Wednesday, April 24, 2024

ಪ್ರವೀಣ್ ನೆಟ್ಟಾರು ಕನಸಿನ ಮನೆಗೆ ಶಿಲಾನ್ಯಾಸ : ಕೊಟ್ಟ ಮಾತನಂತೆ ಮನೆ ನಿರ್ಮಾಣಕ್ಕೆ ಶಿಲಾನ್ಯಾಸ ನೆರವೇರಿಸಿದ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲು

ದುಷ್ಕರ್ಮಿಗಳಿಂದ ಹತ್ಯೆಯಾದ ಬಿಜೆಪಿ ಯುವ ನಾಯಕ ಬೆಳ್ಳಾರೆಯ ಪ್ರವೀಣ್ ನೆಟ್ಟಾರು ಅವರ ಕನಸಿನ ಮನೆಗೆ ಬಿಜೆಪಿ ರಾಜ್ಯಾಧ್ಯಕ್ಷ ಸಂಸದ ನಳಿನ್ ಕುಮಾರ್ ಕಟೀಲ್ ಶಂಕು ಸ್ಥಾಪನೆ ನೇರವೆರಿಸಿದರು.

ಕೆಲ ದಿನಗಳ ಹಿಂದೆ ಪ್ರವೀಣ್ ಕುಟುಂಬಸ್ಥರಿಗೆ ಭರವಸೆ ನೀಡಿದ್ದ ಬಿಜೆಪಿ ರಾಜ್ಯಾಧ್ಯಕ್ಷ ಸಂಸದ ನಳಿನ್ ಕುಮಾರ್ ಕಟೀಲ್ ಅವರು ಕೊಟ್ಟ ಮಾತಿನಂತೆ ಪ್ರವೀಣ್ ಕುಟುಂಬದ ಬೆನ್ನಿಗೆ ನಿಂತಿದ್ದು, ಇಂದು ಬೆಳಗ್ಗೆ 9.30ಕ್ಕೆ ದಿ.ಪ್ರವೀಣ್ ಕನಸಿನ ಮನೆಗೆ ಪ್ರವೀಣ್ ಸಮಾಧಿ ಬಳಿಯ ಜಾಗದಲ್ಲೇ 2.700 ಚ.ಅಡಿಯ ನೂತನ ಮನೆ ನಿರ್ಮಾಣಕ್ಕೆ ಗುದ್ದಲಿ ಪೂಜೆ ನೇರವೇರಿಸದರು. ಮೊಗರೋಡಿ ಕನ್ಸ್ ಸ್ಟ್ರೆಕ್ಷನ್ ಕಂಪನಿಗೆ ಮನೆ ನಿರ್ಮಾಣದ ಜವಾಬ್ದಾರಿಯನ್ನು ವಹಿಸಿದ್ದಾರೆ.

ಈ ಸಂದರ್ಭದಲ್ಲಿ ಸಚಿವ ಕೋಟಾ ಶ್ರೀನಿವಾಸ ಪೂಜಾರಿ, ಸಚಿವ ಎಸ್.ಅಂಗಾರ ಶಾಸಕ ಸಂಜೀವ ಮಠಂದೂರು, ಪ್ರವೀಣ್ ಪತ್ನಿ ನೂತನ ಹಾಗೂ ಕುಟುಂಬಿಕರು ಉಪಸ್ಥಿತರಿದ್ದರು.

More from the blog

ಬಸ್ ನಲ್ಲಿ ಯುವತಿಗೆ ಕಿರುಕುಳ : ಸಂತ್ರಸ್ತ ಯುವತಿಯ ಮನೆಗೆ ಡಾ| ಪ್ರಭಾಕರ್ ಭಟ್ ಭೇಟಿ

ಬಂಟ್ವಾಳ:ಬಸ್ ನಲ್ಲಿ ಪ್ರಯಾಣಿಸುತ್ತಿದ್ದ ಯುವತಿಯೋರ್ವಳಿಗೆ ಗುಂಡ್ಯದಲ್ಲಿ ಕಿರುಕುಳ ನೀಡಿದ ಘಟನೆ ನಡೆದಿದ್ದು, ಸಂತ್ರಸ್ತ ಯುವತಿಯ ಮನೆಗೆ ಆರ್.ಎಸ್.ಎಸ್.ಪ್ರಮುಖರಾದ ಡಾ| ಪ್ರಭಾಕರ್ ಭಟ್ ಬೇಟಿ ನೀಡಿ ಪ್ರಕರಣವನ್ನು ದೈರ್ಯವಾಗಿ ಎದುರಿಸಿದ ಯುವತಿಯ ಕಾರ್ಯಕ್ಕೆ ಮೆಚ್ಚುಗೆ...

ಬಿಜೆಪಿ ಗ್ಯಾರಂಟಿ ಬಿಜೆಪಿಯವರ ಬಾಯಲ್ಲಿದೆ, ಕಾಂಗ್ರೆಸ್ ಗ್ಯಾರಂಟಿ ಜನರ ಕೈಯಲ್ಲಿದೆ- ಮಾಜಿ ಸಚಿವ ಬಿ.ರಮಾನಾಥ ರೈ

ಕಾಂಗ್ರೆಸ್ ಗ್ಯಾರಂಟಿ ಸರಿಯಾ? ಮೋದಿ ಗ್ಯಾರಂಟಿಯಾ? ಇದು ಚರ್ಚೆಯಾಗಬೇಕಿದೆ, ಕೇಂದ್ರದ ಬಿಜೆಪಿ ಸರಕಾರ ವಚನ ಭ್ರಷ್ಟ ಸರಕಾರವಾಗಿದೆ, ಬಿಜೆಪಿ ಗ್ಯಾರಂಟಿ ಬಿಜೆಪಿಯವರ ಬಾಯಲ್ಲಿದೆ,ಕಾಂಗ್ರೆಸ್ ಗ್ಯಾರಂಟಿ ಜನರ ಕೈಯಲ್ಲಿದೆ ಎಂದು ಮಾಜಿ ಸಚಿವ ಬಿ.ರಮಾನಾಥ...

ಕೆ.ಎಸ್.ಎಸ್.ಕಾಲೇಜ್: ಅಧ್ಯಯನ ವಿನಿಮಯ ಕಾರ್ಯಕ್ರಮ 

ಕುಕ್ಕೆಶ್ರೀ ಸುಬ್ರಹ್ಮಣ್ಯೇಶ್ವರ ಮಹಾ ವಿದ್ಯಾಲಯದ ವಾಣಿಜ್ಯಶಾಸ್ತ್ರ ಮತ್ತು ಉದ್ಯಮಾಡಳಿತ ವಿಭಾಗವು ಕಾಲೇಜಿನ ಆಂತರಿಕ ಗುಣಮಟ್ಟ ಭರವಸಾ ಕೋಶದ ಆಶ್ರಯದಲ್ಲಿ ಶ್ರೀರಾಮ ಪ್ರಥಮ ದರ್ಜೆ ಮಹಾವಿದ್ಯಾಲಯದೊಂದಿಗೆ ಮಾಡಿಕೊಂಡ ಎಂ.ಓ.ಯು .ಪ್ರಕಾರ ಅಧ್ಯಯನ ವಿನಿಮಯ ಕಾರ್ಯಕ್ರಮ...

ವಿಟ್ಲದಲ್ಲಿ ಬಿಜೆಪಿಯಿಂದ ರೋಡ್ ಶೋ: ಮತಯಾಚನೆ 

ವಿಟ್ಲ: ದ.ಕ ಜಿಲ್ಲಾ ಲೋಕಸಭಾ ಚುನಾವಣೆ ಬಿಜೆಪಿ ಅಭ್ಯರ್ಥಿ ಬ್ರಿಜೇಶ್ ಚೌಟ ಪರ ವಿಟ್ಲದಲ್ಲಿ ಬಿಜೆಪಿಯಿಂದ ರೋಡ್ ಶೋ ನಡೆಯಿತು. ವಿಟ್ಲದ ಜೈನ ಬಸದಿಯಿಂದ ಹೊರಟ ರೋಡ್ ಶೋ ವಿಟ್ಲ ಮುಖ್ಯ ಪೇಟೆಯಲ್ಲಿ ಸಂಚರಿಸಿ,...