Saturday, April 13, 2024

ಬಂಟ್ವಾಳ ತಾಲೂಕಿನ ಇತಿಹಾಸದಲ್ಲಿ ಪ್ರಥಮ ಬಾರಿಗೆ ನ.12 ಹಾಗೂ ನ.13 ರಂದು ರಾಜ್ಯ ಮಟ್ಟದ ಕರಾಟೆ ಸ್ಪರ್ಧೆ-ರೊ.ರಾಘವೇಂದ್ರ ಭಟ್

ಯಮೋಟೋ ಶೋಟೋಕಾನ್ ಕರಾಟೆ ಅಸೋಸಿಯೇಶನ್ ಮಂಗಳೂರು ಟ್ರಸ್ಟ್ (ರಿ.) ಮಂಗಳೂರು, ರೋಟರಿ ಕ್ಲಬ್ ಬಂಟ್ವಾಳ ಲೊರೆಟ್ಟೋ ಹಿಲ್ಸ್, ರೋಟರಿ ಕ್ಲಬ್ ಸಿದ್ದಕಟ್ಟೆ ಪಲ್ಗುಣಿ, ರೋಟರಿ ಕ್ಲಬ್ ಬಿಸಿರೋಡು ಸಿ.ಟಿ.ರೋಟರಿ ಕ್ಲಬ್ ಬಂಟ್ವಾಳ, ರೋಟರಿ ಕ್ಲಬ್ ಮೊಡಂಕಾಪು ಇವರ ಆಶ್ರಯದಲ್ಲಿ ತಾಲೂಕಿನ ಇತಿಹಾಸದಲ್ಲಿ ಪ್ರಥಮ ಬಾರಿಗೆ ರಾಜ್ಯ ಮಟ್ಟದ ಕರಾಟೆ ಸ್ಪರ್ಧೆ ಯನ್ನು ನ.12 ಹಾಗೂ ನ.13 ರಂದು ಬಂಟ್ವಾಳ ದ ಸ್ಪರ್ಶ ಕಲಾ ಮಂದಿರದಲ್ಲಿ ಆಯೋಜಿಸಲಾಗಿದೆ ಎಂದು ಗೌರವಾಧ್ಯಕ್ಷ ರೊ.ರಾಘವೇಂದ್ರ ಭಟ್ ತಿಳಿಸಿದರು.

‌ಅವರು ಬಿಸಿರೋಡಿನ ಪ್ರೆಸ್ ಕ್ಲಬ್ ನಲ್ಲಿ ಕರೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು. ಈ ಸ್ಪರ್ಧಾ ಕೂಟದಲ್ಲಿ ರಾಜ್ಯದ ಸುಮಾರು 1500 ಕ್ಕೂ ಅಧಿಕ ಪರಿಣತಿ ಹೊಂದಿದ ಪ್ರಭಾವಿ ಕರಾಟೆಪಟುಗಳು ಭಾಗವಹಿಸುವ ನಿರೀಕ್ಷೆ ಇದ್ದು, ಕಟ ಹಾಗೂ ಕುಮಿಟೆ ಎರಡು ವಿಭಾಗದಲ್ಲಿ ಸ್ಪರ್ಧೆ ನಡೆಯುತ್ತದೆ ಎಂದು ಹೇಳಿದರು.

ಈ ಸಂದರ್ಭದಲ್ಲಿ ರೋ.ಸತೀಶ್, ರೊ.ವಿಜಯ ಪೆರ್ನಾಂಡಿಸ್, ಅಧ್ಯಕ್ಷ ಕ್ಯೋಷಿ ಶ್ಯಾಜು ಮುಲವಾನ ಕೋಶಾಧಿಕಾರಿ ರೆನ್ನಿ ಜೆರಾಲ್ಡ್ ಫರ್ನಾಂಡೀಸ್ , ಜೊತೆ ಕಾರ್ಯದರ್ಶಿ ಸೆನ್ಸಯಿ ಅಶೋಕ್ ಆಚಾರ್ಯ ಉಪಸ್ಥಿತರಿದ್ದರು.

More from the blog

ಮನೆ ಮನೆಗೆ ತೆರಲಿ ಲೋಕಸಭಾ ಅಭ್ಯರ್ಥಿ ಪದ್ಮರಾಜ್ ಪೂಜಾರಿ ಪರ ಮತಯಾಚನೆ

ನಮ್ಮ ಬೂತ್ ನಮ್ಮ ಹೊಣೆ ಘೋಷನೇಯಂತೆ ಬೂತ್ ಸಂಖ್ಯೆ 126 ವಾರ್ಡ್ 12 ರ ಅಜ್ಜೀಬೆಟ್ಟು ನಲ್ಲಿ ಮನೆ ಮನೆಗೆ ತೆರಲಿ ಲೋಕ ಸಭಾ ಅಭ್ಯರ್ಥಿ ಪದ್ಮರಾಜ್ ಪೂಜಾರಿಯವರ ಪರವಾಗಿ ಮತ ಯಾಚನೆ...

ಜಮೀನಿನ ವಿಚಾರದಲ್ಲಿ ತಕರಾರು ನಡೆಸಿ ಹಲ್ಲೆ ಪ್ರಕರಣ : ಶಿಕ್ಷೆ ಪ್ರಕಟ

ಬಂಟ್ವಾಳ: ಜಮೀನಿನ ವಿಚಾರದಲ್ಲಿ ತಕರಾರು ಉಂಟಾಗಿ ಹಲ್ಲೆ ನಡೆಸಿದ ಪ್ರಕರಣವೊಂದಕ್ಕೆ ಸಂಬಂಧಿಸಿದಂತೆ ನ್ಯಾಯಾಲಯ ಶಿಕ್ಷೆ ಪ್ರಕಟಗೊಳಿಸಿದ ಬಗ್ಗೆ ವರದಿಯಾಗಿದೆ. ದೇವಸ್ಯ ಪಡೂರು ಗ್ರಾಮ,ಕುಟ್ಟಿಕಳ ,ಅಲ್ಲಿಪಾದೆ ಎಂಬಲ್ಲಿ ನೀಲಯ್ಯ ಮೂಲ್ಯ ಹಾಗೂ ಶ್ರೀನಿವಾಸ್ ಪೂಜಾರಿ ರವರಿಗೆ...

ಲೋಕಸಭಾ ಚುನಾವಣೆ : ಮತಯಂತ್ರಗಳ ಕಮಿಷನಿಂಗ್‌ ಕಾರ್ಯ…. ಸ್ಥಳಕ್ಕೆ ಜಿಲ್ಲಾಧಿಕಾರಿ ಮುಲ್ಲೈ ಮುಹಿಲನ್‌ ಭೇಟಿ

ಬಂಟ್ವಾಳ :ಮೊಡಂಕಾಪಿನಲ್ಲಿರುವ ಇನ್ಫೆಂಟ್‌ ಜೀಸಸ್‌ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಈ ದಿನ ಲೋಕಸಭಾ ಚುನಾವಣೆ 2024 ಕ್ಕೆ ಸಂಬಂಧಿಸಿದಂತೆ 205 ಬಂಟ್ವಾಳ ವಿಧಾನಸಭಾ ಕ್ಷೇತ್ರದಲ್ಲಿ ಬಳಸಲಾಗುವ ಮತಯಂತ್ರಗಳ ಕಮಿಷನಿಂಗ್‌ ಕಾರ್ಯವು ನಡೆಯಿತು. ಈ ಸಂದರ್ಭದಲ್ಲಿ...

ಪ್ರಧಾನಿ ಮೋದಿ ರೋಡ್ ಶೋ ಸಮಯ ಬದಲಾವಣೆ

ಮಂಗಳೂರು: ಪ್ರಧಾನಿ ನರೇಂದ್ರ ಮೋದಿ ಅವರ ರೋಡ್ ಶೋ ಸಮಯದಲ್ಲಿ ಬದಲಾವಣೆಯಾಗಿದ್ದು, ಏ.14ರಂದು ಸಂಜೆ 7.45ಕ್ಕೆ ರೋಡ್ ಶೋ ಆರಂಭವಾಗಲಿದೆ ಎಂದು ಬಿಜೆಪಿ ರಾಜ್ಯ ಘಟಕದ ಚುನಾವಣಾ ಸಂಚಾಲಕ ವಿ. ಸುನಿಲ್ ಕುಮಾರ್...