆ ಕಾಂಗ್ರೆಸ್ ಅಭ್ಯರ್ಥಿ ಪದ್ಮರಾಜ್ ಆರ್. ಪೂಜಾರಿ ಭೇಟಿ

ವಿಟ್ಲ: ಲೋಕಸಭಾ ಚುನಾವಣೆಯ ಕಾಂಗ್ರೆಸ್ ಅಭ್ಯರ್ಥಿ ಪದ್ಮರಾಜ್ ಆರ್. ಪೂಜಾರಿ ಅವರು ಶನಿವಾರ ವಿಟ್ಲದ ವಿವಿಧ ಕಡೆಗಳಿಗೆ ಭೇಟಿ ನೀಡಿದರು. ಒಡಿಯೂರು ಶ್ರೀ ಗುರುದೇವ ದತ್ತ ಸಂಸ್ಥಾನಕ್ಕೆ ಭೇಟಿ ನೀಡಿದ ಲೋಕಸಭಾ ಚುನಾವಣೆಯ ಕಾಂಗ್ರೆಸ್...

ಸೈಕಲ್ ರಿಪೇರಿಗೆ ಹಟ : ಬಾಲಕ ಆತ್ಮಹತ್ಯೆ

ಉಪ್ಪಿನಂಗಡಿ: ಬಾಲಕನೋರ್ವ ಆತ್ಮಹತ್ಯೆ ಮಾಡಿಕೊಂಡ ಘಟನೆ ಕರಾಯ ಗ್ರಾಮದ ಶಿವಗಿರಿ ದುಗಲಾಡಿ ಎಂಬಲ್ಲಿ ನಡೆದಿದೆ. ಮೂಲತಃ ಪಂಜದ ಅಳ್ಪೆಬನದ ನಿವಾಸಿ. ದಿ. ರೋಹಿತ್ ಮತ್ತು ರಮ್ಯ ದಂಪತಿಗಳ ಪುತ್ರ ಖಾಸಗಿ ಶಾಲೆಯ 8ನೇ ತರಗತಿಯ...

ಆಸ್ಪತ್ರೆಯಿಂದ ಆಂಬ್ಯುಲೆನ್ಸ್ ನಲ್ಲಿ ತೆರಳಿ ಸಿಇಟಿ ಪರೀಕ್ಷೆ ಬರೆದ ಆ್ಯಸಿಡ್ ದಾಳಿ ಸಂತ್ರಸ್ಥೆ ವಿದ್ಯಾರ್ಥಿನಿ

ಕಡಬ: ಆ್ಯಸಿಡ್ ದಾಳಿಗೆ ಒಳಗಾಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಕಡಬದ ಸರ್ಕಾರಿ ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿನಿ ಆಂಬ್ಯುಲೆನ್ಸ್ ಮೂಲಕ ತೆರಳಿ ಸಿಇಟಿ ಪರೀಕ್ಷೆ ಬರೆದಿದ್ದಾರೆ. ಮಾರ್ಚ್ 4ರಂದು ಕಾಲೇಜಿನಲ್ಲಿ ಪರೀಕ್ಷೆಗೆ ತಯಾರಾಗುತ್ತಿದ್ದ ವೇಳೆ ಅಬಿನ್...