Monday, April 8, 2024

ಕಾಂಚನ ಪ್ರೌಢಶಾಲೆಯಲ್ಲಿ ಕನ್ನಡ ರಾಜ್ಯೋತ್ಸವ ಹಾಗೂ ಗಮಕ ವಾಚನ ಕಾರ್ಯಕ್ರಮ

ಶ್ರೀ ಧರ್ಮ ಸ್ಥಳ ಮಂಜುನಾಥೇಶ್ವರ ಶಿಕ್ಷಣ ಸಂಸ್ಥೆಗಳ ಆಡಳಿತಕ್ಕೆ ಒಳಪಟ್ಟ ಕಾಂಚನ ವೆಂಕಟ ಸುಬ್ರಹ್ಮಣ್ಯಂ ಸ್ಮಾರಕ ಪ್ರೌಢ ಶಾಲೆ ಕಾಂಚನ ಇಲ್ಲಿ ಕನ್ನಡ ರಾಜ್ಯೋತ್ಸವ ವನ್ನು ಗಮಕವಾಚನದೊಂದಿಗೆ ಅದ್ದೂರಿಯಾಗಿ ಆಚರಿಸಲಾಯಿತು.
ಸಭಾ ಕಾರ್ಯಕ್ರಮದಲ್ಲಿ ಅಧ್ಯಕ್ಷ ಸ್ಥಾನದಿಂದ ಮುಖ್ಯೋಪಾಧ್ಯಾಯರಾದ ಸೂರ್ಯ ಪ್ರಕಾಶ ಇವರು ಮಾತನಾಡುತ್ತಾ ಎಲ್ಲ ಭಾಷೆಗಳ ಅರಿವನ್ನು ಹೊಂದುವ ಜೊತೆ ಕನ್ನಡವನ್ನು ಉಳಿಸಿ ಬೆಳೆಸುವ ಜವಾಬ್ದಾರಿ ನಮಗೆಲ್ಲರಿಗೂ ಇದೆ ಎನ್ನುವುದನ್ನು ತೀಳಿಸಿದರು.
ಮುಖ್ಯ ಅತಿಥಿಗಳಾದ ಗೀತಾ ಚಂದ್ರಶೇಖರ್ ತಾಳ್ತಜೆ ಇವರು ಕರ್ನಾಟಕ ಹೆಸರಿನ ಹಿನ್ನಲೆ ಹಾಗೂ ಕನ್ನಡವನ್ನು ಮಾತನಾಡುವ ಅನಿವಾರ್ಯತೆಯನ್ನು ಹೇಳಿದರು. ಕನ್ನಡ ಶಿಕ್ಷಕಿಯಾದ ಮಂಜುಳ ಇವರು ಪ್ರಾಸ್ತಾವಿಕವಾಗಿ ಮಾತನಾಡಿದರು. ಪೂರ್ವ ವಿದ್ಯಾರ್ಥಿ ಸಂಘದ ಅಧ್ಯಕ್ಷರಾದ ಕೃಷ್ಣ ಪ್ರಸಾದ ಅಂಬಟೆಮಾರು ಹಾಗೂ ಶಿಕ್ಷಕ ರಕ್ಷಕ ಸಃಘದ ಅಧ್ಯಕ್ಷರಾದ ವೇಣುಗೋಪಾಲ ನಾಯಕ್ ಕುಳ್ಳಜೆ ಇವರು ವೇದಿಕೆಯಲ್ಲಿ ಉಪಸ್ಥಿತರಿದ್ದರು.
ವಿದ್ಯಾರ್ಥಿಗಳಾದ ದಿವ್ಯಾ, ನೇಹಾ, ಶ್ರದ್ಧಾ ಇವರು ಭಾಷಣವನ್ನು ಮಾಡಿದರು. ಲೀಕ್ಷಿತ ಮತ್ತು ನಿಕ್ಷಿತಾ ಇವರು ಕಾರ್ಯಕ್ರಮ ನಿರ್ವಹಿಸಿದರು.
ಬಳಿಕ ಸಾಹಿತ್ಯಾಭಿರುಚಿಯನ್ನು ಮೂಡಿಸುವ ಸಲುವಾಗಿ ಗಮಕವಾಚನದಲ್ಲಿ ಪ್ರಸಿದ್ಧಿ ಹೊಂದಿರುವ ಧರ್ಮಸ್ಥಳದ ಜಯರಾಮ ಕುದ್ರೆತ್ತಾಯ ಮತ್ತು ಗಮಕ ಪ್ರವಚನಕಾರರಾದ ಸುರೇಶ್ ಕುದ್ರೆಂತ್ತಾಯ ರವರ ನೇತೃತ್ವದಲ್ಲಿ ಗಮಕ ವಾಚನ ಪ್ರವಚನ ಕಾರ್ಯಕ್ರಮವು ನಡೆಯಿತು.
ಕಾರ್ಯಕ್ರಮದ ಕೊನೆಯಲ್ಲಿ ಅತಿಥಿಗಳನ್ನು ಮುಖ್ಯೋಪಾಧ್ಯಾಯರು ಶಾಲು ಹೊದಿಸಿ ಸನ್ಮಾನಿಸಿದರು.

More from the blog

ಏಪ್ರಿಲ್ 14ರಂದು ಮಂಗಳೂರಿಗೆ ಪ್ರಧಾನಿ ಮೋದಿ

ಬೆಂಗಳೂರು: ರಾಜ್ಯದಲ್ಲಿ ಪ್ರಧಾನಿ ನರೇಂದ್ರ ಮೋದಿ ಚುನಾವಣಾ ಪ್ರಚಾರ ಸಮಾವೇಶ ಚಿಕ್ಕಬಳ್ಳಾಪುರದಿಂದ ಮಂಗಳೂರಿಗೆ ಸ್ಥಳಾಂತರಗೊಂಡಿದ್ದು, ಅದರಂತೆ, ಏಪ್ರಿಲ್ 14 ರಂದು ದ.ಕ ಲೋಕಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಸಮಾವೇಶ ನಡೆಯಲಿದೆ.. ಏಪ್ರಿಲ್ 14ಕ್ಕೆ ಬೆಂಗಳೂರಿಗೆ ಆಗಮಿಸಲಿರುವ...

ದ್ವಿತೀಯ ಪಿಯುಸಿ ಫಲಿತಾಂಶ ಶೀಘ್ರ ಪ್ರಕಟ

ಬೆಂಗಳೂರು: ಕರ್ನಾಟಕ ಪದವಿ ಪೂರ್ವ ಶಿಕ್ಷಣ ಇಲಾಖೆಯು ದ್ವಿತೀಯ ಪಿಯುಸಿ ಪರೀಕ್ಷೆಯ ಫಲಿತಾಂಶವನ್ನು ಏಪ್ರಿಲ್ 3 ನೇ ವಾರದಲ್ಲಿ ಪ್ರಕಟಿಸುವ ಸಾಧ್ಯತೆ ಇದೆ ಎಂದು ತಿಳಿದುಬಂದಿದೆ. ಫಲಿತಾಂಶ ಪ್ರಕಟಗೊಂಡ ನಂತರ, ಪರೀಕ್ಷೆ ಬರೆದಿರುವ ಅಭ್ಯರ್ಥಿಗಳು...

ಇಂದು ಸಂಪೂರ್ಣ ಸೂರ್ಯಗ್ರಹಣ : ಈ ರಾಶಿಯವರಿಗೆ ಕಾದಿದೆ ಆಪತ್ತು

ವರ್ಷದ ಮೊದಲ ಸೂರ್ಯಗ್ರಹಣ ಇಂದು ಸಂಭವಿಸುತ್ತಿದೆ. ಸುಮಾರು 54 ವರ್ಷಗಳ ಬಳಿಕ ಸಂಭವಿಸುತ್ತಿರುವ ಸುದೀರ್ಘ ಸೂರ್ಯಗ್ರಹಣ ಇದಾಗಿದ್ದು, ಮಾಹಿತಿಗಳ ಪ್ರಕಾರ ಏಪ್ರಿಲ್ 8 ರಂದು ಸೂರ್ಯಗ್ರಹಣ ರಾತ್ರಿ 9.12 ರಿಂದ 1.25 ರವರೆಗೆ...

ಬಿಳಿನೆಲೆಗೆ ಬಂದ ನಕ್ಸಲರಿಗೆ ಶೋಧ : 6 ಮೊಬೈಲ್‌, 1 ಲ್ಯಾಪ್‌ಟಾಪ್‌ ಚಾರ್ಜ್‌ ಮಾಡಿಸಿಕೊಂಡ ನಕ್ಸಲರು

ಸುಬ್ರಹ್ಮಣ್ಯ: ಕಡಬ ತಾಲೂಕಿನ ಬಿಳಿನೆಲೆ ಗ್ರಾಮದ ಚೇರು ಎಂಬಲ್ಲಿನ ಅರಣ್ಯದಂಚಿನ ಮನೆಗೆ ಗುರುವಾರ ರಾತ್ರಿ ಭೇಟಿ ನೀಡಿದ್ದ ಮುಸುಕುಧಾರಿ, ಶಸ್ತ್ರಧಾರಿ ನಕ್ಸಲರ ತಂಡದಲ್ಲಿ 6 ಮಂದಿ ಇದ್ದರು ಎನ್ನುವುದು ದೃಢಪಟ್ಟಿದೆ. ಬಂದವರೆಲ್ಲರೂ ಒಂದೇ ರೀತಿಯ...